ಆರೋಗ್ಯ

ಇವುಗಳಿಂದ ಹಲ್ಲುಜ್ಜಿದರೆ ಖಂಡಿತವಾಗಿಯು ನಿಮ್ಮ ಹಲ್ಲುಗಳ ಬಿಳುಪು ಹೆಚ್ಚುವುದು !

Pinterest LinkedIn Tumblr

ನಕ್ಕಾಗ ಹಲ್ಲು ಮುತ್ತಿನಂತೆ ಹೊಳೆಯುತ್ತಿದ್ದರೆ ಆ ನಗು ನೋಡುಗರಿಗೆ ಮತ್ತಷ್ಟು ಆಕರ್ಷಕ ಅನಿಸುವುದು. ಮುತ್ತಿನಂಥ ಹಲ್ಲುಗಾಗಿ ದಂತ ವೈದ್ಯರನ್ನು ಭೇಟಿಯಾಗ ಬೇಕಾಗಿಲ್ಲ. ಈ ಸರಳ ವಿಧಾನ ಅನುಸರಿಸಿದರೆ ಸಾಕು ಸುಂದರ ಹಲ್ಲುಗಳು ನಿಮ್ಮದಾಗುವುದು.

ತೆಂಗಿನೆಣ್ಣೆ
ಒಂದು ಚಮಚ ತೆಂಗಿನೆಣ್ಣೆ ಬಾಯಿಗೆ ಹಾಕಿ 5 ನಿಮಿಷ ಬಾಯಿ ಮುಕ್ಕಳಿಸಬೇಕು. ಈ ರೀತಿ ಮಾಡಿದರೆ ಹಲ್ಲು ಬೆಳ್ಳಗಾಗುವುದರ ಜತೆಗೆ ಬಾಯಿ ದುರ್ವಾಸನೆ ಇಲ್ಲವಾಗುವುದು.

ಆ್ಯಪಲ್ ಸಿಡರ್‌ವಿನೆಗರ್
ಸ್ವಲ್ಪ ಆ್ಯಪಲ್ ಸಿಡರ್‌ವಿನೆಗರ್ ಅನ್ನು ಬ್ರಷ್‌ಗೆ ಹಾಕಿ ಹಲ್ಲು ತಿಕ್ಕಿ. ಈ ರೀತಿ ಮಾಡಿದರೆ ಹಲ್ಲು ಆಕರ್ಷಕವಾಗಿ ಕಾಣುವುದು.

ನಿಂಬೆಹಣ್ಣಿನ ಸಿಪ್ಪೆ
ನಿಂಬೆಹಣ್ಣಿನ ಸಿಪ್ಪೆಯಿಂದ ಹಲ್ಲನ್ನು ತಿಕ್ಕಿದರೆ ಹಲ್ಲು ಬೆಳ್ಳಗಾಗುವುದು.

ಸ್ಟ್ರಾಬೆರಿ
ಹಲ್ಲು ಹಳದಿ ಬಣ್ಣದಲ್ಲಿದ್ದರೆ ಸ್ಟ್ರಾಬೆರಿಯಿಂದ ತಿಕ್ಕಿದರೆ ಬಿಳುಪು ಹಲ್ಲು ನಿಮ್ಮದಾಗುವುದು.

ಅಡುಗೆ ಸೋಡಾ
ಸ್ವಲ್ಪ ಅಡುಗೆ ಸೋಡಾವನ್ನು ನೀರಿನಲ್ಲಿ ಹಾಕಿ ಕಲೆಸಿ ಬ್ರೆಷ್‌ಗೆ ಹಾಕಿ ಹಲ್ಲುಜ್ಜಿದರೆ ಹಲ್ಲು ಬೆಳ್ಳಗಾಗುವುದು.

Comments are closed.