ಆರೋಗ್ಯ

ಬೆನ್ನು ನೋವಿನ ನಿವಾರಣೆಗೆ ಇಲ್ಲಿದೆ ಸರಳಮದ್ದು…

Pinterest LinkedIn Tumblr

ಸಾಮಾನ್ಯವಾಗಿ ವಯಸ್ಕರಿಗೆ ಬೆನ್ನುನೋವು ಕಾಡುತ್ತದೆ. ಒಂದು ಅಂದಾಜಿನ ಪ್ರಕಾರ ಶೇಕಡ 80 ರಷ್ಟು ವಯಸ್ಕರು ಬೆನ್ನುನೋವಿನಿಂದ ಬಳಲುತ್ತಿರುತ್ತಾರೆ. ಕೆಲವರಲ್ಲಿ ದೀರ್ಘಾವಧಿ ಬೆನ್ನುನೋವಿದ್ದರೆ, ಕೆಲವರಿಗೆ ತಾತ್ಕಾಲಿಕ ನೋವು ಇರುತ್ತದೆ.

ಬೆನ್ನುನೋವಿಗೆ ಕಾರಣಗಳು ಹಲವು, ಗಂಟೆಗಟ್ಟಲೇ ಕಛೇರಿಯಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದು, ಅತಿಯಾದ ಶ್ರಮದ ಕೆಲಸ, ದೀರ್ಘಕಾಲ ವಾಹನ ಚಾಲನೆಯಿಂದ ಬೆನ್ನುನೋವು ಕಾಡಬಹುದು. ಕ್ಯಾಲ್ಸಿಯಂ ಕೊರತೆಯಿಂದಲೂ ಬೆನ್ನುನೋವು ಬರಬಹುದು. ಇದು ಮಹಿಳೆಯರಲ್ಲಿ ಜಾಸ್ತಿ. ಕೆಲವರಿಗೆ ಮೂಳೆಸವೆತದಿಂದ ಬೆನ್ನುನೋವು, ಕೆಲವೊಮ್ಮೆ ಅಧಿಕ ಭಾರದ ವಸ್ತುಗಳನ್ನು ಎತ್ತುವುದರಿಂದ ಬೆನ್ನುನೋವು ಬರಬಹುದು.

ಈ ಬೆನ್ನುನೋವನ್ನು ಗುಣಪಡಿಸಲು ಸಾಂಪ್ರದಾಯಿಕ ಸರಳ ಮನೆಮದ್ದುಗಳು ಇವೆ.
ಪ್ರತಿದಿನ 8 ರಿಂದ 10 ಗ್ಲಾಸ್ ನೀರು ಕುಡಿಯುವುದರಿಂದ ಬೆನ್ನುನೋವಿನಿಂದ ಪಾರಾಗಬಹುದು. ಬೆನ್ನುನೋವು ಕಾಣಿಸಿಕೊಂಡ ತಕ್ಷಣ ದೊಡ್ಡ ಗ್ಲಾಸ್‌ನಲ್ಲಿ 2 ಗ್ಲಾಸ್ ಶುದ್ಧವಾದ ನೀರು ಕುಡಿದರೆ ನೋವು ಶಮನವಾಗುತ್ತದೆ.

ಬೆನ್ನುನೋವು ಇರುವವರು ಪ್ರತಿನಿತ್ಯ ಕ್ಯಾಲ್ಸಿಯಂ ಇರುವ ಆಹಾರ ಸೇವಿಸಬೇಕು. ಅಗತ್ಯಬಿದ್ದರೆ ಕ್ಯಾಲ್ಸಿಯಂ ಮಾತ್ರೆ, ಜೊತೆಗೆ 1-2 ಲೋಟ ಹಾಲು ಸೇವನೆ ಬೆನ್ನುನೋವನ್ನು ಕಡಿಮೆಮಾಡುತ್ತದೆ.

ಧೂಮಪಾನಿಗಳಲ್ಲಿ ಬೆನ್ನುನೋವು ಹೆಚ್ಚಾಗಿ ಕಾಣಿಸಿಕೊಳ್ಳುವುದರಿಂದ ಧೂಮಪಾನ ಬಿಟ್ಟರೆ, ಬೆನ್ನುನೋವಿನಿಂದ ಮುಕ್ತಿ ಸಿಗುತ್ತದೆ.

ಕಛೇರಿಯಲ್ಲಿ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವವರು, ಕೆಲಸದ ನಡುವೆ ನಿಯಮಿತವಾಗಿ ವಿಶ್ರಾಂತಿ ಪಡೆಯಿರಿ, ಮಧ್ಯಾಹ್ನದ ಊಟದ ನಂತರ ಒಂದು ಸಣ್ಣ ನಡಿಗೆ ಮಾಡಿ, ಆಗಾಗ್ಗೆ ಎದ್ದು ಓಡಾಡುತ್ತಿರಿ. ಬೆನ್ನುನೋವಿದ್ದರೆ ಬೆಳ್ಳುಳ್ಳಿ, ನೀಲಗಿರಿ ಎಣ್ಣೆ, ಮಸಾಜ್ ಮಾಡಿ, ಇದು ಬೆನ್ನುನೋವು ಕಡಿಮೆ ಮಾಡುತ್ತದೆ.

Comments are closed.