ಆರೋಗ್ಯ

ಈ ಆಹಾರಗಳನ್ನು ಸೇವಿಸುವ ಮೂಲಕ ಬೊಜ್ಜನ್ನು ಕರಗಿಸಿ…

Pinterest LinkedIn Tumblr

ಬೊಜ್ಜು ಅದರಲ್ಲೂ ಹೊಟ್ಟೆ ದಪ್ಪಗಿರುವುದು ಆಧುನಿಕ ಜೀವನ ಶೈಲಿಯಲ್ಲಿ ಸಾಮಾನ್ಯ ಎನಿಸಿದೆ.

ಪ್ರತಿನಿತ್ಯವೂ ಹೊಟ್ಟೆ ಕರಗಿಸಬೇಕು, ವ್ಯಾಯಾಮ ಮಾಡಬೇಕು ಎಂಬ ಸಂಕಲ್ಪ ಮಾಡುತ್ತೇವೆಯಾದರೂ ನಿತ್ಯದ ಒತ್ತಡದ ಜೀವನದಲ್ಲಿ ವ್ಯಾಯಾಮಕ್ಕೆ ಸಮಯವೇ ಸಾಧ್ಯವಾಗುತ್ತಿಲ್ಲ. ಹಾಗಾಗಿ ಬೊಜ್ಜು ಹೊಟ್ಟೆ ಕರಗಿಸುವುದು ಕನಸಾಗಿಯೇ ಉಳಿಯುತ್ತದೆ. ಇದಕ್ಕೆ ಪರಿಹಾರ ಎಂಬಂತೆ ವ್ಯಾಯಾಮ ಮಾಡಲು ಸಮಯ ಇಲ್ಲದವರು ಕೆಲವು ಆಹಾರಗಳನ್ನು ಸೇವಿಸುವ ಮೂಲಕ ಬೊಜ್ಜನ್ನು ತಡೆಯಬಹುದು.

ಸಿಪ್ಪೆ ಸಮೇತ ಬಾದಾಮಿಯನ್ನು ತಿನ್ನುವುದರಿಂದ ಬೊಜ್ಜು ದೂರವಾಗುತ್ತದೆ. ಈ ಬಾದಾಮಿ ಬೊಜ್ಜು ಕಡಿಮೆ ಮಾಡುವ ಜತೆಗೆ ಕ್ಯಾನ್ಸರ್ ತಡೆಗಟ್ಟುತ್ತದೆ. ಜತೆಗೆ ಚರ್ಮ ಸುಂಕಾಗುವುದನ್ನು ತಡೆಯುತ್ತದೆ. ಹಾಗೆಯೇ ಹೃದಯ ಸಂಬಂಧಿ ಕಾಯಿಲೆಗಳನ್ನು ದೂರವಿಡುತ್ತದೆ. ಅಧಿಕ ರಕ್ತದೊತ್ತಡವೂ ಬಾದಾಮಿ ಸೇವನೆಯಿಂದ ನಿಯಂತ್ರಣಕ್ಕೆ ಬರುತ್ತದೆ.

ಅಧಿಕ ನಾರಿನಾಂಶ ಇರುವ ಆಹಾರ ಸೇವನೆಯಿಂದಲೂ ಬೊಜ್ಜನ್ನು ಕರಗಿಸಬಹುದು.

ಬಸಳೆ ಸೊಪ್ಪು, ಓಡ್ಸ್ ಮತ್ತಿತರ ನಾರಿನಾಂಶ ಹೆಚ್ಚಿರುವ ಆಹಾರ ಸೇವನೆಯಿಂದ ಬೊಜ್ಜು ನಿಯಂತ್ರಣಕ್ಕೆ ಬರುತ್ತದೆ.

ಹೆಚ್ಚಿನ ನಾರಿನಾಂಶ ಇರುವ ಪದಾರ್ಥಗಳ ಸೇವನೆಯಿಂದ ಆಹಾರ ಬೇಗ ಪಚನವಾಗುವುದಿಲ್ಲ. ಇದರಿಂದ ಬೇಗೆ ಹೊಟ್ಟೆ ಹಸಿಯುವುದು ತಪ್ಪುದಲ್ಲದೆ, ಆಗಾಗ್ಗೆ ಆಹಾರ ತಿನ್ನುವ ಚಪಲದಿಂದಲೂ ಪಾರಾಗಬಹುದು.

ಹೆಚ್ಚು ಪ್ರೋಟಿನ್ ಅಂಶ ಇರುವ ಆಹಾರ ಪದಾರ್ಥಗಳ ಸೇವನೆಯಿಂದಲೂ ದೇಹದ ಕೊಬ್ಬು ಕರಗಿ ಸ್ನಾಯುಗಳು ಗಟ್ಟಿಯಾಗುತ್ತವೆ. ಹಾಗಾಗಿ ಹೆಚ್ಚು ಪ್ರೋಟಿನ್ ಇರುವ ಕೋಳಿ ಮೊಟ್ಟೆ ಸೇವನೆ ಬೊಜ್ಜನ್ನು ಕರಗಿಸಲು ನೆರವಾಗುತ್ತದೆ.

ಪಿನಟ್‌ಬಟ್ಟರ್ ಸೇವನೆ ಸಹ ಬೊಜ್ಜು ಕರಗಲು ಸಹಕಾರಿ. ಪಿನಟ್‌ಬಟ್ಟರ್ ಸೇವನೆ ದೀರ್ಘಕಾಲ ಹಸಿವನ್ನು ತಡೆದು ಹೆಚ್ಚು ತಿನ್ನುವುದನ್ನು ಕಡಿಮೆ ಮಾಡುತ್ತದೆ. ಈ ಆಹಾರ ಪದ್ದತಿಯನ್ನು ರೂಢಿಸಿಕೊಳ್ಳುವ ಮೂಲಕ ಬೊಜ್ಜು ಅಥವಾ ಸ್ಥೂಲಕಾಯ ಸಮಸ್ಯೆಯಿಂದ ಪಾರಾಗಿ ನೆಮ್ಮದಿಯಿಂದ ಇರಬಹುದು.

ಈ ಆಹಾರಗಳನ್ನು ನಿಯಮಿತವಾಗಿ ಒಂದು ಮಿತಿಯಲ್ಲಿ ಸೇವಿಸುವುದು ಉತ್ತಮ.

Comments are closed.