ಆರೋಗ್ಯ

ಪೂಜೆ ಮತ್ತು ಮುಡಿಯಲು ಬಳಸುವಂತಹ ಹೂವುಗಳಲ್ಲೂ ಇದೆ ಆರೋಗ್ಯಕರ ಅಂಶ

Pinterest LinkedIn Tumblr

ಎಲ್ಲರೂ ತಮ್ಮ ತಮ್ಮ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸುತ್ತೇವೆ. ನಮ್ಮ ಆರೋಗ್ಯಕ್ಕಾಗಿ ಉತ್ತಮ ಆಹಾರ. ವ್ಯಾಯಾಮ. ಗಳೆಂದು ವಿಧವಿಧವಾದ ಪ್ರಯತ್ನಗಳೆಲ್ಲವನ್ನು ಮಾಡುತ್ತೇವೆ.

ಏನಾದರೂ ಕಾಯಿಲೆ ಬಂದರೆ ಸಾಕು ವೈದ್ಯರ ಬಳಿಗೆ ಹೋಗುತ್ತೇವೆ ಅಲ್ಲಿ ವೈದ್ಯರು ತಿಳಿಸುವುದು ಹೆಚ್ಚು ತರಕಾರಿ. ಹಣ್ಣುಗಳ ಸೇವನೆ ಮಾಡಿ ಎಂದು ಹೇಳಿ ಮಾತ್ರೆ .ಟಾನಿಕ್ ಗಳನ್ನು ಕೊಟ್ಟು ಕಳುಹಿಸುತ್ತರೆ. ತರಕಾರಿ ಹಣ್ಣುಗಳಲ್ಲಿ ಹೆಚ್ಚು ಪೌಷ್ಟಿಕಾಂಶ ಇದೆ. ಇದು ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಅದೇ ರೀತಿ ನಾವು ದೇವರ ಪೂಜೆ. ಮತ್ತು ತಲೆಯ ಮುಡಿಗೆ ಬಳಸುವಂತಹ ಹೂ ಗಳಲ್ಲೂ ನಮ್ಮ ಆರೋಗ್ಯವನ್ನು ಕಾಪಾಡುವ ಅಂಶಗಳಿವೆ ಗೊತ್ತಾ ನಿಮಗೆ.

ಹೌದ ಯಾವ ಹೂವಿನಲ್ಲಿ. ಯಾವ ರೀತಿಯ ಆರೋಗ್ಯ ಅಂಶಗಳಿವೆ ಎಂಬ ಪ್ರಶ್ನೆಗಳು ಮೂಡುತ್ತಿದಿಯ ಬನ್ನಿ ಅದಕ್ಕೆಲ್ಲಾ ಉತ್ತರ ನೋಡೋಣ..

ಎಲ್ಲರಿಗು ತುಂಬಾ ಪರಿಚಿತವಾಗಿರುವ ದಾಸವಾಳ ಇದನ್ನು ತಲೆಯ ಕೂದಲಿನ ಆರೈಕೆಗೆ ಬಳಸಬಹುದು ಎಂದು ಗೊತ್ತು. ಅದೇ ರೀತಿ ಇದನ್ನು ಚಹಾ ಮಾಡಲು. ಅಡುಗೆಯ ಅಲಂಕಾರಕ್ಕೂ ಬಳಸಬಹುದು. ಇದು ನಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ರಕ್ತ ಚಲನೆಯನ್ನು ಸುಗಮಗೊಳ್ಳಿಸುತ್ತದೆ. ಹೃದಯದ ಸಮಸ್ಯೆಗೆ. ದೇಹದ ಉಷ್ಣಾಂಶ ಕಡಿಮೆ ಮಾಡಲು. ಸಹಾಯವಾಗುತ್ತದೆ.

ಮಲ್ಲಿಗೆಯ ಕಂಪು ಎಲ್ಲರ ಮನವನ್ನೂ ಮುದಗೊಳಿಸುವಂತದ್ದು. ಮನೆಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮದಲ್ಲೂ ಇದು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ.ಸುವಾಸನೆಗೆ ಹೆಸರುವಾಸಿಯಾಗಿರುವ ಮಲ್ಲಿಗೆ ಹೂವನ್ನು ಟೀ ಮತ್ತು ಸಲಾಡ್ ಗಳಿಗೆ ಬಳಸಬಹುದು. ಇದು ಕ್ಯಾನ್ಸರ್ ಹಾಗೂ ವೈರಸ್ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ.

