ಆರೋಗ್ಯ

ಈ ತರಕಾರಿಗಳನ್ನು ಹಸಿಯಾಗಿ ತಿನ್ನಬಾರದು ! ತಿಂದರೆ ಏನಾಗುತ್ತೆ….ನೋಡಿ

Pinterest LinkedIn Tumblr

ತರಕಾರಿ ಹಾಗೂ ಹಣ್ಣುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ನಮ್ಮ ಪೂರ್ವಜರು ಬೆಂಕಿಯ ಬಳಕೆ ತಿಳಿಯುವುದಕ್ಕಿಂತಲೂ ಮಾಂಸ ಮತ್ತು ತರಕಾರಿ, ಗಡ್ಡೆಗಳನ್ನು ಹಸಿಯಾಗಿಯೇ ತಿನ್ನುತ್ತಿದ್ದರು. ಬೆಂಕಿಯ ಬಳಕೆ ಪ್ರಾರಂಭವಾದ ಬಳಿಕ ಹೆಚ್ಚಿನ ಆಹಾರಗಳನ್ನು ಬೇಯಿಸಿ ತಿನ್ನಲಾಗುತ್ತಿತ್ತು. ಕೆಲವು ಆಹಾರಗಳನ್ನು ಅಂದರೆ ಕೆಲ ತರಕಾರಿಗಳನ್ನು ಬೇಯಿಸದೆ ತಿನ್ನುವುದು ಒಳ್ಳೆಯದಲ್ಲ.

ಆಲೂಗ‌ಡ್ಡೆ, ಬೀನ್ಸ್ ಕಾಳುಗಳು, ಹಾಲು, ಬ್ರೋಕೋಲಿ, ಆಲೀವ್‌ಗಳು, ಅಣಬೆ, ಹಂದಿ ಮಾಂಸ, ಮೊಟ್ಟೆ ಇವುಗಳನ್ನು ಹಸಿಯಾಗಿ ತಿನ್ನುವುದು ಒಳ್ಳೆಯದಲ್ಲ.

ಆಲೂಗಡ್ಡೆಯನ್ನು ಹಸಿಯಾಗಿ ತಿಂದರೆ ಅದು ಹೊಟ್ಟೆಯಲ್ಲಿ ವಾಯು ಉತ್ಪತ್ತಿ ಮಾಡುತ್ತದೆ. ಅಲ್ಲದೆ ಜೀರ್ಣಕ್ರಿಯೆಯಲ್ಲಿ ತೊಂದರೆ, ತಲೆನೋವು, ವಾಕರಿಕೆ ಮೊದಲಾದವು ಎದುರಾಗುತ್ತದೆ.

ಇದಕ್ಕೆಲ್ಲಾ ಕಾರಣ ಆಲೂಗಡ್ಡೆಯಲ್ಲಿರುವ ಸ್ವಲಲೈನ್‌. ಹಸಿಯಾಗಿದ್ದಾಗ ಇದು ಆಮ್ಲೀಯ ಮತ್ತು ಜೀರ್ಣಕ್ರಿಯೆಗಳನ್ನು ಕೆಡಿಸುತ್ತದೆ. ಆದರೆ ಆಲೂಗಡ್ಡೆಯನ್ನು ಬೇಯಿಸಿದಾಗ, ಉರಿದಾಗ ಅಥವಾ ಬಾಡಿಸಿದಾಗ ಈ ಪೋಷಕಾಂಶದ ಆಮ್ಲೀಯತೆ ನಷ್ಟವಾಗಿ ಹೊಟ್ಟೆ ಕೆಡಿಸಲು ಅಸಮರ್ಥವಾಗುತ್ತದೆ. ಹಾಗಾಗಿ ಆಲೂಗಡ್ಡೆಯನ್ನೆ ಬೇಯಿಸಿ ತಿನ್ನುವುದು ಸೂಕ್ತ.

