ಬಹಳಷ್ಟು ಮಂದಿಗೆ ಚಳಿಗಾಲದಲ್ಲಿ ಕೀಲುನೋವು, ಬಾವು ಬರುತ್ತದೆ. ಚಳಿಯಿಂದಾಗಿ ಶರೀರದ ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳುತ್ತದೆ. ಕೀಲುವಾತ ಉಂಟಾಗುತ್ತದೆ. ಅಂತಹ ಸಮಯದಲ್ಲಿ ಕೀಲುಗಳಿಗೆ ಸಂಬಂಧಿಸಿದ ವ್ಯಾಯಾಮ ಮಾಡುವುದು ಉತ್ತಮ. ಶರೀರದೊಳಗೆ ಬ್ಯಾಕ್ಟೀರಿಯಾ ಪ್ರವೇಶಿಸಿದಾಗ ಉರಿಯೂತ ಉಂಟಾಗುತ್ತದೆ. ಇದರಿಂದಾಗಿ ಕೀಲುಗಳು ಘಾಸಿಗೊಳ್ಳುತ್ತವೆ.
ಒಮ್ಮೆ ಕೀಲುನೋವು ಕಾಣಿಸಿಕೊಂಡರೆ…ಗುಣಮುಖವಾಗಲು ಬಹಳ ಸಮಯ ಹಿಡಿಯುತ್ತದೆ. ಈ ರೋಗದಿಂದ ನರಳುತ್ತಿರುವವರು ಬಲು ಬೇಗ ಸುಸ್ತಾಗುತ್ತಾರೆ. ಬೆಳಗಿನ ಸಮಯದಲ್ಲಿ ಕೀಲುಗಳಲ್ಲಿ ಸಹಿಕೊಳ್ಳಲಾಗದ ನೋವು ಉಂಟಾಗುತ್ತದೆ.
ಪ್ರಾರಂಭದಲ್ಲೇ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ. ಆಲಸ್ಯ,ಬಳಲಿಕೆ, ರಕ್ತ ಹೀನತೆ ಹೆಚ್ಚಾಗಿರುತ್ತವೆ. ಆಹಾರದಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳುವುದರಿಂದ ಉಪಶಮನ ದೊರೆಯುತ್ತದೆ. ಮೊಳಕಾಲು, ಕೀಲು ನೋವುಗಳಿಂದ ನರಳುತ್ತಿರುವವರು ಕೃತಕ ಸಿಹಿ ಪದಾರ್ಥಗಳನ್ನು, ಡೈರೀ ಉತ್ಪನ್ನಗಳು, ಕಾರ್ನ್ ಆಯಿಲ್, ಮೊಟ್ಟೆ ಮೊದಲಾದುವುಗಳನ್ನು ಉಪಯೋಗಿಸುವುದು ಉತ್ತಮ.
ಅನಾನಸು ತಿನ್ನುವುದರಿಂದ ಶರೀರಕ್ಕೆ ವಿಟಮಿನ್ ಸಿ ಹೇರಳವಾಗಿ ಲಭಿಸುತ್ತದೆ. ಇದು ಕೀಲು ನೋವುಗಳನ್ನು ಕಡಿಮೆಗೊಳಿಸುವುದರಲ್ಲಿ ಸಹಕಾರಿ. ಕೆಲವು ಮನೆ ಮದ್ದುಗಳಿಂದಲೂ ಕೀಲು ನೋವುಗಳನ್ನು ಕಡಿಮೆ ಮಾಡಿಕೊಳ್ಳಬಹುದು.
ಕೋಳಿಮೊಟ್ಟೆಯ ಬಿಳಿ ಭಾಗ ಹಾಗೂ ಅಲುವೇರಾ ಸೇರಿಸಿ ನೋವಿದ್ದ ಕಡೆ ಹಚ್ಚುವುದರಿಂದ ತಕ್ಷಣ ಉಪಶಮನ ಲಭಿಸುತ್ತದೆ.
ಉಗುರು ಬೆಚ್ಚಗಿನ ಹಾಲಿನಲ್ಲಿ ಹರಳೆಣ್ಣೆ ಸೇರಿಸಿ ಕುಡಿದರೆ, ಕೀಲು ನೋವು, ಬಾವು ಕಡಿಮೆಯಾಗುತ್ತವೆ.
ಆಲೂಗಡ್ಡೆ ತುಂಡುಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು . ಮರುದಿನ ಬೆಳಿಗ್ಗೆ, ಸೋಸಿ ಆ ನೀರನ್ನು ಕುಡಿಯುವುದರಿಂದ ಮೊಣಕಾಲುಗಳ ನೋವು ಕಡಿಮೆಯಾಗುತ್ತದೆ.
Comments are closed.