ಚೆಂಡು ಹೂ ಇದು ಹಳದಿ ಬಣ್ಣವನ್ನು ಹೊಂದಿದ್ದು. ಇದು ಗಾಯಗಳಿಗೆ ಔಷಧಿಯಾಗಿ ಬಳಸುತ್ತಾರೆ.ಹಾಗೂ ಯಾವುದೇ ರೀತಿಯ ಕಣ್ಣಿನ ಸಮಸ್ಯೆಗಳಿದ್ದರು ಚೆಂಡು ಹೂ ಅವುಗಳಿಗೆ ಔಷಧಿಯಾಗಿದೆ.ಹಾಗೂ ಹೊಟ್ಟೆಯಲ್ಲಿನ ಜಂತುಹುಳುಗಳು. ಹಲ್ಲಿನಲ್ಲಿ ಇರುವ ಬ್ಯಾಕ್ಟೀರಿಯಾ. ಮುಖದ ಮೊಡವೆ. ಕಲೆ. ಹಾಗೂ ಮಹಿಳೆಯರಿಗೆ ಪಿರಿಯಡ್ಸ್ ಸಮಯದಲ್ಲಿ ಆಗುವ ನೋವುಗಳಿಗೂ ಚೆಂಡು ಹೂ ಒಳ್ಳೆಯ ಔಷಧಿಯಾಗಿದೆ.

ಹೂವುಗಳ ರಾಜ ಎಂದು ಕರೆಸಿಕೊಳ್ಳುವ ಕೆಂಪು ಗುಲಾಬಿಯ ಹೂ ನೋಡಲು ಮುಡಿಯಲು ಎಷ್ಟು ಚಂದವಾಗಿದಿಯೋ ಹಾಗೆಯೇ ಇದು ಆರೋಗ್ಯ ಸಮಸ್ಯೆಗಳಾದ ಮಲಬದ್ಧತೆ. ಹೊಟ್ಟೆ ಉರಿ. ಅಲ್ಸರ್. ಕೆಮ್ಮು. ಬಾಯಿಯ ವಾಸನೆ. ಮೊಡವೆ. ಕಲೆಗಳು. ತುರಿಕೆ. ಕೂದಲಿನ ಆರೈಕೆ. ಕಣ್ಣುಗಳ ತೊಂದರೆ.ಗಳಿಗೆ ಉತ್ತಮ ಔಷಧಿಯು ಸಹ ಆಗಿದೆ.

ಸೇವಂತಿಗೆ ಪ್ರಾಚೀನ ಕಾಲದಿಂದಲೂ ಜಪಾನಿಯರು ಸೂರ್ಯನೊಂದಿಗೆ ಸೇವಂತಿಗೆ ಹೋಲಿಸುತ್ತಾರೆ. ಈ ಹೂವಿನ ಚಿತ್ರಣ ಜಪಾನಿನ ರಾಷ್ಟ್ರೀಯ ಧ್ವಜದ ಮೇಲೆ, ನಾಣ್ಯಗಳ ಮೇಲೆ, ರಾಷ್ಟ್ರದ ಉನ್ನತ ಕ್ರಮಾಂಕದ ಮೇಲೆ ಇದೆ.ಜೊತೆಗೆ ಈ ಹೂವಿನಲ್ಲಿ ಉರಿಯೂತ. ಕ್ಯಾನ್ಸರ್ ಸಮಸ್ಯೆಗಳು. ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು. ಸಹ ಇದು ಸಹಾಯಕವಾಗಿದೆ.

