ಆರೋಗ್ಯ

ಬಾರ್ಲಿ ನೀರಿನ ಶಕ್ತಿ ಏನೆಂದು ಅರಿಯಲು ಈ ಮಾಹಿತಿ ಓದಿ…

Pinterest LinkedIn Tumblr

ನೊಡೋಕೆ ಗೋಧಿಯಂತೆ ಕಾಣುವ ಹಾಗೂ ಅಕ್ಕಿಯಂತಹ ಬಣ್ಣ ಹೊಂದಿರುವ ಬಾರ್ಲಿ ವಿಶ್ವದ ಹಲವೆಡೆ ಪ್ರಮುಖ ಆಹಾರವಾಗಿದೆ. ಬಾರ್ಲಿಯ ವಿಶೇಷತೆ ಏನೆಂದರೆ ಇದನ್ನು ಯಾವುದೇ ಕಾಲದಲ್ಲಾದರೂ ಹೆಚ್ಚಿನ ಆರೈಕೆಯಿಲ್ಲದೇ ಬೆಳೆಸಬಹುದು. ಇಂತಹ ಬಾರ್ಲಿಯಿಂದ ಹತ್ತು ಹಲವಾರು ಉಪಯೋಗಗಳಿವೆ.

ಸುಮಾರು ಹದಿನಾರರ ಶತಮಾನದಲ್ಲಿ ಗೋಧಿಗಿಂತಲೂ ಬಾರ್ಲಿಯೇ ಪ್ರಮುಖ ಆಹಾರವಾಗಿತ್ತು. ಅಂದಿನವರ ಆರೋಗ್ಯವನ್ನು ಇಂದಿನವರಿಗೆ ಹೋಲಿಸಿದರೆ, ಅವರ ಆರೋಗ್ಯವೇ ಎಷ್ಟೋ ಉತ್ತಮವಾಗಿತ್ತು. ಚೀನಾ, ಈಜಿಪ್ಟ್, ಗ್ರೀಸ್ ಮತ್ತು ರೋಮನ್ನರು ಅಂದಿನ ತಮ್ಮ ಆಹಾರದಲ್ಲಿ ಬಾರ್ಲಿಯ ಸೇವನೆಯನ್ನು ಇತಿಹಾಸದಲ್ಲೂ ದಾಖಲಿಸಿದ್ದಾರೆ.

ಈಜಿಪ್ಟ್​ನ ಇತಿಹಾಸದಲ್ಲಿ ಹೇಳಿರುತೆ ನಿತ್ಯವೂ ಬಾರ್ಲಿಯ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಉತ್ತಮವಾಗಿದೆ. ಹಲವು ಐತಿಹಾಸಿಕ ಮತ್ತು ಪುರಾತನ ಗ್ರಂಥಗಳಲ್ಲಿ ಈ ಬಗ್ಗೆ ಸ್ಪಷ್ಟವಾದ ಉಲ್ಲೇಖವಿದೆ. ಈ ಉತ್ತಮ ಧಾನ್ಯದ ನೀರನ್ನು ಸೇವಿಸುವುದರಿಂದ ಆಗುವ ಅದ್ಭುತ ಪ್ರಯೋಜನಗಳನ್ನು ಇಂದಿನ ವರದಿಯಲ್ಲಿ ತಿಳಿಯೋಣ.

ಬಾರ್ಲಿ ನೀರಿನ ಅದ್ಭುತ ಪ್ರಯೋಜನಗಳು

ಮೂತ್ರದ ಪ್ರಮಾಣವನ್ನು ಹೆಚ್ಚಿಸುತ್ತದೆ: ಬಾರ್ಲಿ ಒಂದು ಉತ್ತಮ ಮೂತ್ರವರ್ಧಕವಾಗಿದ್ದು, ದೇಹದಿಂದ ಮೂತ್ರದ ಮೂಲಕ ವಿಷಕಾರಿ ವಸ್ತುಗಳು ಹೊರಹೋಗಲು ಸಹಕರಿಸುತ್ತದೆ. ಬಾರ್ಲಿಯ ಸೇವನೆಯಿಂದ ದೇಹದ ಬೆವರು ಹೆಚ್ಚಿನ ಪ್ರಮಾಣದಲ್ಲಿ ಹೊರಹರಿಯಲು ನೆರವಾಗುತ್ತದೆ. ಬೇಸಿಗೆಯಲ್ಲಿ ಖಾರವಾದ ಊಟವನ್ನು ಸೇವಿಸಿದ ಬಳಿಕ ಹೊಟ್ಟೆಯಲ್ಲಿ ಉರಿಯುಂಟಾಗುತ್ತೆ, ಹಾಗಾಗಿ ಬಾರ್ಲಿ ನೀರನ್ನು ಸೇವಿಸಲು ಮರೆಯದಿರಿ.

