ಆರೋಗ್ಯ

4 ಸೂತ್ರಗಳನ್ನು ತಪ್ಪದೇ ಕ್ರಮವಾಗಿ ಆಚರಿಸಿದರೇ, ಆರೋಗ್ಯ ಉತ್ತಮ

Pinterest LinkedIn Tumblr

ಆರೋಗ್ಯವೇ ಮಹಾಭಾಗ್ಯ’ ಎಂಬ ಮಾತು ಅಕ್ಷರಶಃ ಸತ್ಯ… ಹೀಗೆಂದು ನಮ್ಮ ಹಿರಿಯರೂ ಹೇಳಿದ್ದಾರೆ.ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯದ ಬಗೆಗಿನ ಅರಿವು ಹೆಚ್ಚಾಗುತ್ತಿದೆ. ಆರೋಗ್ಯವಾಗಿರುವುದಕ್ಕೆ ಬೇಕಾದ ಎಲ್ಲಾ ಎಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ನಾವು ಆರೋಗ್ಯವಾಗಿ ಇದ್ದರೇನೆ ಏನಾದರೂ ಕೆಲಸ ಮಾಡಲಾಗುತ್ತದಲ್ಲವೇ? ಆದರೆ ನಿಮಗೆ ಈ ವಿಷಯ ತಿಳಿದಿರಲಿಕ್ಕಿಲ್ಲಾ . ಅದೇನೆಂದರೆ….. ಈ ಕೆಳಗ ತಿಲಿಸಲಾಗಿರುವ 4 ನಿಯಮ ಗಳನ್ನು ಆಚರಿಸಿದರೆ ಸಾಕು ಸುಮಾರು 120 ರೋಗಗಳನ್ನು ನಮ್ಮ ಹತ್ತಿರ ಸುಳಿಯದಂತೆ ನೋಡಿಕೊಳ್ಳಬಹುದು. ಈ 4 ನಿಯಮಗಳು ನಾವು ಕುಡಿಯುವ ನೀರಿಗೆ ಸಂಬಂಧಿಸಿದಂತಹವುಗಳು ಆಗಿರುದೇ ವಿಶೇಷ…! ಅವನ್ನು ಒಮ್ಮೆ ನೋಡೋಣ ಬನ್ನಿ…..

1)ತಂಪಾದ ನೀರು, ಐಸ್ ವಾಟರ್ ಕುಡಿಯಬೇಡಿ:
ಹೆಚ್ಚು ತಂಪಾಗಿರುವ ನೀರನ್ನು ಕುಡಿಯಬೇಡಿ ಇದು ಬಹಳ ಅಪಾಯಕಾರಿ. ಏಕೆಂದರೆ ಶರೀರದಲ್ಲಿ ಪ್ರತಿ ಸಮಯದಲ್ಲೂ ಜೈವಿಕ ಕ್ರಿಯೆ ನಡೆದು ದೇಹವೆಲ್ಲವೂ ಬಿಸಿಯಾಗಿರುತ್ತದೆ. ಈ ಸಮಯದಲ್ಲಿ ತಂಪಾದ ನೀರನ್ನು ಕುಡಿದರೆ ದೇಹದ ಉಷ್ಣತೆಯ ಮೇಲೆ ಪರಿಣಾಮ ಬೀರುತ್ತದೆ. ಕುಡಿಯಲೇ ಬೇಕೆಂದಿದ್ದರೆ ಮಡಿಕೆಯಲ್ಲಿನ ನೀರು ಕುಡಿಯ ಬೇಕೇ ಹೊರತು ಐಸ್ ವಾಟರ್ ಕುಡಿಯಬೇಡಿ.

