ಆರೋಗ್ಯ

ಈ ಸೊಪ್ಪಿನ ಪಚ್ಚಡಿ ತಿನ್ನಿ, ಆರೋಗ್ಯಕರವಾದ ಪ್ರಯೋಜನ ಪಡೆಯಿರಿ…?

Pinterest LinkedIn Tumblr

ಪ್ರಕೃತಿಯಲ್ಲಿ ದೊರೆಯುವ ಕೆಲವು ಬಗೆಯ ಎಲೆಗಳು, ಹಣ್ಣುಗಳಲ್ಲಿ ದೀರ್ಘಕಾಲಿಕ ಖಾಯಿಲೆಗಳನ್ನು ವಾಸಿಮಾಡುವಂತಹ ಔಷಧ ಗುಣಗಳಿರುತ್ತವೆ. ಅಡುಗೆಯಲ್ಲಿ ಅವುಗಳನ್ನು ಬಳಸುವುದರಿಂದ ಕೆಲವು ಖಾಯಿಲೆಗಳಿಂದ ದೂರವಾಗಬಹುದು. ಅಂತಹದ್ದೇ ಒಂದು ಎಲೆಯ ಬಗ್ಗೆ ನಾವೀಗ ತಿಳಿದುಕೊಳ್ಳೋಣ. ನುಗ್ಗೆ ಕಾಯಿಯನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ? ನುಗ್ಗೇಕಾಯಿಯಿಂದ ಪಲ್ಯ, ಚಟ್ನಿ, ಸಾಂಬಾರು ಮಾಡುವುದು ನಮಗೆ ತಿಳಿದಿರುವ ವಿಷಯವೇ. ನುಗ್ಗೇ ಸೊಪ್ಪಿನಿಂದಲೂ ಸಹ ಎಷ್ಟೋ ಆರೋಗ್ಯಕರವಾದ ಪ್ರಯೋಜನಗಳಿವೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.

ನಾವು ಬಳಸುವ ಯಾವ ಸೊಪ್ಪಿನಲ್ಲೂ ಇರದಂತಹ ಔಷಧೀಯ ಗುಣಗಳು ನುಗ್ಗೇಸೊಪ್ಪಿನಲ್ಲಿ ಇರುತ್ತವೆ. ಎಲ್ಲಾ ಕಾಲದಲ್ಲೂ ಸಿಗುವ ಈ ಸೊಪ್ಪನ್ನು ಆಗಾಗ ಆಹಾರದಲ್ಲಿ ಬಳಸುವುದರಿಂದ ಪದೇ ಪದೇ ಎದುರಾಗುವ ಸಣ್ಣ ಖಾಯಿಲೆಗಳು ಬರದಂತೆ ಕಾಪಾಡಬಹುದು. ಇದರಲ್ಲಿ ವಿಟಮಿನ್ ‘ಎ’ ಹೇರಳವಾಗಿ ಇರುವುದರಿಂದ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಬರುವುದಿಲ್ಲ. ಅಧಿಕ ಭಾರ ಹಾಗೂ ಸ್ಥೂಲಕಾಯ ದವರಿಗೆ ಬಹಳ ಉಪಯುಕ್ತ .ಇದರಲ್ಲಿನ ವಿಟಮಿನ್ ‘ಸಿ’ ಮೂಳೆಗಳನ್ನು ಗಟ್ಟಿಗೊಳಿಸುತ್ತದೆ. ಕ್ಯಾಲ್ಷಿಯಂ, ಐರನ್ ಫಾಸ್ಪರಸ್, ಯಾಂಟಿ ಬ್ಯಾಕ್ಟೀರಿಯಲ್ ಗುಣಗಳು ಹೇರಳವಾಗಿರುತ್ತವೆ.

ನುಗ್ಗೇಸೊಪ್ಪಿನಿಂದ ಚಟ್ನಿ ಅಥವಾ ಪಲ್ಯ ಮಾಡಿ ತಿಂದರೆ…

ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ, ಮಧುಮೇಹ, ರಕ್ತದೊತ್ತಡವನ್ನು ಹತೋಟಿಯಲ್ಲಿಡುತ್ತದೆ. ಇಷ್ಟೇಲ್ಲಾ ಔಷಧ ಗುಣಗಳನ್ನು ಹೊಂದಿರುವ ಈ ಸೊಪ್ಪಿನ ಚಟ್ನಿ ತಯಾರಿಸುವ ವಿಧಾನವನ್ನು ತಿಳಿಯೋಣ.

ಒಂದು ಪಾನ್ ನಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ನಂತರ ಸಾಸಿವೆ , ಜೀರಿಗೆ, ಒಣಮೆಣಸು, ಕರಬೇವಿನಸೊಫ್ಪು, ಮೆಂತ್ಯೆ, ಬೆಳ್ಳುಳ್ಳಿ ಹಿಳುಕುಗಳು, ಧನಿಯಾ, ಹಸಿ ಮೆಣಸಿನಕಾಯಿ ಇವೆಲ್ಲವನ್ನೂ ಚೆನ್ನಾಗಿ ಹುರಿದು ಪಕ್ಕಕ್ಕಿಡಿ. ನಂತರ 2 ಕಪ್ ನುಗ್ಗೇಸೊಪ್ಪನ್ನು ಸ್ವಲ್ಪ ಎಣ್ಣೆ ಹಾಕಿ ಹಸಿ ವಾಸನೆ ಹೋಗುವವರೆಗೂ ಬಾಡಿಸಿ. ನಂತರ ಹುರಿದಿಟ್ಟುಕೊಂಡ ಪದಾರ್ಥಗಳನ್ನು ,ಸೊಪ್ಪನ್ನು ಮಿಕ್ಸಿಗೆ ಹಾಕಿ ರುಬ್ಬಿಟ್ಟುಕೊಳ್ಳಿ .ನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ, ಜೀರಿಗೆ ಕರಿಬೇವಿನಸೊಪ್ಪು, ಒಣಮೆಣಸಿನಕಾಯಿ ಹಾಕಿ ಒಗ್ಗರಣೆ ಹಾಕಿ . ಇದಕ್ಕೆ ರುಬ್ಬಿಟ್ಟುಕೊಂಡ ಚಟ್ನಿಯನ್ನು ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ. ಹೀಗೆ ತಯಾರಿಸಿದ ಚಟ್ನಿಯನ್ನು ಆಗಾಗ್ಗೆ ಸೇವಿಸುವುದರಿಂದ ಆರೋಗ್ಯ ಉತ್ತಮಗೊಳ್ಳುತ್ತದೆ. ಕಡಿಮೆ ಖರ್ಚಿನಲ್ಲಿ ತಯಾರಿಸುವ ಈ ಚಟ್ನಿ ತಿನ್ನಲು ಬಹಳ ರುಚಿಕರವಾಗಿರುತ್ತದೆ.

Comments are closed.