ಆರೋಗ್ಯ

ನಿಮ್ಮ ತುಟಿಯ ಕಪ್ಪು ಬಣ್ಣ ಹೋಗಲಾಡಿಸಲು ಏನು ಮಾಡಬೇಕು ಗೊತ್ತೇ..?

Pinterest LinkedIn Tumblr

ತೇವಾಂಶವಿರುವ ‘ಗ್ಲೋಸಿ ಲಿಪ್’ ಮುಖದ ಆಕರ್ಷಣೆ ಹೆಚ್ಚುವುದು. ತುಟಿ ಕಪ್ಪಗಿದ್ದರೆ ಕೆಲವೊಂದು ನೈಸರ್ಗಿಕ ವಿಧಾನದ ಮೂಲಕ ನಿಮ್ಮ ತುಟಿ ಸೌಂದರ್ಯ ಹೆಚ್ಚಿಸಬಹುದು ನೋಡಿ.

ನಿಮ್ಮ ತುಟಿ ನೈಸರ್ಗಿಕವಾಗಿ ಆಕರ್ಷಕವಾಗಿ ಕಾಣಲು ಹೀಗೆ ಮಾಡಿ:

1. ಆಲೀವ್ ಎಣ್ಣೆ ಹಾಗೂ ಸಕ್ಕರೆ ಸ್ಕ್ರಬ್
ಸ್ವಲ್ಪ ಆಲೀವ್ ಎಣ್ಣೆಗೆ ಸಕ್ಕರೆ ಹಾಕಿ ಅದರಿಂದ ತುಟಿಯನ್ನು ಸ್ಕ್ರಬ್‌ಮಾಡಬೇಕು. ಇದು ತುಟಿ ಮೇಲಿನ ಒಣ ತ್ವಚೆಯನ್ನು ತೆಗೆಯಲು ಸಹಾಯ ಮಾಡುತ್ತೆ. (ಈ ರೀತಿ ವಾರದಲ್ಲಿ ಎರಡು ಬಾರಿ ಮಾಡಿ).

2. ನಂತರ ತುಟಿಯನ್ನು ಒಂದು ನಿಮಿಷ ಮೆಲ್ಲನೆ ಬ್ರೆಷ್‌ನಿಂದ ಉಜ್ಜಿ. ಇದು ಆ ಭಾಗದಲ್ಲಿ ರಕ್ತ ಸಂಚಲನ ಹೆಚ್ಚುವಂತೆ ಮಾಡುವುದು.

3. ತುಟಿಗೆ ಜೇನು ಹಚ್ಚಿ (ಜೇನು ಪ್ರತಿದಿನ ಹಚ್ಚಿ).

ಸಲಹೆ: ತುಟಿಗೆ ಬೀಟ್‌ರೂಟ್‌ರಸ, ಗುಲಾಬಿ ಎಸಳಿನ ರಸ ಹಚ್ಚಬಹುದು.
ಈ ರೀತಿ ಮಾಡುತ್ತಾ ಬಂದರೆ ಯಾವ ಲಿಪ್‌ಗ್ಲೋಸ್ ಸಹಾಯವಿಲ್ಲದೆ ತುಟಿ ಸೌಂದರ್ಯ ಹೆಚ್ಚುವುದು.

Comments are closed.