ಆರೋಗ್ಯ

ಬಿಳಿ ಕೂದಲನ್ನು ಕಪ್ಪು ಮಾಡಲು ಇಲ್ಲಿದೆ ಮನೆ ಮದ್ದು….

Pinterest LinkedIn Tumblr

ಇಂದಿನ ಆಧುನಿಕ ಯುಗದಲ್ಲಿ ತಲೆ ಕೂದಲಿನ ಬಣ್ಣವನ್ನು ಬದಲಾಯಿಸಿಕೊಳ್ಳುವುದು ಒಂದು ಫ್ಯಾಷನ್ ಆಗಿದೆ.

ಬಣ್ಣ ಬಣ್ಣದ ಕೂದಲಿನ ಮೂಲಕ ಸೌಂದರ್ಯಕ್ಕೆ ಮೆರಗು ನೀಡುವ ಕೇಶರಾಶಿ ಬಿಳಿಯಾದರೆ ಯಾರಿಗೂ ಇಷ್ಟವಾಗುವುದಿಲ್ಲ. ವಯಸ್ಸಾದಂತೆ ಕೂದಲು ಬಿಳಿಯಾದರು ಅದನ್ನು ಯಾರು ಇಷ್ಟ ಪಡುವುದಿಲ್ಲ.

ಹಿಂದಿನ ಕಾಲದಲ್ಲಿ ಕೂದಲು ಬಿಳಿಯಾಗುತ್ತಿದೆ ಎಂದರೆ ವಯಸ್ಸಾದ ಸೂಚನೆ ಎಂದೇ ಹೇಳಲಾಗುತ್ತಿತ್ತು. ಆದರೆ ಪ್ರಸ್ತುತ ಕಾಲಮಾನದಲ್ಲಿ ಮಾಲಿನ್ಯ, ಪೋಷಕಾಂಶ ಕೊರತೆ ಹಾಗೂ ಅನುಚಿತ ಪೋಷಣೆಯಿಂದಾಗಿ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತಿದೆ. ಹಾಗಾಗಿ ಜನ ಅಕಾಲಿಕ ಬಿಳಿ ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ಸಿಗುವ ಕಪ್ಪು ಬಣ್ಣ ಬಳಲಸುತ್ತಿದ್ದಾರೆ. ಇದರಿಂದ ಪುನಃ ಮತ್ತೆ ಬಣ್ಣದ ಬದಲಾವಣೆ ಆಗಬಹುದು.

ಮನೆಯಲ್ಲಿ ಇರುವ ಕೆಲವು ನೈಸರ್ಗಿಕ ಉತ್ಪನ್ನ ಬಳಸಿಕೊಂಡು ಕೇಶರಾಶಿ ಆರೈಕೆ ಮಾಡಿಕೊಂಡರೆ ಅಕಾಲಿಕವಾಗಿ ಕೂದಲು ಬಿಳಿಯಾಗುವುದನ್ನು ತಡೆಯಬಹುದು. ನೆಲ್ಲಿಕಾಯಿಯನ್ನು ಎಣ್ಣೆಯಲ್ಲಿ ಬೆರಸಿ, ಕೂದಲಿಗೆ ಹಚ್ಚುವುದರಿಂದ ಕೂದಲು ಬಿಳಿಯಾಗುವುದನ್ನು ತಡೆಯಬಹುದು.

ಈರುಳ್ಳಿ ಸಹ ಕೂದಲಿಗೆ ಒಳ್ಳೆಯದು. ಇದರಲ್ಲಿ ಕ್ಯಾಟಲಿಸಿಸ್ ಎಂಬ ಕಣ್ವ ಇರುತ್ತದೆ. ಇದು ಕೂದಲಿನ ಬಣ್ಣ ಬದಲಾವಣೆಯನ್ನು ನಿಯಂತ್ರಣದಲ್ಲಿ ಇಡುತ್ತದೆ. ತಲೆ ಸ್ನಾನ ಮಾಡುವ ಮೊದಲು ಈರುಳ್ಳಿ ರಸವನ್ನು ನೆತ್ತಿಗೆ ಅನ್ವಯಿಸುವುದರಿಂದ ಕೂದಲು ಬಣ್ಣ ಬದಲಾಗದು ಜೊತೆಗೆ ಕೂದಲಿನ ಆರೋಗ್ಯವು ಹಾಳಾಗದು.

ಕೂದಲಿಗೆ ತೆಂಗಿನಎಣ್ಣೆ ದಿವ್ಯೌಷಧ ಸೂಕ್ಷ್ಮಗ್ರಾಹಿಯಾದ ತೆಂಗಿನ ಎಣ್ಣೆಯನ್ನು ನೆತ್ತಿ ಕೂದಲುಗಳ ಬುಡಕ್ಕೆ ಹಚ್ಚುವುದರಿಂದ ಕೂದಲಿನ ಅನೇಕ ಸಮಸ್ಯೆ ನಿವಾರಣೆಯಾಗುತ್ತದೆ.
ಗೋರಂಟಿ ಅಥವಾ ಮದರಂಗಿ ಸಹ ಕೂದಲ ಬಣ್ಣವನ್ನು ಕಾಪಾಡುತ್ತದೆ.

ಹರಳೆಣ್ಣೆ, ನಿಂಬೆರಸ ಮತ್ತು ಮದರಂಗಿ ಪುಡಿಯನ್ನು ಬೆರಸಿ ಕೂದಲಿಗೆ ಹಚ್ಚಿ 2 ಗಂಟೆ ಬಿಟ್ಟು ಸ್ನಾನ ಮಾಡಿದರೆ, ಕೂದಲಿಗೆ ಹಿತ. ಪ್ರತಿ ವಾರಕೊಮ್ಮೆ ಈ ರೀತಿ ಮಾಡಬೇಕು.

ಕರಿಬೇವಿನ ಎಲೆಯನ್ನು ತೆಂಗಿನ ಎಣ್ಣೆಯಲ್ಲಿ ಸೇರಿಸಿ ಕುದಿಸಿ ಸೋಸಿ ತಲೆಗೆ ಹಚ್ಚಿ ನಂತರ ಸ್ನಾನ ಮಾಡಿದರೆ ಕೇಶ ಆರೋಗ್ಯ ಹಾಗೂ ಬಣ್ಣ ಕಾಪಾಡಲು ನೆರವಾಗುತ್ತದೆ.

Comments are closed.