ಗಲ್ಫ್

ಸೌದಿ ಮಹಿಳೆಯರು ಬುರ್ಖಾ ಧರಿಸುವುದು ಕಡ್ಡಾಯವಲ್ಲ: ಸೌದಿ ರಾಜಕುಮಾರ ಸಲ್ಮಾನ್

Pinterest LinkedIn Tumblr

ರಿಯಾದ್, ಮಾ.20: ಸೌದಿ ಅರೇಬಿಯಾದಲ್ಲಿರುವ ಮಹಿಳೆಯರು ಬುರ್ಖಾ ಧರಿಸುವುದು ಕಡ್ಡಾಯವೇನಲ್ಲ ಎಂದು ಸೌದಿ ರಾಜಕುಮಾರ ಹೇಳಿದ್ದಾರೆ.

ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ತಮ್ಮ ಆಡಳಿತದಲ್ಲಿನ ಹಲವಾರು ಬದಲಾವಣೆಗಳಿಂದ ಸುದ್ದಿಯಾಗುತ್ತಿದ್ದಾರೆ. ಮಹಿಳೆಯರಿಗೆ ಕಾರು ಚಲಾವಣೆಗೆ ಅವಕಾಶ, ಸಾರ್ವಜನಿಕ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ಇವುಗಳಲ್ಲಿ ಪ್ರಮುಖವಾದವುಗಳು.

“ಕಾನೂನುಗಳು ಸ್ಪಷ್ಟವಾಗಿದೆ ಹಾಗು ಮಹಿಳೆಯರೂ ಪುರುಷರಂತೆ ಯೋಗ್ಯ, ಗೌರವಯುತವಾದ ಬಟ್ಟೆ ಧರಿಸಬೇಕೆಂದು ಶರೀಅತ್ ನಲ್ಲಿದೆ. ಇದು ಕೇವಲ ಕಪ್ಪು ಬುರ್ಖಾ ಬಗ್ಗೆ ಸೂಚಿಸಿಲ್ಲ. ಯಾವ ರೀತಿಯ ಯೋಗ್ಯ ಹಾಗು ಗೌರವಯುವತವಾದ ಬಟ್ಟೆ ಧರಿಸಬೇಕು ಎನ್ನುವ ನಿರ್ಧಾರ ಮಹಿಳೆಯದ್ದು” ಎಂದವರು ಸಿಬಿಎಸ್ ಟೆಲಿವಿಶನ್ ನೊಂದಿಗಿನ ಸಂದರ್ಶನದಲ್ಲಿ ಅವರು ಹೇಳಿದರು.

Comments are closed.