ಆರೋಗ್ಯ

ಸರಸದ ವೇಳೆ ಆಗುವ ನೋವಿಗೆ ಇಲ್ಲಿದೆ ವೈದ್ಯರ ಉತ್ತರ !

Pinterest LinkedIn Tumblr

ಕೆಲವರು ಸಂಭೋಗದ ಸಮಯದಲ್ಲಿ ಜನನಾಂಗ ಮತ್ತಿತ್ತರ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದಕ್ಕೆ ವೈದ್ಯಕೀಯವಾಗಿ ಕೆಲವು ಸೂಕ್ತ ಪರಿಹಾರಗಳಿವೆ.

1) ಮಿಲನ ಸಂದರ್ಭದಲ್ಲಿ ನಿಮ್ಮ ಮನಸ್ಸನ್ನು ಹಗುರ ಮಾಡಿಕೊಳ್ಳಿ. ಯೋನಿ ಪ್ರವೇಶ ಸುಲಭ ಆಗಬೇಕೆಂದರೆ, ಹೆಚ್ಚು ಹೊತ್ತು ಸಂಭೋಗಪೂರ್ವ ರತಿಯಾಟಗಳಲ್ಲಿ ತೊಡಗಬೇಕು. ಅನೇಕ ಪುರುಷರು ಹೆಚ್ಚು ಹೊತ್ತು ರಸಿಕತೆಯಿಂದ ಆಲಿಂಗನ, ಚುಂಬನಾದಿಗಳನ್ನು ನಡೆಸದೆ ಬೇಗನೆ ಸಂಭೋಗಕ್ಕೆ ಪ್ರಯತ್ನಿಸುವುದರಿಂದ ಸ್ತ್ರೀಯರು ಇನ್ನೂ ಸಿದ್ಧವಾಗಿರದೆ ಹೀಗಾಗುತ್ತದೆ.

2) ರತಿಯಾಟಗಳಿಂದ ಮೈಮರೆತು ಯೋನಿ ಒದ್ದೆಯಾದಾಗ ಪ್ರವೇಶ ಸುಲಭ. ಕನ್ಯಾಪೊರೆ ಅಥವಾ ಹೈಮೆನ್‌ ಇನ್ನೂ ಹರಿದಿಲ್ಲದಿದ್ದರೆ, ಕೆಲವೊಮ್ಮೆ ಅದು ಹರಿಯಲು ಕಷ್ಟವಾಗಿ ಹೀಗಾಗಬಹುದು.

3) ಸಮಸ್ಯೆ ಬಗೆಹರಿಯದಿದ್ದರೆ ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ. ಅವರು ಯೋನಿಯನ್ನು ಪರೀಕ್ಷಿಸಿ, ಕನ್ಯಾಪೊರೆ ಇನ್ನೂ ಹರಿದಿಲ್ಲವಾದರೆ, ಶಸ್ತ್ರಕ್ರಿಯೆಯಿಂದ ಹರಿಯುತ್ತಾರೆ. ಆಗ ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ.

Comments are closed.