ಆರೋಗ್ಯ

ನಿಮ್ಮ ಸೌಂದರ್ಯ ಹೆಚ್ಚಿಸಲು ಪಪ್ಪಾಯಿ ಬಳಸಿ…ಬ್ಯೂಟಿ ಪಾರ್ಲರ್‌ ಅಗತ್ಯವೇ ಇಲ್ಲ !

Pinterest LinkedIn Tumblr

ಬ್ಯೂಟಿ ಪಾರ್ಲರ್‌ಗೆ ಹೋಗದೆ ಮನೆಯಲ್ಲೇ ಪಪ್ಪಾಯಿ ಬಳಸಿ ಸೌಂದರ್ಯ ಹೆಚ್ಚಿಸುವುದು ಹೇಗೆ ಎಂಬ ಟಿಪ್ಸ್‌ನೀಡಿದ್ದೇವೆ ನೋಡಿ:

1.ಮುಖದಲ್ಲಿ ಕಪ್ಪು ಕಲೆಯೇ?
ಸ್ವಲ್ಪ ಪಪ್ಪಾಯಿ, 1 ಹನಿ ನಿಂಬೆ ರಸ, ಅರ್ಧ ಚಮಚ ಹನಿ ಜೇನು ಹಾಕಿ ಮಿಕ್ಸ್ ಮಾಡಿ ದಿನಾ ಹಚ್ಚಿ, ಕಪ್ಪು ಕಲೆ ಬೇಗನೆ ಮಾಯವಾಗುವುದು.

2. ಒಣ ತ್ವಚೆ ಸಮಸ್ಯೆಯೇ?
ಪಪ್ಪಾಯಿಯನ್ನು ಜೇನು ಜತೆ ಮಿಕ್ಸ್‌ಮಾಡಿ ಹಚ್ಚುವುದು ತ್ವಚೆ ನುಣುಪಾಗುವುದು.

3. ಡಾರ್ಕ್‌ಸರ್ಕಲ್‌ಬಿದ್ದಿದೆಯೇ?
ಪಪ್ಪಾಯಿಗೆ ಸ್ವಲ್ಪ ಆಲೀವ್‌ಎಣ್ಣೆ ಹಾಕಿ ಮಿಕ್ಸ್‌ಮಾಡಿ ಮುಖಕ್ಕೆ ಹಚ್ಚಿದರೆ ಕಪ್ಪು ಕಲೆ ಇಲ್ಲವಾಗುವುದು, ಬೇಗನೆ ನೆರಿಗೆಯೂ ಬೀಳುವುದಿಲ್ಲ.

4. ಮೊಡವೆ ಸಮಸ್ಯೆಯೇ?
ದಿನಾ 1 ಬೌಲ್‌ಪಪ್ಪಾಯಿ ತಿನ್ನಿ. ಹಣ್ಣಾದ ಪಪ್ಪಾಯಿಯನ್ನು ಮ್ಯಾಶ್ ಮಾಡಿ ಮುಖಕ್ಕೆ ಹಚ್ಚಿ. ಈ ರೀತಿ ಮಾಡುತ್ತಾ ಬಂದರೆ ಕೆಲವೇ ದಿನಗಳಲ್ಲಿ ಮೊಡವೆ ಸಮಸ್ಯೆ ಇಲ್ಲವಾಗುವುದು.

5. ತ್ವಚೆ ಕಾಂತಿ ಹೆಚ್ಚಬೇಕೆ?
ವಾರದಲ್ಲಿ 3-4 ಬಾರಿ ಪಪ್ಪಾಯಿ ಮಾಸ್ಕ್‌ಹಾಕಿದರೆ ಮುಖದ ಕಾಂತಿ ಹೆಚ್ಚುವುದು.

Comments are closed.