ಮಧುಮೇಹಿಗಳಿಗೂ ಉತ್ತಮವಾಗಿದೆ: ಬಾರ್ಲಿಯಲ್ಲಿರುವ ಬೀಟಾ ಗ್ಲುಕಾನ್ ಮಧುಮೇಹಿಗಳಿಗೂ ಸಹ ಸುರಕ್ಷಿತ. ಬಾರ್ಲಿ ಸಕ್ಕರೆ ಅಂಶವನ್ನು ನಿಧಾನವಾಗಿ ಬಿಡುಗಡೆ ಮಾಡುತ್ತದೆ. ಇದರಿಂದ ಮಧುಮೇಹಿಗಳಿಗೆ ಇದು ಸೂಕ್ತವಾದ ಆಹಾರ.

ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ: ಬಾರ್ಲಿ ನೀರಿನಲ್ಲಿ ಹೆಚ್ಚಿನ ನಾರಿನಂಶ ಇರುವುದರಿಂದ ಪಚನಕ್ರಿಯೆ ಮತ್ತು ರಕ್ತಸಂಚಾರ ಸುಗಮಗೊಳ್ಳುತ್ತದೆ. ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ಹೃದಯಕ್ಕೆ ಒತ್ತಡ ಕಡಿಮೆಯಾಗುತ್ತದೆ.

ಕಿಡ್ನಿ ಸ್ಟೋನ್ ಸಮಸ್ಯೆಗಳಿಗೆ ರಾಮಬಾಣ: ಪ್ರತಿದಿನ ಬಾರ್ಲಿ ನೀರನ್ನು ಕುಡಿಯುವುದರಿಂದ ಮೂತ್ರಪಿಂಡಗಳಲ್ಲಿ ಉತ್ಪತ್ತಿಯಾಗುವ ಕಲ್ಲುಗಳು ನಿಧಾನವಾಗಿ ಕರಗುತ್ತವೆ. ಬಾರ್ಲಿ ನೀರನ್ನು ಸೇವಿಸಿದರೆ ಮೂತ್ರಪಿಂಡಗಳ ಕಾರ್ಯಕ್ಷಮತೆ ಹೆಚ್ಚುತ್ತದೆ.

ಅತಿಸಾರ ನಿಲ್ಲುತ್ತದೆ: ಅತಿಸಾರದಿಂದ ಬಳಲುತ್ತಿರುವವರಿಗೆ ತಕ್ಷಣವೇ ಒಂದು ಲೋಟ ಬಾರ್ಲಿ ನೀರನ್ನು ಕುಡಿಸುವ ಮೂಲಕ ಅತಿಸಾರವನ್ನು ನಿಲ್ಲಿಸಬಹುದು. ಅತಿಸಾರದ ಮೂಲಕ ದೇಹ ಕಳೆದುಕೊಂಡಿದ್ದ ನೀರನ್ನು ಪುನಃ ದೇಹಕ್ಕೆ ಒದಗಿಸುವ ಕಾರಣ ನಿತ್ರಾಣವಾಗುವುದಿಲ್ಲ. ಬಾರ್ಲಿ ನೀರು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವುದರ ಜೊತೆಗೆ ದೇಹವನ್ನು ತಂಪಾಗಿಸುತ್ತದೆ.

ಚರ್ಮದ ಕಾಂತಿ ಹೆಚ್ಚಿಸುತ್ತದೆ: ಬಾರ್ಲಿಯ ನೀರನ್ನು ಸೋಸಿ ಮುಖ ತೊಳೆಯಲು ಬಳಸುವ ಮೂಲಕ ಮುಖದ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಬಹುದು. ಚರ್ಮದ ಮೇಲೆ ಕಾಣಿಸಿಕೊಳ್ಳುವ ಸುಕ್ಕನ್ನು ಕಡಿಮೆ ಮಾಡುತ್ತದೆ. ಇದಕ್ಕೆ ನಿತ್ಯ ಬಾರ್ಲಿ ನೀರು ಸೇವಿಸುವುದು ಒಳ್ಳೆಯದು.

