ಕರಾವಳಿ

ಶಂಕರನಾರಾಯಣ: ವಾರಾಹಿ ಕಾಲುವೆಗೆ ಬಿದ್ದು ಬಿಕಾಂ ವಿದ್ಯಾರ್ಥಿ ಸಾವು

Pinterest LinkedIn Tumblr

ಕುಂದಾಪುರ: ವಾರಾಹಿ ಕಾಲುವೆಗೆ ಬಿದ್ದು ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಶಂಕರನಾರಾಯಣದಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಸ್ಥಳೀಯ ನಿವಾಸಿ ಅಜಿತ್(18) ಮೃತ ವಿದ್ಯಾರ್ಥಿಯಾಗಿದ್ದು ಈತ ಶಂಕರನಾರಾಯಣ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ವ್ಯಾಸಂಗ ವ್ಯಾಸಂಗ ಮಾಡುತ್ತಿದ್ದ.

ನಿನ್ನೆ ತಡರಾತ್ರಿ ಹಬ್ಬಕ್ಕೆ ತೆರಳುವಾಗ ಈ ಘಟನೆ ನಂತರ ನಡೆದಿದ್ದು ಆಕಸ್ಮಿಕವಾಗಿ ಅಜಿತ್ ಕಾಲುವೆಗೆ ಬಿದ್ದಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದು ಸತತ ಕಾರ್ಯಾಚರಣೆ ಮೂಲಕ ಮೃತದೇಹ ಮೇಲಕ್ಕೆತ್ತಲಾಯಿತು.

ಅಜಿತ್ ಮರಣ ಹೊಂದಿದ್ದರಿಂದ ಇಂದು ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿತ್ತು.

ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.