2)ನೀರನ್ನು ಯಾವಾಗಲೂ ಗಟಗಟ ಎಂದು ಒಂದೇ ಸಮನೆ ಕುಡಿಯಬೇಡಿ:
ನೀರನ್ನು ಒಂದೇಸಾರಿ ಗಟಗಟ ಎಂದು ಕುಡಿಯದೇ.. ಟೀ, ಕಾಫೀ ಕುಡಿದಂತೆ ಹೀರುತ್ತಾ ಕುಡಿಯಬೇಕು. ಹೀಗೆ ಮಾಡುವುದರಿಂದ ಪ್ರತಿ ಸಾರಿ ನೀರು ಕುಡಿದಾಗ ಬಾಯಿಯಲ್ಲಿ ಉತ್ಪತ್ತಿಯಾಗುವ ಲಾಲಾರಸ ಸ್ವಲ್ಪ ಪ್ರಮಾಣದಲ್ಲಿ ಶರೀರದಲ್ಲಿ ಹೋಗುತ್ತದೆ. ಆದ್ದರಿಂದ ಸಮಸ್ಯೆ ಇರುವುದಿಲ್ಲ. ಹಾಗಲ್ಲದೆ ನೀರನ್ನು ಗಟಗಟ ಕುಡಿದರೆ… ಅದರ ಮೇಲೆ ಶರೀರದ ಹೈಡ್ರೋಕ್ಲೋರಿಕ್ ಯಾಸಿಡ್ ಅಧಿಕ ಪ್ರಮಾಣದಲ್ಲಿ ಕೆಲಸ ಮಾಡಬೇಕಾಗುತ್ತದೆ. ಈ ಸಂಧರ್ಭದಲ್ಲಿ ಅಧಿಕ ಆಮ್ಲತೆ ಉಂಟಾಗುತ್ತದೆ. ಇದು ರಕ್ತದ ಮೇಲೆ ಪರಿಣಾಮ ಬೀರುತ್ತದೆ. ಇದರ ಮೂಲಕ ಅನೇಕ ರೋಗಗಳು ಬರುವ ಸಾಧ್ಯತೆಗಳಿವೆ.ಆದುದರಿಂದ ನೀರನ್ನು ಯಾವಾಗಲೂ ಗಟಗಟ ಕುಡಿಯಬೇಡಿ.

3) ನಿದ್ದೆಯಿಂದ ಎದ್ದ ತಕ್ಷಣ 2-3 ಗ್ಲಾಸ್ ನೀರನ್ನು ಕುಡಿಯಬೇಕು:
ಈಗೀಗ ಈ ಸೂತ್ರವನ್ನು ಬಹಳ ಜನರು ಆಚರಿಸುತ್ತಿದ್ದಾರೆ. ನಿದ್ದೆಯಿಂದ ಎದ್ದ ತಕ್ಷಣ ಮೂರು ಲೋಟ ನೀರು ಕುಡಿಯಬೇಕು. ಆ ನೀರು ಶರೀರದಲ್ಲಿ ಸೇರಿಕೊಂಡಿರುವ ವಿಷ ಪದಾರ್ಥಗಳನ್ನು ಮಲದ ರೂಪದಲ್ಲಿ ಹೊರ ಹಾಕುತ್ತದೆ. 3 ನಿಮಿಷಗಳಲ್ಲಿ ಮಲ ವಿಸರ್ಜನೆ ಪೂರ್ತಿಯಾಗುವಂತೆ ಮಾಡುತ್ತದೆ. ಒಂದೇ ಸಾರಿ ಶರೀರದ ವ್ಯರ್ಥಪದಾರ್ಥಗಳನ್ನು ವಿಸರ್ಜಿಸುವುದರಿಂದ ರೋಗಬರುವ ಅವಕಾಶ ಬಹಳ ಕಡಿಮೆಯಾಗಿರುತ್ತದೆ.

