ಆರೋಗ್ಯ

ಈ ಹಣ್ಣುಗಳನ್ನು ತಿಂದರೆ ಹೃದಯಾಘಾತವನ್ನು ತಡೆಗಟ್ಟಬಹುದು….

Pinterest LinkedIn Tumblr

ಹೃದಯಾಘಾತಕ್ಕೆ ಓಳಗಾಗುವವರ ಪೈಕಿ ಅನೇಕರು ಭಾರತೀಯರು ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ಹೃದಯಾಘಾತಕ್ಕೆ ವಯಸ್ಸಿನ ಅಂತರವಿಲ್ಲ. ಈಗೀಗ ಮಕ್ಕಳು, ಯುವಕರು ಹೃದಯಾಘಾತಕ್ಕೆ ಒಳಗಾಗುವುದು ಹೆಚ್ಚಾಗುತ್ತಿವೆ. ಅಧಿಕ ಒತ್ತಡ, ಧೂಮಪಾನ, ವ್ಯಾಯಾಮ ಮಾಡದಿರುವುದು ಹೃದಯಾಘಾತ ಸಂಭವಿಸಲು ಮುಖ್ಯ ಕಾರಣ ಎನ್ನಬಹುದು.

ಅಲ್ಲದೆ ಹೃದಯಕ್ಕೆ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕ, ಪೋಷಕಾಂಶ, ರಕ್ತ ಸಂಚಲನ ಆಗಿಲ್ಲವಾದರೆ ಹೆಚ್ಚಾಗಿ ಹಾರ್ಟ್ ಅಟ್ಯಾಕ್ ಸಂಭವಿಸುತ್ತದೆ. ಹೃದಯಾಘಾತ ತಡೆಗಟ್ಟಲು ಅನೇಕ ಮಾರ್ಗಗಳಿವೆ. ಅದರಲ್ಲಿ ಹಣ್ಣಿನ ಸೇವನೆಯೂ ಒಂದು. ಈ ಹಣ್ಣಗಳನ್ನು ಸೇವಿಸಿದರೆ ಹೃದಯಾಘಾತದ ಸಂಭವವನ್ನು ತಡೆಯಬಹುದು.

ಟೊಮ್ಯಾಟೊ: ಟೊಮ್ಯಾಟೊ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಲೈಕೋಪಿನ್, ವಿಟಾಮಿನ್ ಸಿ, ಆಲ್ಫಾಗಳಿದ್ದು, ಇದು ಹೃದಯರೋಗ ಬರುವುದನ್ನು ತಡೆಗಟ್ಟಿ ಉತ್ತಮ ಆರೋಗ್ಯ ಒದಗಿಸುತ್ತದೆ. ಈಗೀಗ ಅಮೆರಿಕದಲ್ಲಿ ಟೊಮ್ಯಾಟೊ ಸೇವನೆ ಹೆಚ್ಚಾಗುತ್ತಿದೆಯಂತೆ.

ಬಾಳೆಹಣ್ಣು: ಬಾಳೆಹಣ್ಣು ಅನೇಕ ರೋಗಗಳಿಗೆ ರಾಮಬಾಣ ಎನ್ನಬಹುದು. ಇದರಲ್ಲಿರುವ ಪೊಟ್ಯಾಷಿಯಂ ಅಪಧಮನಿಗಳು ಬಿರುಸಾಗುವುದರ ವಿರುದ್ಧ ಹೋರಾಡುತ್ತದೆ. ಜತೆಗೆ ಪಾರ್ಶ್ವವಾಯುವನ್ನು ತಡೆಯಬಲ್ಲ ಶಕ್ತಿ ಹೊಂದಿದೆ.

ಗಾಢ ಬಣ್ಣದ ಚಾಕೊಲೇಟ್: 2012ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ದಿನನಿತ್ಯ ಗಾಢ ಬಣ್ಣದ ಚಾಕೊಲೇಟ್​ ಸೇವಿಸಿದರೆ ಹೃದಯಾಘಾತದ ಸಮಸ್ಯೆ ಅಥವಾ ಪಾರ್ಶ್ವವಾಯು ತಡೆಗಟ್ಟಬಹುದು ಎಂದು ತಿಳಿದು ಬಂದಿದೆ. ಇದರಲ್ಲಿ ಶೇ. 60-70ರಷ್ಟು ಕೊಕೊ ಅಂಶವಿದ್ದು, ಹೃದಯಾಘಾತದ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ.

ಅವರೆ ಬೀಜ: ಅವರೆ ಬೀಜ ಹೆಚ್ಚಿನ ಪ್ರಮಾಣದ ಬಿ- ವಿಟಮಿನ್​, ಖನಿಜ ಸೇರಿದಂತೆ ಅನೇಕ ಆರೋಗ್ಯಕರ ಅಂಶ ಒಳಗೊಂಡಿದೆ. ಇದರಿಂದಾಗಿ ಅವರೆ ಬೀಜದ ಸೇವನೆಯಿಂದ ಹೃದಯಾಘಾತದ ತೊಂದರೆಯಿಂದ ಪಾರಾಗಬಹುದು.

ಬೆರಿ ಹಣ್ಣುಗಳು: ಬೆರಿ ಹಣ್ಣುಗಳಲ್ಲಿ ಅಧಿಕ ಪ್ರಮಾಣದ ಪೈಟೋನ್ಯೂಟ್ರಿಯೆಂಟ್​ಗಳಿವೆ. ದಿನನಿತ್ಯದ ಆಹಾರದಲ್ಲಿ ಬ್ಲೂ ಬೆರ್ರಿ ಅಥವಾ ಸ್ಟ್ರಾಬೆರಿ ಹಣ್ಣು ಸೇವನೆ ಮಾಡಿದರೆ ಹೃದಯಾಘಾತ ತಡೆಯಬಹುದು.

ದಾಳಿಂಬೆ ಹಣ್ಣು: ವಿಜ್ಞಾನಿಗಳು ಹೃದ್ರೋಗದ ರೋಗಿಗಳಿಗೆ ದಾಳಿಂಬೆ ರಸ ನೀಡಿ ಅಧ್ಯಯನ ನಡೆಸಿದ್ದು, ಇದರಿಂದ ಹೃದಯಕ್ಕೆ ರಕ್ತ ಸಂಚಾರ ಸುಗಮವಾಗುತ್ತದೆ ಎಂದು ತಿಳಿದು ಬಂದಿದೆ. ದಾಳಿಂಬೆ ಹಣ್ಣುಗಳಲ್ಲಿ ಆ್ಯಂಟಿಆಕ್ಸಿಡೆಂಟ್​ ಅಂಶ ಹೆಚ್ಚಿದ್ದು, ಹೃದಯಾಘಾತದ ಸಮಸ್ಯೆ ಬಾರದಂತೆ ನೋಡಿಕೊಳ್ಳುತ್ತದೆ.

Comments are closed.