ಆರೋಗ್ಯ

ಜೇನುತುಪ್ಪದಿಂದ ಆರೋಗ್ಯಕ್ಕೆ ಆಗುವ ಲಾಭವನ್ನೊಮ್ಮೆ ನೀವು ನೋಡಲೇಬೇಕು….

Pinterest LinkedIn Tumblr

ಜೇನುತುಪ್ಪವನ್ನು ಬಹಳ ಹಿಂದಿನಿಂದಲೂ ಔಷಧವನ್ನಾಗಿಯು ಬಳಸಲಾಗುತ್ತಿದೆ. ಇದನ್ನು ‘ನ್ಯಾಚುರಲ್ ಕಫ್ ಸಿರಪ್’ ಎಂದೇ ಹೇಳಬಹುದು. ಜೇನಿನಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ಕೊಬ್ಬು, ನಾರು, ಪ್ರೋಟೀನ್, ವಿಟಮಿನ್ ಸಿ, ಕಬ್ಬಿಣದಂಶವೂ ಹೇರಳವಾಗಿದೆ. ಇದರಿಂದ ಆರೋಗ್ಯಕ್ಕಾಗುವ ಲಾಭವನ್ನೊಮ್ಮೆ ನೋಡೋಣ….

ಪ್ರತಿದಿನ ಜೇನುತುಪ್ಪ ಸೇವಿಸುತ್ತಿದ್ದರೆ ಜ್ಞಾಪಕ ಶಕ್ತಿ ಜತೆಗೆ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ
ಉಷ್ಣದಿಂದಾಗಿ ಬಾಯಲ್ಲಿ ಹುಣ್ಣುಗಳಾಗಿದ್ದರೆ ಜೇನುತುಪ್ಪ ಹಚ್ಚುವುದರಿಂದ ಹುಣ್ಣು ವಾಸಿಯಾಗುತ್ತದೆ
ಜೇನುತುಪ್ಪವನ್ನು ನೀರಿನಲ್ಲಿ ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಾ ಬಂದರೆ ಅಧಿಕ ರಕ್ತದೊತ್ತಡ ಶಮನವಾಗುತ್ತದೆ
ಒಂದು ಲೋಟ ನೀರಿಗೆ ನಿಂಬೆರಸ ಹಾಗೂ ಜೇನುತುಪ್ಪ ಮಿಶ್ರ ಮಾಡಿ. ದಿನಾ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಾ ಬಂದರೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.
ಈರುಳ್ಳಿಯ ರಸದೊಂದಿಗೆ ಅಥವಾ ಕಾಳುಮೆಣಸಿನ ಪುಡಿಯೊಂದಿಗೆ ಜೇನುತುಪ್ಪ ಬೆರೆಸಿ ತಿಂದರೆ ಕಫ ನಿವಾರಣೆಯಾಗುತ್ತದೆ
ಶುಂಠಿ ರಸದೊಂದಿಗೆ ಜೇನುತುಪ್ಪ ಬೆರೆಸಿ ತಿಂದರೆ ಕೆಮ್ಮು, ನೆಗಡಿ, ಮೂಗು ಕಟ್ಟುವ ತೊಂದರೆ ಪರಿಹಾರವಾಗುತ್ತವೆ.

Comments are closed.