ರಾಷ್ಟ್ರೀಯ

ಮದುವೆಯಲ್ಲಿ ವಧುಗೆ ಹಾರ ಹಾಕುವ ಬದಲು ಆಕೆಯ ಸ್ನೇಹಿತೆಗೆ ಹಾರ ಹಾಕಿದ ವರ ! ವಿಡಿಯೋ ವೈರಲ್

Pinterest LinkedIn Tumblr

ನವದೆಹಲಿ: ವರನೊಬ್ಬ ತನ್ನ ಮದುವೆಯಲ್ಲಿ ವಧುವಿಗೆ ಹಾರ ಹಾಕುವ ಬದಲು ಆಕೆಯ ಸ್ನೇಹಿತೆಗೆ ಹಾರ ಹಾಕಿ ಎಡವಟ್ಟು ಮಾಡಿಕೊಂಡಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ವರದಿಯಾಗಿಲ್ಲ. ಆದ್ರೆ ಸಂಪ್ರದಾಯವನ್ನು ಗಮನಿಸಿದ್ರೆ ಭಾರತೀಯ ಮದುವೆಯಲ್ಲಿ ಈ ಎಡವಟ್ಟಾಗಿದೆ ಎಂಬುದಾಗಿ ವರದಿಯಾಗಿದೆ.

ವಿಡಿಯೋದಲ್ಲೇನಿದೆ?: ವಿಡಿಯೋದಲ್ಲಿ ವಧು ಮೊದಲು ವರನಿಗೆ ಹಾರ ಹಾಕುತ್ತಾಳೆ. ನಂತರ ವರ ತನ್ನ ಕೈಯಲಿದ್ದ ಹಾರವನ್ನು ವಧುವಿನ ಪಕ್ಕದಲ್ಲೇ ನಿಂತಿದ್ದ ಆಕೆಯ ಸ್ನೇಹಿತೆಗೆ ಕೊರಳಿಗೆ ಹಾಕಿದ್ದಾನೆ. ವರನ ಈ ಎಡವಟ್ಟು ಕಂಡ ಮದುವೆಗೆ ಬಂದವರು ದಂಗಾಗಿ ಹೋಗಿದ್ದಾರೆ.

ವರ ಹಾಗೂ ವಧು ತಮ್ಮ ಮದುವೆಗೆ ಹಾರ ಬದಲಾಯಿಸಿಕೊಳ್ಳಲು ಸ್ಟೇಜ್ ಮೇಲೆ ಬಂದರು. ಆಗ ವಧು ಪಕ್ಕದಲ್ಲಿ ಆಕೆಯ ಸ್ನೇಹಿತೆ ನಿಂತಿದ್ದು, ಆಕೆಯ ಮೇಲೆ ವರನಿಗೆ ಪ್ರೀತಿಯಾಗಿದೆ. ಹೀಗಾಗಿ ಆತ ಮಧುವಿನ ಕೊರಳಿಗೆ ಹಾರ ಹಾಕುವ ಬದಲು ಆಕೆಯ ಸ್ನೇಹಿತೆಯ ಕೊರಳಿಗೆ ಹಾಕಿದ್ದಾನೆ ಅಂತ ನೆರೆದವರು ಮಾತನಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಘಟನೆಯಿಂದ ಅಲ್ಲಿದ್ದ ವಧು ಹಾಗೂ ಜನರು ದಂಗಾಗಿ ಹೋದ್ರೂ, ವರ ಮಾತ್ರ ತನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ನಗುತ್ತ ನಿಂತಿದ್ದನು ಎಂದು ರಾಷ್ಟ್ರೀಯ ಪತ್ರಿಕೆಯೊಂದರಲ್ಲಿ ವರದಿಯಾಗಿದೆ.

ಮಾರ್ಚ್ 26, 2018ರಂದು `ಬೇಟೋ ಸೇ ಪ್ಯಾರಿ ಬೇಟಿ ಹೋತೆಯೇ’ ಎಂಬ ಫೇಸ್‍ಬುಕ್ ಪೇಜ್ ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಸದ್ಯ ಈ ವಿಡಿಯೋವನ್ನು 3,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ ಎಂದು ಹೇಳಲಾಗಿದೆ.

Comments are closed.