ರಾಷ್ಟ್ರೀಯ

48 ವರ್ಷ ಪ್ರೀತಿಸಿ ಕೊನೆಗೂ 80ನೇ ವಯಸ್ಸಿನಲ್ಲಿ ಪ್ರೇಯಸಿಯನ್ನು ಮದುವೆಯಾದ ವೃದ್ಧ!

Pinterest LinkedIn Tumblr

ಉದಯ್‍ಪುರ್: 80 ವರ್ಷದ ವೃದ್ಧರೊಬ್ಬರು 48 ವರ್ಷಗಳಿಂದ ಲಿವ್ ಇನ್ ರಿಲೇಶನ್‍ನಲ್ಲಿದ್ದ 76 ವರ್ಷದ ಪ್ರೇಯಸಿ ಜೊತೆ ಮೊದಲ ಪತ್ನಿಯ ಸಮ್ಮತಿಯೊಂದಿಗೆ ರಾಜಸ್ಥಾನ ಉದಯ್‍ಪುರದಲ್ಲಿ ಮದುವೆಯಾಗಿದ್ದಾರೆ.

ದೇವ್‍ದಾಸ್ ಕಸೌಲಾ ಅವರಿಗೆ ಈ ಹಿಂದೆ ಮದುವೆಯಾಗಿತ್ತು. ಮದುವೆಯಾದ ನಂತರ 1970ರಲ್ಲಿ ತಾನು ಪಕ್ಕದ ಗ್ರಾಮದಲ್ಲಿದ್ದ ಗೆಳತಿ ಮಗ್ದುಬಾಯಿ ಜೊತೆ ಓಡಿ ಹೋಗಿದ್ದರು. ನಂತರ ತನ್ನ ಗ್ರಾಮಕ್ಕೆ ಮರಳಿ ಗೆಳತಿಯ ಜೊತೆ ವಾಸಿಸುತ್ತಿದ್ದರು.

ದೇವ್‍ದಾಸ್ ಮೊದಲ ಪತ್ನಿ ಚಂಪಾ ಬಾಯಿ ತನ್ನ ಮಕ್ಕಳ ಮನೆಯಲ್ಲಿ ವಾಸಿಸುತ್ತಿದ್ದು, ದೇವ್‍ದಾಸ್ ತನ್ನ ಪ್ರೇಯಸಿ ಜೊತೆ ಪೂರ್ವಿಕರ ಮನೆಯಲ್ಲಿ ವಾಸವಾಗಿದ್ದರು. ಆದರೆ ಇವರಿಬ್ಬರ ಈ ಸಂಬಂಧಕ್ಕೆ ಯಾವುದೇ ಹೆಸರಿಲ್ಲದ ಕಾರಣ ದೇವ್‍ದಾಸ್‍ರ ಮೊದಲ ಪತ್ನಿಯ ಮಗ ಇವರಿಬ್ಬರನ್ನು ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಲು ಮುಂದಾಗಿದ್ದಾರೆ. ಈ ಮದುವೆಗೆ ಚಂಪಾ ಅನುಮತಿ ನೀಡಿದ್ದರು.

ಭಾಂಜನ ಸಂಪ್ರದಾಯದ ಪ್ರಕಾರ ಮಂಗಳವಾರ ದೇವ್‍ದಾಸ್ ಕಸೌಲಾ ಕುದುರೆ ಮೇಲೆ ಕುಳಿತು ವಧುವಿನ ಮನೆಗೆ ತೆರಳಿದ್ದರು. ನಂತರ ವರನ ಕಡೆಯವರು 50ಕೆ.ಜಿ ಅಕ್ಕಿ ಹಾಗೂ ವಧುವಿನ ಕಡೆಯವರು 10 ಕೆ.ಜಿ ಅಕ್ಕಿ ನೀಡಿದ್ದಾರೆ. ಈ ಅಕ್ಕಿಯಲ್ಲಿ ಭೋಜನವನ್ನು ತಯಾರಿಸಿ ಮದುವೆಗೆ ಬಂದ ಅತಿಥಿಗೆ ನೀಡಿದ್ದರು. ಮಕ್ಕಳು ಹಾಗೂ ಮರಿಮೊಮ್ಮಕ್ಕಳು ಗ್ರಾಮದವರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಸಿಕೊಟ್ಟಿದ್ದಾರೆ.

Comments are closed.