ಆರೋಗ್ಯ

ದೇಹದ ಮೇಲೆ ದುಷ್ಪರಿಣಾಮ ಬೀಳುವ ಇಂಗಾಲೀಕೃತ ನೀರು ಯಾವುದು ಗೋತ್ತೆ..?

Pinterest LinkedIn Tumblr

ಆಮ್ಲಜನಕವನ್ನು ಉಸಿರಾಡಿಸುವ ಪ್ರತಿಯೊಬ್ಬ ವ್ಯಕ್ತಿಗೂ ಜೋಸೆಫ್ ಪ್ರಿಸ್ಟ್ಲೆಯ ಹೆಸರು ಗೊತ್ತಿರಲೇಬೇಕು. ಈತ ಆಮ್ಲಜನಕವನ್ನು ಮಾತ್ರ ಕಂಡು ಹಿಡಿದಿದ್ದಲ್ಲ, ಸುದೈವವಶಾತ್ ಅಥವಾ ದುರದೃಷ್ಟವಶಾತ್ ಇನ್ನೊಂದು ಆವಿಷ್ಕಾರವನ್ನೂ ಮಾಡಿದ್ದ ಮತ್ತು ಅದು ಮಾನವ ಜನಾಂಗದ ಮೇಲೆ ವ್ಯಾಪಕ ದುಷ್ಪರಿಣಾಮಕ್ಕೂ ಕಾರಣವಾಗಿದೆ. ಈ ಪುಣ್ಯಾತ್ಮನ ಆ ಇನ್ನೊಂದು ಆವಿಷ್ಕಾರವೇ ಇಂಗಾಲೀಕೃತ ನೀರು ಅರ್ಥಾತ್ ಸೋಡಾ!

ಸಾದಾ ನೀರಿಗೆ ಒತ್ತಡದಡಿ ಕಾರ್ಬನ್ ಡೈಯಾಕ್ಸೈಡ್‌ನ್ನು ಸೇರಿಸಿ ಸೋಡಾವನ್ನು ತಯಾರಿಸಲಾಗುತ್ತದೆ. ಸಾದಾ ಸೋಡಾ ನಮ್ಮ ಶರೀರಕ್ಕೆ ಅಷ್ಟೊಂದು ಹಾನಿಕಾರಕವಲ್ಲ, ಏಕೆಂದರೆ ಅದರಲ್ಲಿಯ ಆಮ್ಲೀಯ ಅಂಶಗಳನ್ನು ನಮ್ಮ ಬಾಯಲ್ಲಿಯ ಜೊಲ್ಲು ತಟಸ್ಥಗೊಳಿಸುತ್ತದೆ. ಆದರೆ ಸೋಡಾಕ್ಕೆ ಸಕ್ಕರೆ ಅಥವಾ ಕೃತಕ ಸಿಹಿಕಾರಕಗಳು ಮತ್ತು ಸ್ವಾದಗಳನ್ನು ಸೇರಿಸಿದಾಗ ಈ ಪಾನೀಯವು ನಮ್ಮ ಶರೀರದ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸುತ್ತದೆ.

ತಂಪು ಪಾನೀಯಗಳು, ಸಾದಾ ಸೋಡಾ, ಮದ್ಯಕ್ಕೆ ಮಿಶ್ರಣವಾಗಿ ಇತ್ಯಾದಿ ರೂಪಗಳಲ್ಲಿ ಪ್ರತಿದಿನ ವಿಶ್ವದ ಶೇ.86ರಷ್ಟು ಜನರು ಈ ಇಂಗಾಲೀಕೃತ ಪಾನೀಯವನ್ನು ಸೇವಿಸುತ್ತಾರೆ.

ನಾವು ಸೇವಿಸುವ ಈ ಪಾನೀಯಗಳಲ್ಲಿರುವ ಸಕ್ಕರೆ ಮತ್ತು ಕೃತಕ ಸಿಹಿಕಾರಕಗಳಲ್ಲಿ ವಿಭಜನೆಗೊಳ್ಳಬೇಕಾದ ಯಾವುದೇ ಇತರ ಪೌಷ್ಟಿಕಾಂಶಗಳು ಅಥವಾ ಚಯಾಪಚಯಗೊಳ್ಳಬೇಕಾದ ಘಟಕಗಳು ಇಲ್ಲದಿರುವುದರಿಂದ ಅವು ನೇರವಾಗಿ ನಮ್ಮ ರಕ್ತದಲ್ಲಿ ಬಿಡುಗಡೆಗೊಳ್ಳುತ್ತವೆ. ಇದು ‘ಶುಗರ್ ರಷ್’ ಎಂದು ಕರೆಯಲಾಗುವ ಪರಿಣಾಮಕ್ಕೆ ಕಾರಣವಾಗುತ್ತವೆ.

ಈ ಪಾನೀಯಗಳನ್ನು ಪ್ರತಿದಿನ ಸೇವಿಸುವುದು ಅಂತಿಮವಾಗಿ ಜೀವವನ್ನೇ ಕಸಿದುಕೊಳ್ಳುವ ಹೃದಯ ಸಂಬಂಧಿ ರೋಗಗಳಿಗೆ ಕಾರಣವಾಗುತ್ತದೆ.

