ಆರೋಗ್ಯ

ಸಣ್ಣ ಮಗುವನ್ನು ಏಕೆ ಎತ್ತಿ ಅಲ್ಲಾಡಿಸಬಾರದು ಗೋತ್ತೆ…?

Pinterest LinkedIn Tumblr

 

ವಯಸ್ಕರರನ್ನ ಅಥವಾ ಕನಿಷ್ಠಪಕ್ಷ ಹತ್ತು ವರ್ಷದ ಮಗುವನ್ನ ಅಲ್ಲಾಡಿಸುವುದಕ್ಕೂ, ಮಗುವನ್ನ ಅಲ್ಲಾಡಿಸುವುದಕ್ಕೂ, ಬಹಳ ವ್ಯತ್ಯಾಸವಿದೆ. ಏಕೆಂದರೆ ಪುಟ್ಟ ಮಗುವಿಗೆ ದೊಡ್ಡ, ಭಾರವಾದ ತಲೆ, ಆದರೆ ದುರ್ಬಲ ಕತ್ತಿನ ಸ್ನಾಯುಗಳು ಇರುತ್ತವೆ. ಅದರ ಮೆದುಳು ಇನ್ನು ಬೆಳವಣಿಗೆ ಹೊಂದುತ್ತಿರುತ್ತದೆ. ಮೆದುಳು ಇನ್ನು ತನ್ನ ಹೊರ ಪದರವನ್ನ ಸಂಪೂರ್ಣವಾಗಿ ಬೆಳೆಸಿಕೊಂಡಿರುವುದಿಲ್ಲ. ಹೀಗಾಗಿ ಮೆದುಳು ಬಲು ಬೇಗನೆ ಗಾಯ ಹೊಂದಬಹುದು.

ಮಗುವಿನ ಬುರುಡೆ ಮತ್ತು ಮೆದುಳಿನ ನಡುವೆ ತುಂಬಾ ಅಂತರ ಇರುತ್ತದೆ. ಹೀಗಾಗಿ ಮಗುವನ್ನ ಅಲ್ಲಾಡಿಸಿದಾಗ, ಅದರ ಮೆದುಳು ಹೆಚ್ಚು ಅಂತರದವರೆಗೆ ವಾಲಾಡಬಹುದು ಮತ್ತು ಬುರುಡೆಗೆ ತಾಗುವ ಮುನ್ನ ಹೆಚ್ಚು ವೇಗವನ್ನು ಗಳಿಸಿಕೊಳ್ಳಬಹುದು. ಮಗುವನ್ನ ಅಲ್ಲಾಡಿಸುವುದು ವಿಪ್ಲ್ಯಾಷ್ ಪರಿಣಾಮವನ್ನ ಉಂಟು ಮಾಡಬಹುದು. ಮಗುವಿನ ತಲೆ ಅಲ್ಲಾಡಿದಂತೆ, ಅದರ ಮೆದುಳು ಬುರುಡೆಯ ಒಳಭಾಗಕ್ಕೆ ರಭಸವಾಗಿ ಬಡಿಯುತ್ತದೆ. ಆಗ ಮೆದುಳಲ್ಲಿ ರಕ್ತಸ್ರಾವ ಉಂಟಾಗುತ್ತದೆ. ಇದರಿಂದ ಅಂಗಾಂಶಗಳಿಗೆ ಹಾನಿ ಆಗುತ್ತದೆ. ಇದರ ಪರಿಣಾಮವಾಗಿ ಮಗುವಿಗೆ ಶಾಶ್ವತವಾಗಿ ಮೆದುಳಿನ ತೊಂದರೆ ಉಂಟಾಗಬಹುದು.

ಇನ್ನೂ ಕೆಲವು ಪ್ರಕರಣಗಳಲ್ಲಿ ಅಲ್ಲಾಡಿಸುವುದರಿಂದ ಬೆನ್ನಿನ ಮೂಳೆಗೆ ಹಾನಿಯಾಗಿದೆ ಅಥವಾ ಮೂಳೆಗಳು ಮುರಿದಿವೆ. ನಿಮ್ಮ ಮಗುವನ್ನು ನೀವು ಏಕೆ ಅಲ್ಲಾಡಿಸಬಾರದು ಎಂದು ಈ ವಿಡಿಯೋ ಇನ್ನಷ್ಟು ಚೆನ್ನಾಗಿ ನಿಮಗೆ ತಿಳಿಸುತ್ತದೆ ನೋಡಿ :

https://www.facebook.com/TheEliteIndian.Media/videos/1627079973997425/

Comments are closed.