ಕಂದು ಬಣ್ಣದ ಬೀನ್ಸ್ ಕಾಳು ಹೆಚ್ಚು ಪ್ರೋಟಿನ್ ಹಾಗೂ ಆಂಟಿಕ್ಸಿನ್‌ಗಳಿಂದ ಸಮೃದ್ಧವಾಗಿದೆ. ಈ ಬೀನ್ಸ್‌ಕಾಳುಗಳನ್ನು ಹಸಿಯಾಗಿ ಅಥವಾ ಬೇಯಿಸದೆ ತಿಂದರೆ ವಾಕರಿಕೆ, ವಾಂತಿ, ಅಜೀರ್ಣತೆ, ಅತಿಸಾರ ಮೊದಲಾದ ತೊಂದರೆ ಎದುರಾಗಬಹುದು. ಇದಕ್ಕೆ ಕಾರಣ ಹಸಿ ಕಾಳುಗಳಲ್ಲಿರುವ ಕಿಣ್ವಗಳು. ಇವುಗಳ ಪ್ರಭಾವ ಇಲ್ಲವಾಗಿಸಬೇಕಾದರೆ ಮೊದಲು ಈ ಕಾಳುಗಳನ್ನು ಸಾಕಷ್ಟು ಸಮಯ ಸಾಧ್ಯವಾದರೆ ಇಡೀ ರಾತ್ರಿ ನೀರಿನಲ್ಲಿ ನೆನೆ ಹಾಕಬೇಕು. ಬಳಿಕ ಇವುಗಳನ್ನು ಬೇಯಿಸಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು.

ಹಾಲು ಉತ್ತಮ ಪೌಷ್ಠಿಕಾಂಶ. ಹಾಲನ್ನು ಬಿಸಿ ಮಾಡದೆ ಹಸಿ ಹಾಲನ್ನು ಕುಡಿಯುವುದು ಅನಾರೋಗ್ಯಕ್ಕೆ ದಾರಿ. ಹಸಿ ಹಾಲಿನಲ್ಲಿ ಅತಿಸೂಕ್ಷ್ಮ ಮಾದಕ ಕೀಟಾಣುಗಳಿದ್ದು, ಇವು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಹಾಗಾಗಿ ಹಾಲನ್ನು ಕುದಿಸಿ, ಆರಿಸಿ ಕುಡಿಯುವುದೇ ಒಳ್ಳೆಯದು.

ಬ್ರೋಕೋಲಿ: ಹಸಿರುವ ಹೂ ಕೋಸಿನಂತೆ ಕಾಣುವ ಬ್ರೋಕೋಲಿಯನ್ನು ಸಾಲೆಡ್ ರೂಪದಲ್ಲಿ ಸೇವಿಸಲು ಕೆಲವರು ಬಯಸುತ್ತಾರೆ. ಇದನ್ನು ಬೇಯಿಸಿ ತಿನ್ನಬೇಕು. ಇಲ್ಲದಿದ್ದರೆ ಅಜೀರ್ಣಕ್ಕೆ ದಾರಿಯಾಗುತ್ತದೆ. ಬ್ರೋಕೋಲಿ ಪೌಷಕಾಂಶ ಮತ್ತು ವಿವಿಧ ಖನಿತಗಳ ಆಗರವಾದ ತರಕಾರಿಯಾಗಿದೆ.

ಆಲೀವ್‌: ಆಲೀವ್ ಹಣ್ಣುಗಳು ಎಲ್ಲರಿಗೂ ಇಷ್ಟ. ಆಲೀವ್‌ಹಣ್ಣುಗಳನ್ನು ಮರದಿಂದ ಕಿತ್ತು ಹಸಿಯಾಗಿ ತಿಂದರೆ ಆರೋಗ್ಯ ಕೆಡುತ್ತದೆ. ಹಸಿ ಆಲೀವ್‌ನಲ್ಲಿರುವ ವೋಲಿಯೋ ರೋಪಿಕ್ಸ್ ಆಹಾರವನ್ನು ವಿಷಾಹಾರವಾಗಿ ಪರಿವರ್ತಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಆಲೀವ್‌ಹಣ್ಣುಗಳನ್ನು ಬೇಯಿಸಿ ತಿನ್ನುವುದು ಒಳ್ಳೆಯದು.