ಕೊರೊನರಿ ಅಪಧಮನಿಗಳ ರೋಗ(ಸಿಎಡಿ)ಗಳಿಗೆ ಅಥೆರೊಸ್ಲಿರೊಸಿಸ್ ಅಥವಾ ಅಪಧಮನಿ ಕಾಠಿಣ್ಯವು ಪ್ರಮುಖ ಕಾರಣವಾಗಿದೆ. ಕಾಲಕ್ರಮೇಣ ಅಪಧಮನಿಗಳ ಒಳಭಾಗದ ಭಿತತ್ತಿಗಳ ಮೇಲೆ ಪಾಚಿಯು ಸಂಗ್ರಹಗೊಂಡು ಅವು ಸಂಕುಚಿತಗೊಳ್ಳುತ್ತವೆ. ಇದು ಅಪಧಮನಿಗಳ ಮೂಲಕ ರಕ್ತದ ಸಂಚಾರಕ್ಕೆ ವ್ಯತ್ಯಯವನ್ನುಂಟು ಮಾಡುತ್ತದೆ ಮತ್ತು ಶರೀರದ ಇತರ ಭಾಗಗಳಿಗೆ ಸರಿಯಾಗಿ ಆಮ್ಲಜನಕದ ಪೂರೈಕೆಯಾಗು ವುದಿಲ್ಲ. ಇದರಿಂದಾಗಿ ಶರೀರದ, ಪ್ರಮುಖವಾಗಿ ಹೃದಯದ ಜೀವಕೋಶಗಳಿಗೆ ಅಗತ್ಯವಾದ ಆಮ್ಲಜನಕ ದೊರೆಯುವು ದಿಲ್ಲ.

ಆಮ್ಲಜನಕದ ಕೊರತೆಯಿಂದಾಗಿ ಕಾಲಕ್ರಮೇಣ ಕ್ಯಾಲ್ಸಿಯಂ, ಕೊಬ್ಬು ಮತ್ತು ಹೆಚ್ಚುವರಿ ಸಕ್ಕರೆಯ ಮಿಶ್ರಣವು ಪಾಚಿಯ ರೂಪದಲ್ಲಿ ಅಪಧಮನಿಗಳ ಒಳಭಿತ್ತಿಗಲ್ಲಿ ಪದರವಾಗಿ ಸಂಗ್ರಹಗೊಳುತ್ತದೆ ಮತ್ತು ಇದರಿಂದಾಗಿ ಅಪಧಮನಿಯು ಗಡುಸಾಗಿ ಅದರ ಸ್ಥಿತಿಸ್ಥಾಪಕತ್ವ ಗುಣವು ಕ್ಷೀಣಿಸುತ್ತದೆ ಮತ್ತು ರಕ್ತಸಂಚಾರವನ್ನು ಕುಗ್ಗಿಸುತ್ತದೆ. ಇದು ಹೃದಯಾಘಾತಗಳಿಗೆ ಕಾರಣವಾಗುತ್ತದೆ. ಹೀಗೆ ಸೋಡಾ ಸೇವನೆಯು ಹೆಚ್ಚಿದಂತೆ ಹೃದಯ ರೋಗಗಳ ಅಪಾಯವೂ ಹೆಚ್ಚುತ್ತದೆ.

ಸೋಡಾ ಸೇವನೆಯ ಇತರ ಪರಿಣಾಮಗಳು
► ತೂಕ ಹೆಚ್ಚಳ ಮತ್ತು ವಯಸ್ಸಾಗುವಿಕೆ ಶರೀರದಲ್ಲಿ ಸಂಗ್ರಹಗೊಳ್ಳುವ ಹೆಚ್ಚುವರಿ ಸಕ್ಕರೆಯು ಕೊಬ್ಬಾಗಿ ಪರಿವರ್ತನೆಗೊಳ್ಳುವುದರಿಂದ ತೂಕವು ಅತಿಯಾಗಿ ಹೆಚ್ಚುತ್ತದೆ. ವರ್ಣತಂತುಗಳಲ್ಲಿರುವ ಟೆಲೊಮರ್‌ಗಳಿಗೆ ಹಾನಿಯುಂಟಾಗುವುದರಿಂದ ವಯಸ್ಸಾಗುವ ಪ್ರಕ್ರಿಯೆಯು ಹೆಚ್ಚಿನ ವೇಗವನ್ನು ಪಡೆದುಕೊಳ್ಳುತ್ತದೆ.

► ಚರ್ಮದ ಮೇಲೆ ದುಷ್ಪರಿಣಾಮ ಮತ್ತು ವೀರ್ಯಾಣುಗಳ ಸಂಖ್ಯೆಯಲ್ಲಿ ಕುಸಿತ
ಇಂಗಾಲೀಕಕೃತ ಪಾನೀಯಗಳ ಅತಿಯಾದ ಸೇವನೆಯು ನಮ್ಮ ಶರೀರದಲ್ಲಿ ಪಿಎಚ್ ಮತ್ತು ಗ್ಲೈಸೆಮಿಕ್ ಮಟ್ಟಗಳಲ್ಲಿ ಅಸಮತೋಲನವನ್ನುಂಟು ಮಾಡುತ್ತದೆ. ಇದರಿಂದಾಗಿ ಚರ್ಮಕ್ಕೆ ಹಾನಿಯುಂಟಾಗುತ್ತದೆ ಮತ್ತು ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ.

