ಕರಾವಳಿ

ಮಲ್ಪೆಯಲ್ಲಿ ಬೈಕ್ ಪಲ್ಟಿ: ಇಬ್ಬರು ಸವಾರರು ದಾರುಣ ಸಾವು: ಇನ್ನೋರ್ವ ಗಂಭೀರ

Pinterest LinkedIn Tumblr

ಉಡುಪಿ: ಬೈಕ್ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಸವಾರ ಯುವಕರಿಬ್ಬರು ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಇಲ್ಲಿನ ಮಲ್ಪೆಯ ಸಿಂಡಿಕೇಟ್ ಬ್ಯಾಂಕ್ ಎದುರು ನಡೆದಿದೆ.

ಬಡನಿಡಿಯೂರಿನ ನಿವಾಸಿ ಸಂತೋಷ್ ಆಚಾರ್ಯ(29) ಹಾಗೂ ಲೋಕೇಶ್(27) ಮೃತ ದುರ್ದೈವಿಗಳು. ಇನ್ನು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಹರೀಶ್(35) ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೂವರು ಒಂದೇ ಬೈಕ್‌ನಲ್ಲಿ ಸಿನೆಮಾ ವೀಕ್ಷಿಸಿ ಮನೆಗೆ ಮರಳುತ್ತಿರುವಾಗ ಬೈಕ್ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಪರಿಣಾಮ ರಸ್ತೆಗಪ್ಪಳಿಸಿದ ಸಂತೋಷ್ ಆಚಾರ್ಯ ಗಂಭೀರ ಗಾಯಗಳೊಂದಿಗೆ ಸ್ಥಳದಲ್ಲೇ ಕೊನೆಯುಸಿರೆಳೆದರೆ, ಲೋಕೇಶ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದಾರೆ.

ಅಪಘಾತದ ತೀವ್ರತೆಗೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಮಲ್ಪೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.