ಹೂವಿನ ಹಾಸಿಗೆಯಂತೆ ಕಾಣುವ ಪ್ಯಾನ್ಸಿಸ್ ಹೂವು ಅಂದವಾಗಿ ಕಾಣುವ ಜೊತೆಗೆ ಇದು ಪೊಟ್ಯಾಸಿಯಂ ಮತ್ತು ಮಿನರಲ್ಸ್ ಗಳನ್ನು ಹೊಂದಿದ್ದು ಇದು ಹೃದಯ ಸಂಬಂಧಿ ಕಾಯಿಲೆಗಳು. ಕ್ಯಾನ್ಸರ್. ಕಿಡ್ನಿ ಸಮಸ್ಯೆ. ರಕ್ತದ ಒತ್ತಡದ ಸಮಸ್ಯೆಗಳನ್ನು ನಿವಾರಿಸುತ್ತದೆ.

ಗುಲಾಬಿಯ ಜಾತಿಯನ್ನೇ ಹೊಂದಿರುವ ಆದರೆ 4 ರಿಂದ 5 ದಳಗಳನ್ನು ಮಾತ್ರ ಹೊಂದಿರುವ ಸುಂದರ ಹೂವು ಲ್ಯಾವೆಂಡರ್ ಹೂವು. ಇದನ್ನು ಐಸ್ ಕ್ರೀಮ್ ಗೆ ಹೆಚ್ಚು ಬಳಕೆ ಮಾಡುತ್ತಾರೆ. ಇದು ನಮ್ಮ ಚರ್ಮವನ್ನು ಆರೈಕೆ ಮಾಡಿಕೊಳ್ಳಲು ಉತ್ತಮ ಔಷಧಿ ಯಾಗಿದೆ. ಜೊತೆಗೆ ಕೀವು. ಹೊಟ್ಟು ನಿವಾರಕ ಔಷಧಿಯಾಗಿದೆ.

ಅಡುಗೆಯ ಉತ್ತಮ ಸುಗಂಧಕ್ಕೆ ಹಾಗೂ ರುಚಿಗೆ ಹೆಚ್ಚು ಬಳಸುವ ದಾಲ್ಚಿನ್ನಿ ಯು ನಮ್ಮ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಗುಣ ಹೊಂದಿದೆ. ಕ್ಯಾನ್ಸರ್. ಗಾಯಗಳನ್ನು ಗುಣಪಡಿಸುವ. ಉರಿಯೂತ. ದೇಹಕ್ಕೆ ಶಕ್ತಿ ನೀಡುವ ಕೆಲಸವನ್ನು ಇದು ಮಾಡುತ್ತದೆ.

ತುಂಬಾ ಇಷ್ಟ ಪಟ್ಟು ತಿನ್ನುವ ದಾಳಿಂಬೆ ಹಣ್ಣಿನ ಹೂವುಗಳು ನಮ್ಮ ಹೃದಯದ ಸಮಸ್ಯೆ. ಮುಟ್ಟಿನ ಸಮಸ್ಯೆ. ಕ್ಯಾನ್ಸರ್. ಮೂಗಿನಲ್ಲಿ ರಕ್ತ ಸೋರುವಿಕೆ. ಜಂತು ಹುಳು ಸಮಸ್ಯೆ. ಮೊಡವೆ ಸಮಸ್ಯೆ. ಸಕ್ಕರೆ ಕಾಯಿಲೆ. ಗಳನ್ನು ಗುಣ ಪಡಿಸುತ್ತದೆ.

ಶಿವನಿಗೆ ಪ್ರಿಯವಾದ ಹಾಗೂ ರುದ್ರಾಪುಷ್ಪ ಎಂದು ಜನಜನಿತ ಹೂವು ತುಂಬೆ ಹೂವು ನೆಗಡಿ. ಬೆನ್ನುನೋವು. ಕೀಲು ನೋವು. ಮುಟ್ಟಿನ ಸಮಸ್ಯೆ. ಚರ್ಮ ರೋಗಗಳು. ಗುಣವಾಗುತ್ತವೆ.

ನೋಡಿದರಲ್ಲೂ ಕೇವಲ ಹೂವುಗಳು ಮುಡಿಯಲು. ಮತ್ತು ಪೂಜೆಗೆ ಬಳಕೆಯಾಗದೆ ಮನುಷ್ಯನ ಆರೋಗ್ಯದ ಸಮಸ್ಯೆಗಳಿಗೂ ಬಳಕೆಯಾಗುತ್ತವೆ.

Comments are closed.