ತೂಕ ಇಳಿಸಲು ಉತ್ತಮ: ನಿತ್ಯವೂ ಹಾಲಿನೊಂದಿಗೆ ಕುದಿಸಿದ ಬಾರ್ಲಿಯನ್ನು ಸೇರಿಸಿ ಕುಡಿಯುವ ಮೂಲಕ ತೂಕ ಇಳಿಸಿಕೊಳ್ಳಬಹುದು. ಬಾರ್ಲಿಯಲ್ಲಿ ಯಾವುದೇ ರುಚಿ ಇಲ್ಲದಿರುವ ಕಾರಣ ಹಾಲಿನೊಂದಿಗೆ ಸೇವಿಸಲು ಉತ್ತಮವಾಗಿದೆ. ಇದರಲ್ಲಿ ಕೊಬ್ಬು ಅಥವಾ ಕೊಲೆಸ್ಟ್ರಾಲ್ ಇಲ್ಲದಿರುವುದರಿಂದ ಯಾವ ವಯಸ್ಸಿನವರಾದರೂ ಸೇವಿಸಬಹುದಾದ ಧಾನ್ಯವಾಗಿದೆ.

ಹೊಟ್ಟೆಯುಬ್ಬರಕ್ಕೆ ಉತ್ತಮ: ಬಾರ್ಲಿನೀರನ್ನು ಕುಡಿಯುವುದರಿಂದ ಹೊಟ್ಟೆಯುಬ್ಬರವನ್ನು ತಕ್ಷಣ ಕಡಿಮೆಯಾಗುತ್ತದೆ. ಅಜೀರ್ಣದ ಕಾರಣ ಹೊಟ್ಟೆ ಮತ್ತು ಜಠರಗಳಲ್ಲಿ ಸಂಗ್ರಹವಾಗಿದ್ದ ವಿಷಕಾರಿ ಘನ ಮತ್ತು ವಾಯುವನ್ನು ಹೊರಹಾಕಲು ಬಾರ್ಲಿ ನೀರು ಸಮರ್ಥವಾಗಿದೆ. ಹೊಟ್ಟೆಯುಬ್ಬರ ಕಂಡುಬಂದ ತಕ್ಷಣ ಒಂದು ಲೋಟ ಬಾರ್ಲಿ ನೀರಿಗೆ ಕೊಂಚ ಲಿಂಬೆರಸ ಸೇರಿಸಿ ಕುಡಿಯುವುದು ಉತ್ತಮ.

ಬಾರ್ಲಿ ನೀರನ್ನು ತಯಾರಿಸುವ ವಿಧಾನ

ಈ ಬಾರ್ಲಿನೀರನ್ನ ತಯಾರಿಸೋದು ತುಂಬಾ ಸುಲಭ ಹತ್ತು ಹೆಚ್ಚು ಸಮಯ ಕೂಡಾ ಬೇಕಾಗಿಲ್ಲ. ಒಂದು ಸಲದ ಉಪಯೋಗಕ್ಕೆ ಒಂದು ಲೋಟ ನೀರಿಗೆ ಎರಡು ದೊಡ್ಡ ಚಮಚದಷ್ಟು ಬಾರ್ಲಿಯನ್ನು ಸೇರಿಸಿ ಕುದಿಸಿ. ಒಂದೆರಡು ನಿಮಿಷ ಕುದಿಸಿದ ಬಳಿಕ ಒಂದೆರಡು ಕಾಳುಗಳನ್ನು ಹಿಚುಕಿ ನೋಡಿ ಪೂರ್ಣವಾಗಿ ಬೆಂದಿದ್ದರೆ ಒಲೆಯಿಂದ ಇಳಿಸಿ.

ಬಾರ್ಲಿ ನೀರನ್ನು ಒಂದು ಸಲಕ್ಕೆ ಮಾಡಿಯೂ ಕುಡಿಯಬಹುದು ಅಥವಾ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ತಯಾರಿಸಿ ಫ್ರಿಜ್ಜಿನಲ್ಲಿ ಶೇಖರಿಸಿಟ್ಟುಕೊಂಡು ಪ್ರತಿದಿನ ಬಳಸಲೂಬಹುದು. ಇಷ್ಟೆಲ್ಲ ಉಪಯುಕ್ತವಾಗಿರೋ ಬಾರ್ಲಿ ನೀರನ್ನು ನೀವೂ ಸಹ ಕುಡಿದು ಆರೋಗ್ಯ ವೃದ್ಧಿಸಿಕೊಳ್ಳಿ.

Comments are closed.