ರಾತ್ರಿ ಮಲಗುವುದಕ್ಕೆ ಮುನ್ನ ತಾಮ್ರದ ಪಾತ್ರೆಯಲ್ಲಿ ನೀರನ್ನು ಹಾಕಿಟ್ಟು, ಬೆಳಿಗ್ಗೆ ಎದ್ದ ತಕ್ಷಣ ಕುಡಿಯುವುದು ಉತ್ತಮ.

4) ಊಟ ಮಾಡುವುದಕ್ಕೆ 40 ನಿಮಿಷಗಳ ಮುಂಚೆ ಹಾಗೂ ತಿಂದ ನಂತರ 1 ಗಂಟೆಯವರೆಗೂ ನೀರು ಕುಡಿಯಬೇಡಿ:
ಬ್ರೇಕ್ ಫಾಸ್ಟ್, ಲಂಚ್, ಡಿನ್ನರ್…. ಯಾವುದಾದರೂ ಆಹಾರವನ್ನು ತೆಗೆದುಕೊಂಡ ನಂತರ 1 ಗಂಟೆಯ ಕಾಲ ನೀರು ಕುಡಿಯಬೇಡಿ, ಏಕೆಂದರೆ ನಾವು ತಿಂದ ಆಹಾರ ಹೊಟ್ಟೆಯಲ್ಲಿನ ಅನ್ನನಾಳದ ಒಳಗೆ ಹೊಗುತ್ತದೆ. ಅಲ್ಲಿ ಹೈಡ್ರೋಕ್ಲೋರಿಕ್ ಆಸಿಡ್ ಸೂಕ್ಷ್ಮ ಕ್ರಿಮಿಗಳನ್ನು ಸಾಯಿಸಿ, ಸ್ವಲ್ಪ ಆಹಾರವನ್ನು ಯಾಂತ್ರಿಕವಾಗಿ ಚೂರು ಮಾಡುತ್ತದೆ. ಕಡಿಮೆ PH ಮೌಲ್ಯವಿರುವ ಹೈಡ್ರೋಕ್ಲೋರಿಕ್ ಆಸಿಡ್, ಕಿಣ್ವಗಳಿಗೆ ಉಪಯೋಗವಾಗಿ ಆಹಾರ ಜೀರ್ಣವಾಗು ವುದರಿಂದ ಶಕ್ತಿ ಬಿಡುಗಡೆಯಾಗುತ್ತದೆ.

ಈ ಪ್ರಕ್ರಿಯೆಯಲ್ಲಿ ಆಹಾರ ತಿಂದ ತಕ್ಷಣ ನೀರು ಕುಡಿದರೆ ಜೀರ್ಣ ವಾಗುವ ಕೆಲಸ ನಿಧಾನವಾಗುತ್ತದೆ. ನೀರು ಹೆಚ್ಚಾಗಿ ಸೇರುವುದರಿಂದ , ಹೈಡ್ರೋ ಕ್ಲೋರಿಕ್ ಆಸಿಡ್ ಡೈಲ್ಯೂಟ್ ಆಗುತ್ತವೆ. ಆದ್ದರಿಂದ ವ್ಯರ್ಥ ಪದಾರ್ಥಗಳು ಹಾಗೆಯೇ ಉಳಿಯುತ್ತವೆ. ಇವು ಅನೇಕ ರೋಗಗಳಿಗೆ ಕಾರಣವಾಗುತ್ತವೆ. ಹಾಗಾಗಿ ತಿನ್ನುವುದಕ್ಕೆ 20 ನಿಮಿಷಗಳ ಮುಂಚೆ ಹಾಗೂ ತಿಂದ 1 ಗಂಟೆಯ ವರೆಗೂ ನೀರು ಕುಡಿಯಬೇಡಿ.

ಈ 4 ಸೂತ್ರಗಳನ್ನು ತಪ್ಪದೇ ಕ್ರಮವಾಗಿ ಆಚರಿಸಿದರೇ ಆರೋಗ್ಯ ಉತ್ತಮಗೊಳ್ಳುತ್ತದೆ .

Comments are closed.