ರಾಷ್ಟ್ರೀಯ

ಪಟ್ನಾ: ಟೀ–ಶರ್ಟ್‌, ಜೀನ್ಸ್‌ತೊಟ್ಟು ಕಚೇರಿಗೆ ಬರುವಂತಿಲ್ಲ!

Pinterest LinkedIn Tumblr

ಪಟ್ನಾ: ‘ಹಿರಿಯ ಹಾಗೂ ಕಿರಿಯ ಶ್ರೇಣಿ ಸಿಬ್ಬಂದಿ ಏಪ್ರಿಲ್‌ರಿಂದ ಟೀ–ಶರ್ಟ್‌ಹಾಗೂ ಜೀನ್ಸ್‌ಧರಿಸಿಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಬರಲು ಅವಕಾಶವಿಲ್ಲ. ಔಪಚಾರಿಕ ಉಡುಗೆ ಧರಿಸಿಕೊಂಡು ಬರಬೇಕು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್‌ಕುಮಾರ್‌ರವಿ ತಿಳಿಸಿದ್ದಾರೆ.

ಬೋಧಗಯಾದಿಂದ ಪಟ್ನಾಕ್ಕೆ ಇತ್ತೀಚೆಗೆ ವರ್ಗಾವಣೆಯಾಗಿರುವ ರವಿ, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅನಿರೀಕ್ಷತ ಪರಿಶೀಲನೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

‘ಕೆಲಸ ಮಾಡುವ ಪದ್ಧತಿ ಸುಧಾರಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಪ್ರತಿಯೊಬ್ಬ ಸಿಬ್ಬಂದಿಯೂ ತಮ್ಮ ಕೊರಳಿನಲ್ಲಿ ಗುರುತಿನ ಚೀಟಿ ಹಾಕಿಕೊಂಡು ಬರಬೇಕು. ಮೇಜಿನ (ಟೇಬಲ್‌) ಮೇಲೆ ಆಯಾ ಅಧಿಕಾರಿಗಳ ಹೆಸರಿರುವ ನಾಮಫಲಕ ಇರಲೇಬೇಕು. ಇದರಿಂದ ಜನರು ತಮ್ಮ ಕೆಲಸಕ್ಕೆ ಸಂಬಂಧಪಟ್ಟವರನ್ನು ಸಂಪರ್ಕಿಸಲು ಸಹಾಯವಾಗುತ್ತದೆ. ಕೆಲಸದ ಸಂಸ್ಕೃತಿ ಬೆಳೆಸುವುದು ತಮ್ಮ ಉದ್ದೇಶ’ ಎಂದು ಅವರು ತಿಳಿಸಿದ್ದಾರೆ. ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಸ್ವಚ್ಛತೆಗೆ ಎಲ್ಲರೂ ಸಹಕರಿಸಬೇಕು’ ಎಂದು ಹೇಳಿದ್ದಾರೆ.

Comments are closed.