► ಇತರ ಕಾಯಿಲೆಗಳು
ಟೈಪ್ 2 ಮಧುಮೇಹ ಸೋಡಾ ಸೇವನೆಯಿಂದ ಕಾಣಿಸಿಕೊಳ್ಳುವ ಹೆಚ್ಚು ಸಾಮಾನ್ಯವಾದ ರೋಗವಾಗಿದೆ. ಕಾರ್ಬನೀಕೃತ ಪಾನೀಯವನ್ನು ಸೇವಿಸಿದಾಗ ಅದರಲ್ಲಿಯ ಸಕ್ಕರೆಯು ನೇರವಾಗಿ ರಕ್ತದಲ್ಲಿ ಬಿಡುಗಡೆಗೊಂಡು ಇನ್ಸುಲಿನ್ ಕ್ಷಮತೆಯು ಕಡಿಮೆಯಾಗುವುದು ಇದಕ್ಕೆ ಕಾರಣವಾಗಿದೆ.

ಮೂತ್ರಪಿಂಡದ ಪ್ರೋಟಿನೂರಿಯಾ ಕೂಡ ಕಾಣಿಸಿಕೊಳ್ಳ ಬಹುದು ಮತ್ತು ಈ ಸ್ಥಿತಿಯಲ್ಲಿ ಪ್ರೋಟೀನ್‌ಗಳನ್ನು ಸಮರ್ಪಕವಾಗಿ ಶುದ್ಧೀಕರಿಸಲು ಮೂತ್ರಪಿಂಡಗಳಿಗೆ ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಅಸ್ತಮಾ ರೋಗಕ್ಕೂ ಕಾರಣವಾಗಬಹುದು.

► ಕ್ಯಾಲ್ಸಿಯಂ ಹೀರುವಿಕೆ ಕಡಿಮೆಯಾಗುತ್ತದೆ
ನಮ್ಮ ಶರೀರವು ಕ್ಯಾಲ್ಸಿಯಂ ಹೀರಿಕೊಳ್ಳುವುದು ಕಡಿಮೆಯಾದಾಗ ಸಂಧಿವಾತವು ಕಾಣಿಸಿಕೊಳ್ಳುತ್ತದೆ. ನಾವು ಸೇವಿಸುವ ಸೋಡಾದಲ್ಲಿ ರಂಜಕಾಮ್ಲವಿರುತ್ತದೆ. ಮೂಳೆಗಳ ಸಾಂದ್ರತೆಯನ್ನು ಕಾಯ್ದುಕೊಳ್ಳಲು ರಂಜಕವು ಅಗತ್ಯವಾಗಿದೆ ಯಾದರೂ ಅದು ಅತಿಯಾದರೆ ಕ್ಯಾಲ್ಸಿಯಂ ಹೀರುವಿಕೆಯನ್ನು ಕುಂದಿಸುತ್ತದೆ. ಈ ಅಸಮತೋಲನವು ಕಾಲಕ್ರಮೇಣ ಶರೀರದಲ್ಲಿಯ ಮೂಳೆಗಳನ್ನು ಪೆಡಸಾಗಿಸುತ್ತದೆ.

► ದಂತಕ್ಷಯ
ನಮ್ಮ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಸೋಡಾ ದಲ್ಲಿಯ ಸಕ್ಕರೆಯೊಂದಿಗೆ ಪ್ರತಿವರ್ತಿಸಿದಾಗ ಉತ್ಪಾದನೆ ಯಾಗುವ ಆಮ್ಲವು ದಂತಕವಚದ ಮೇಲೆ ದಾಳಿ ನಡೆಸುತ್ತದೆ. ಹೀಗಾಗಿ ಪ್ರತಿ ಬಾರಿಯೂ ಸೋಡಾ ಸೇವಿಸಿದಾಗ ಹಲ್ಲುಗಳು ಜುಮುಗುಡುವ ಅನುಭವವುಂಟಾಗುತ್ತದೆ. ಆಮ್ಲದ ಇಂತಹ ನಿರಂತರ ದಾಳಿಗಳಿಂದಾಗಿ ಹಲ್ಲುಗಳು ದುರ್ಬಲಗೊಳ್ಳುತ್ತವೆ ಮತ್ತು ಹಲ್ಲುಕುಳಿಗಳುಂಟಾಗಿ ದಂತಕ್ಷಯಕ್ಕೆ ಕಾರಣವಾಗುತ್ತವೆ. ಅಲ್ಲದೆ ಹಲ್ಲುಗಳೂ ತಮ್ಮ ನೈಸರ್ಗಿಕ ಬಿಳಿಯ ಬಣ್ಣವನ್ನೂ ಕಳೆದುಕೊಳ್ಳುತ್ತವೆ.

Comments are closed.