ಕರಾವಳಿ

ಕುಂದಾಪುರದ ಹುಲಿ ‘ನಾಗೇಶಣ್ಣ’ ಇನ್ನು ನೆನಪು ಮಾತ್ರ

Pinterest LinkedIn Tumblr

ಕುಂದಾಪುರ: ಕುಂದಾಪುರ ಪರಿಸರದಲ್ಲಿ ಹುಲಿ ನಾಗೇಶಣ್ಣ ಎಂದೇ ಖ್ಯಾತರಾಗಿದ್ದ ನಾಗೇಶ್ (75) ಅಲ್ಪಕಾಲದ ಅಸೌಖ್ಯದಿಂದ ಕುಂದಾಪುರ ಸ್ವಗೃಹದಲ್ಲಿ ಬುಧವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಮೃತರು ಪತ್ನಿ, ಮೂವರು ಗಂಡು ಹಾಗೂ ನಾಲ್ವರು ಹೆಣ್ಣು ಮಕ್ಕಳ ಅಗಲಿದ್ದಾರೆ.

ಚಾಲಕ ವೃತ್ತಿಮಾಡಿಕೊಂಡಿದ್ದ ನಾಗೇಶ್, ಹವ್ಯಾಸವಾಗಿ ಹುಲಿ ಕುಣಿತಕ್ಕೆ ಬಣ್ಣ ಹಚ್ಚುತ್ತಿದ್ದರು. ನವರಾತ್ರಿ ಉತ್ಸವದಲ್ಲಿ ನಾಗೇಶ್ ಹುಲಿ ಕುಣಿತ ತಾಲೂಕಿನಲ್ಲಿ ತುಂಬಾನೇ ಆಕರ್ಷಣೆಯಾಗಿತ್ತು. ಕುಂದಾಪುರದಲ್ಲಿ ಸಾಂಪ್ರದಾಯಿಕ ಹುಲಿವೇಷ ಹಾಕಿ ಕುಣಿದು ರಂಜಿಸುವ ಮೂಲಕ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ನಾಗೇಶ್ ಅವರ ಪಾತ್ರ ಮಹತ್ತರವಾಗಿತ್ತು. ಇವರು ವೇಷ ಧರಿಸಿದ ಬಳಿಕ ಕುಣಿತದ ಗತ್ತು ಗಾಂಭೀರ್ಯ ನಿಜಕ್ಕೂ ಅಬ್ಬರವಾಗಿತ್ತು. ಇವರ ಗರಡಿಯಲ್ಲಿ ಪಳಗಿ ಹತ್ತಾರು ಹುಲಿ ನೃತ್ಯ ಕಲಾವಿದರು ಸೃಷ್ಟಿಯಾಗಿದ್ದರು.

ಇವರ ಹುಲಿ ವೇಷಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಕುಂದಾಪುರದ ಕಲಾಕ್ಷೇತ್ರ ಸಂಘಟನೆ ನವರಾತ್ರಿ ಸಮಯದಲ್ಲಿ ಹುಲಿ ಕುಣಿತ ಕಾರ್ಯಕ್ರಮ ನಡೆಸಿ ಇವರನ್ನು ಸನ್ಮಾನಿಸಿದ್ದರು.

Comments are closed.