ಕರಾವಳಿ

ಸ್ವತಂತ್ರ ಅಭ್ಯರ್ಥಿಯಾಗಿ ಸ್ಫರ್ಧೆ – ಮುಂದಿನ ಪ್ರಧಾನ ಮಂತ್ರಿ ನಾನೇ… : ಹುಚ್ಚ

Pinterest LinkedIn Tumblr

ಮಂಗಳೂರು, ಎಪ್ರಿಲ್.11: ಮುಂಬರುವ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ತಾನು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಒಂದು ವೇಳೆ ಈ ಚುನಾವಣೆಯಲ್ಲಿ ಸೋತರೆ ಮುಂದೆ ನಡೆಯಲಿರುವ ಲೋಕಸಭಾ ಚುನಾವಣೆಗೆ ನಿಲ್ಲುತ್ತೇನೆ. ಚುನಾವಣೆಯಲ್ಲಿ ಗೆದ್ದು ದೇಶದ ಪ್ರಧಾನಿಯಾಗುತ್ತೇನೆ ಎಂದು ಚಿತ್ರ ನಟ, ನಿರ್ದೇಶಕ ಹುಚ್ಚ ವೆಂಕಟ್ ಹೇಳಿಕೊಂಡಿದ್ದಾರೆ.

ಮಂಗಳೂರಿನ ಪತ್ರಿಕಾಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ.ಎರಡು ದಿನಗಳಲ್ಲಿ ಚಿಹ್ನೆಯ ಕುರಿತು ನಿರ್ಧಾರವಾಗಲಿದೆ. ಮತ ಹಾಕುವಂತೆ ಮನೆ ಮನೆಗೆ ಭೇಟಿ ನೀಡಿ ಪ್ರಚಾರ ಮಾಡಲ್ಲ, ಡ್ರಿಂಕ್ಸ್, ಸೀರೆ ಹಂಚಲ್ಲ ಎಂದು ಹೇಳಿದರು.

ಹುಚ್ಚ ವೆಂಕಟ್ ಪಕ್ಷ ಕಟ್ಟಬೇಕು ಅಂದುಕೊಂಡಿದ್ದೆ. ಆದರೆ ಅದು ಸದ್ಯ ಸಾಧ್ಯವಾಗಿಲ್ಲ. ಯಾವುದೇ ಪಕ್ಷಕ್ಕೂ ಹೋಗಲ್ಲ. ಆ ಪಕ್ಷದವರು ಬೇಡದ ಕೆಲಸ ಮಾಡಿದ್ರೆ ನನ್ನ ಹೆಸರು ಹಾಳಾಗುತ್ತದೆ. ನಾನು ಸ್ಪರ್ಧಿಸುತ್ತಿರುವ ಕ್ಷೇತ್ರದ ಜನತೆಯ ಕಷ್ಟ ಅರಿತುಕೊಂಡು ಏನು ಮಾಡಬೇಕಾಗಿತ್ತು. ಏನು ಮಾಡಬಹುದು ಎಂದು ತಿಳಿದುಕೊಂಡು ನಾನು ಕೆಲಸ ಮಾಡಲಿದ್ದೇನೆ.

ಮುಂದಿನ ಪ್ರಧಾನ ಮಂತ್ರಿ ನಾನೇ…

ಪ್ರಧಾನಿ ನರೇಂದ್ರ ಮೋದಿಯವರು ನನ್ನ ಪ್ರತಿಸ್ಪರ್ಧಿ.ದೇಶದ ಪ್ರಧಾನ ಮಂತ್ರಿಯಾಗೋದು ನನ್ನ ಗುರಿಯಾಗಿದ್ದು, ಮುಂದೆ ಎಂಪಿ ಚುನಾವಣೆಗೆ ನಿಲ್ಲುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ಗೆದ್ದು ದೇಶದ ಪ್ರಧಾನಿಯಾಗುವುದು ಖಂಡಿತ ಎಂದು ಹುಚ್ಚ ವೆಂಕಟ್ ಹೇಳಿದ್ದಾರೆ.

ಬರೀ ರಾಜಕೀಯ ವ್ಯಕ್ತಿಗಳು ಮಾತ್ರ ಬದಲಾಗೋದಲ್ಲ ಮತದಾರರು ಬದಲಾವಣೆಯಾಗಬೇಕು. ಹಣ, ಹೆಂಡ ಹಂಚುವ ಕೆಲಸ ನಡೆಯುತ್ತಿದೆ. ಕೆಲವರು ತೆಗೆದುಕೊಂಡು ಮತ ಮಾರಾಟ ಮಾಡುತ್ತಿದ್ದಾರೆ. ಮತ ಹಾಕುವ ಜನತೆ ಇಂತಹ ಹೇಯ ಕೃತ್ಯದಲ್ಲಿ ಭಾಗಿಯಾಗ ಭಾರದು ಎಂದು ಹುಚ್ಚ ವೆಂಕಟ್ ಸಲಹೆ ನೀಡಿದ್ದಾರೆ.

Comments are closed.