ಆರೋಗ್ಯ

ಗರ್ಭಿಣಿಯರು ಕೇಸರಿ, ಚಾಕಲೇಟ್‌ ತಿಂದರೆ ಮಗುವಿನ ಬಣ್ಣ ಬದಲಾಗುತ್ತದೆಯೇ? ಇಲ್ಲಿದೆ ಉತ್ತರ…

Pinterest LinkedIn Tumblr

ಹಿಂದಿನ ಕಾಲದಿಂದಲೂ ಜನರ ನಂಬಿಕೆ ಏನೆಂದರೆ ಪ್ರೆಗ್ನೆನ್ಸಿ ಸಮಯದಲ್ಲಿ ಹೆಚ್ಚು ಕೇಸರಿ ಸೇವನೆ ಮಾಡಿದರೆ ಹುಟ್ಟಲಿರುವ ಮಗುವಿನ ತ್ವಚೆ ಹಾಗೂ ಬಣ್ಣ ಕ್ಲಿಯರ್‌ ಹಾಗೂ ಬಿಳಿಯಾಗುತ್ತದೆ ಎಂದು. ಆದರೆ ಇದು ಸುಳ್ಳು. ಯಾವ ಆಹಾರ ಸೇವನೆಯಿಂದಲೂ ಮಕ್ಕಳ ಬಣ್ಣದ ಮೇಲೆ ಬದಲಾವಣೆಯಾಗೋದಿಲ್ಲ. ಬಣ್ಣ ಬರೋದು ಜೆನೆಟಿಕ್‌ನಿಂದ.

ಇಲ್ಲಿ ಕೆಲವೊಂದು ಆಹಾರಗಳ ವಿವರಣೆ ನೀಡಲಾಗಿದೆ. ಆ ಆಹಾರಗಳ ಸೇವನೆಯಿಂದ ಮಕ್ಕಳ ಮೇಲೆ ಏನಾದರು ಸಮಸ್ಯೆ ಉಂಟಾಗಲಿದೆಯೇ ಎಂಬುದನ್ನು ತಿಳಿಸಿದ್ದೇವೆ ನೋಡಿ…

ಚಾಕಲೇಟ್‌ : ಹಲವಾರು ಜನರು ಇಲ್ಲಿವರೆಗೆ ನಂಬಿಕೊಂಡು ಬಂದಿರುವಂತೆ ಡಾರ್ಕ್ ಆಹಾರ ಅಂದರೆ ಚಾಕಲೇಟ್‌, ಕೆಫೇನ್‌ ಮತ್ತು ಡೇಟ್ಸ್‌ ಸೇವನೆ ಮಾಡಿದರೆ ಮಕ್ಕಳ ಬಣ್ಣ ಡಾರ್ಕ್‌ ಆಗುತ್ತದೆ ಎಂದು ಹೇಳುತ್ತಾರೆ. ಅದೆ ರೀತಿ ಹಾಲಿನ ಉತ್ಪನ್ನಗಳ ಸೇವನೆಯಿಂದ ಮಗು ಫೇರ್‌ ಆಗುತ್ತದೆ ಎನ್ನಲಾಗುತ್ತದೆ. ಆದರೆ ಇದೆಲ್ಲವೂ ಸುಳ್ಳು. ಈ ಸಮಯದಲ್ಲಿ ಚಾಕಲೇಟ್‌ ಅವಾಯ್ಡ್‌ ಮಾಡಲು ಹೇಳಲಾಗುತ್ತದೆ ಯಾಕೆಂದರೆ ಇದರಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿರುತ್ತದೆ. ಅದೆ ರೀತಿ ಕೆಫೆನ್‌ನಿಂದ ಹೈಪರ್‌ ಟೆನ್ಶನ್‌ ಉಂಟಾಗುವುದರಿಂದ ಅದನ್ನು ಸಹ ಅವಾಯ್ಡ್ ಮಾಡಲು ಹೇಳಲಾಗುತ್ತದೆ.

ಕೇಸರಿ : ಮಕ್ಕಳ ಬಣ್ಣ ಜೆನೆಟಿಕ್‌ ಮೇಲೆ ಅವಲಂಭಿತವಾಗಿದೆ. ಇದಕ್ಕೆ ಯಾವುದೆ ಆಹಾರ ಪ್ರಭಾವ ಬೀರೋದಿಲ್ಲ. ಪ್ರತಿದಿನ ಕೇಸರಿ ಸೇವನೆ ಮಾಡಿದರೆ ಅದರಿಂದ ಮಗುವಿನ ಬಣ್ಣ ಬಿಳಿಯಾಗೋದಿಲ್ಲ. ಪ್ರತಿದಿನ ಹಾಲು ಸೇವನೆ ಮಾಡಿದರೆ ಕ್ಯಾಲ್ಶಿಯಂ ಹೆಚ್ಚುತ್ತದೆ. ಆದರೆ ಅದರಿಂದ ಮಕ್ಕಳ ತ್ವಚೆಯ ಬಣ್ಣ ಬದಲಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಸ್ಪೈಸಿ ಆಹಾರ : ಗರ್ಭಿಣಿ ಮಹಿಳೆಯರು ಸ್ಪೈಸಿ ಆಹಾರ ಸೇವನೆ ಮಾಡಬಾರದು ಎಂದು ಹೇಳಲಾಗುತ್ತದೆ. ಇದರಿಂದ ಹೊಟ್ಟೆಯ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಮಲಬದ್ಧತೆ ಸಮಸ್ಯೆ ಕಾಡುತ್ತದೆ ಎನ್ನಲಾಗುತ್ತದೆ. ಹೆಚ್ಚು ಸ್ಪೈಸಿ ಆಹಾರ ಸೇವನೆ ಮಾಡಿದರೆ ಮಗುವಿನ ದೃಷ್ಟಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದು ಸುಳ್ಳು.

ಆಲ್ಕೋಹಾಲ್‌ : ಪ್ರೆಗ್ನೆಂಟ್‌ ಸಮಯದಲ್ಲಿ ಆಲ್ಕೋಹಾಲ್‌ ಸೇವನೆ ಮಾಡಲೇಬಾರದು. ಪ್ರೆಗ್ನೆನ್ಸಿ ಸಮಯದಲ್ಲಿ ಇದನ್ನು ಸೇವನೆ ಮಾಡಿದರೆ ಹುಟ್ಟುವ ಮಕ್ಕಳಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.

ಮಾಂಸಾಹಾರ : ಮಾಂಸದಲ್ಲಿ ಹೆಚ್ಚಿನ ಪ್ರಮಾಣದ ಪ್ರೊಟೀನ್‌ ಅಂಶವಿದೆ. ಇದನ್ನು ಸೇವಿಸಿದರೆ ಮಗುವಿನ ಲುಕ್‌ನಲ್ಲಿ ಬದಲಾವಣೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಈ ಸಮಯದಲ್ಲಿ ಕೇವಲ ಸೀ ಫುಡ್‌ ಸೇವನೆಯಿಂದ ದೂರವಿರಬೇಕು. ಹಾಗಂತ ಸಂಪೂರ್ಣವಾಗಿ ಅವಾಯ್ಡ್‌ ಮಾಡೋದಲ್ಲ.

Comments are closed.