ಇತ್ತೀಚಿನ ದಿನಗಳಲ್ಲಿ ಅಣಬೆ ಆಹಾರ ಸೇವನೆ ಎಲ್ಲರ ಪ್ಯಾಷನ್ ಎನಿಸಿದೆ. ಅಣಬೆಯನ್ನು ಚೆನ್ನಾಗಿ ಬೇಯಿಸಿ ತಿಂದರೆ ಒಳ್ಳೆಯದು. ಹಸಿಯಾಗಿ ತಿಂದರೆ ವಿಷಾಹಾರ ಮೊದಲಾದ ಸಮಸ್ಯೆಗಳು ಎದುರಾಗಬಹುದು. ಅಣಬೆ ಒಂದು ಬಗೆಯ ಶಿಲೀಂಧ್ರವೇ ಆಗಿದ್ದು, ಅವುಗಳಲ್ಲಿ ಅತಿ ಸೂಕ್ಷ್ಮವಾದ ಜೀವಿಗಳಿರುತ್ತವೆ. ಹಾಗಾಗಿ ಕೆಲವೇ ಅಣಬೆಗಳು ಮಾತ್ರ ತಿನ್ನಲು ಯೋಗ್ಯ.

ಹಂದಿ ಮಾಂಸವೂ ಎಂದಿಗೂ ಹಸಿಯಾಗಿ ಸೇವಿಸಬಾರದು. ಏಕೆಂದರೆ ಇದರಲ್ಲಿ ಲಾಡಿ ಹುಳ ಎಂಬ ಪರವಾಲಂಬಿ ಕ್ರಿಮಿ ಇರುತ್ತದೆ. ಹಸಿಯಾಗಿ ಹಂದಿ ಮಾಂಸವನ್ನು ಸೇವಿಸಿದರೆ ಈ ಲಾಡಿ ಹುಳು ನೇರವಾಗಿ ಹೊಟ್ಟೆ ಸೇರಿ ಕರುಳಿಗೆ ಸೇರಿದರೆ ಅವುಗಳ ನಿವಾರಣೆ ಸುಲಭವಲ್ಲ. ಲಾಡಿ ಹುಳುಗಳ ಸಂಖ್ಯೆ ಹೆಚ್ಚಾದಂತೆ ದೇಹದ ಆರೋಗ್ಯವೂ ಹದಗೆಡುತ್ತದೆ. ಹಾಗಾಗಿ ಹಂದಿ ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನುವುದೇ ಒಳ್ಳೆಯದು.

ಹಸಿ ಕೋಳಿ ಮೊಟ್ಟೆ ಸೇವನೆ ಸಹ ಒಳ್ಳೆಯದಲ್ಲ. ಕೆಲವು ವ್ಯಕ್ತಿಗಳು ತಮ್ಮ ದೇಹದಾರ್ಡತೆ, ಸಾಮರ್ಥ್ಯವನ್ನು ಪ್ರದರ್ಶಿಸಲು ಹಸಿ ಮೊಟ್ಟೆ ಒಡೆದು ನೇರವಾಗಿ ಬಾಯಿಗೆ ಹಾಕಿಕೊಳ್ಳುತ್ತಾರೆ. ಇದು ಅಪಾಯವನ್ನು ಆಹ್ವಾನಿಸಿದಂತೆ.

ಹಸಿ ಮೊಟ್ಟೆಯಲ್ಲಿ ಕೆಲ ಮಾರಕ ಬ್ಯಾಕ್ಟೀರಿಯಾಗಳು ಇರುತ್ತವೆ. ಹಾಗಾಗಿ ಹಸಿಯಾಗಿ ಮೊಟ್ಟೆ ಸೇವಿಸಿದರೆ ಈ ಬ್ಯಾಕ್ಟೀರಿಯಾಗಳು ಅನಾರೋಗ್ಯವನ್ನು ತರಬಹುದು.

ಯಾವುದೇ ಆಹಾರವನ್ನು ಸೇವಿಸುವ ಮುನ್ನ ಯಾವ ರೀತಿ ಆಹಾರವನ್ನು ತಿನ್ನಬೇಕು ಎಂಬುದನ್ನು ಅರಿತು ತಿನ್ನುವುದು ಆರೋಗ್ಯದ ದೃಷ್ಠಿಯಿಂದ ಒಳ್ಳೆಯದು.

Comments are closed.