ಆರೋಗ್ಯ

ಬೆನ್ನು ಮೂಳೆಯ ಆರೋಗ್ಯದ ಬಗ್ಗೆ ಗಮನ ಹರಿಸಿ…ಇಲ್ಲದಿದ್ದರೆ ಜೀವನ ಪರ್ಯಂತ ಅಸ್ವಸ್ಥತೆ ಕಡ್ಡುವುದು ಖಂಡಿತ

Pinterest LinkedIn Tumblr

ನವದೆಹಲಿ: ಬೆನ್ನು ಮೂಳೆಯ ಆರೋಗ್ಯ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಆತಂಕ ಮೂಡಿಸುವ ವಿಷಯವಾಗಿದೆ. ವ್ಯಸ್ತ, ಡಿಜಿಟಲ್ ಗ್ಯಾಡ್ಜೆಟ್ಸ್ ಗಳಿಂದ ಉಂಟಾಗುತ್ತಿರುವ ಜಡ ಜೀವನ ಶೈಲಿಯಿಂದ ಬಹುತೇಕ ಯುವಕರಲ್ಲಿ ಬೆನ್ನು ಮೂಳೆಯ ಆರೋಗ್ಯದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ಗಾಯಗಳು, ಕುಳಿತುಕೊಳ್ಳುವ ಭಂಗಿಯಲ್ಲಿ ವ್ಯತ್ಯಾಸ, ಹೆಚ್ಚು ಭಾರವಾದ ಶಾಲಾ ಬ್ಯಾಗ್ ಗಳು ಇವು ಬೆನ್ನು ನೋವು ಉಂಟಾಗಲು ಪ್ರಮುಖ ಕಾರಣವಾಗಿದ್ದು, ಬೆನ್ನು ಮೂಳೆಗಳ ಆರೋಗ್ಯ ಹಾಳಾಗುವುದಕ್ಕೆ ಪ್ರಧಾನ ಕಾರಣಗಳಾಗಿದ್ದು ಬೆನ್ನೆಲುಬಿನ ಆರೋಗ್ಯವನ್ನು ಕಡೆಗಣಿಸುವಂತಿಲ್ಲ.

ಬೆನ್ನು ನೋವಿನ ಸಮಸ್ಯೆಯಿಂದ ಜೀವನದ ಗುಣಮಟ್ಟ ಹಾಳಾಗುವುದಷ್ಟೇ ಅಲ್ಲದೇ ದಿನನಿತ್ಯದ ಕೆಲಸಗಳಿಗೂ ಅಡಚಣೆ ಉಂತಾಗುತ್ತದೆ. ಬೆನ್ನು ಮೂಳೆಯ ಸಮಸ್ಯೆ ಕಾಣಿಸಿಕೊಂಡ ಬೆನ್ನಲ್ಲೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಅತ್ಯುತ್ತಮ. ಬೆನ್ನು ಮೂಳೆಯ ಆರೋಗ್ಯದ ಬಗ್ಗೆ ಆಕಾಶ್ ಹೆಲ್ತ್ ಕೆರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆರ್ಥೋಪೆಡಿಕ್ ಸರ್ಜನ್ ಡಾ. ಆಶಿಶ್ ಚೌಧರಿ ಮಾತನಾಡಿದ್ದು, ಮೊಬೈಲ್ ಫೋನ್, ಲ್ಯಾಪ್ ಟಾಪ್, ಡೆಸ್ಕ್ ಟಾಪ್ ಬಳಕೆಯಿಂದಾಗಿ ಬೆನ್ನೆಲುಬಿನ ಆರೋಗ್ಯ ಹದಗೆಡಲಿದೆ. ಯಾವಾಗಲೂ ಈ ರೀತಿಯ ಗ್ಯಾಡ್ಜೆಟ್ಸ್ ಗಳನ್ನು ಬಳಕೆ ಮಾಡುವುದು ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದ್ದು, ಬೆನ್ನು, ಕುತ್ತಿಗೆ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಗ್ಯಾಡ್ಜೆಟ್ ಗಳನ್ನು ಬಳಕೆ ಮಾಡುವಾಗ ಹೆಚ್ಚು ಬಾಗದೇ ಸರಿಯಾದ ರೀತಿಯಲ್ಲಿ ಕುಳಿತುಕೊಳ್ಳುವುದರಿಂದ ಬೆನ್ನು ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದು ವೈದ್ಯರಾದ ಆಶಿಶ್ ಚೌಧರಿ ಹೇಳಿದ್ದಾರೆ. ಅಷ್ಟೇ ಅಲ್ಲದೇ ದಿನ ನಿತ್ಯ ವ್ಯಾಯಾಮ ಮಾಡುವುದರಿಂದ, ಧೂಮಪಾನದಿಂದ ದೂರವಿರುವುದರಿಂದ ಬೆನ್ನು ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದು ವೈದ್ಯರು ಹೇಳ್ದಿದಾರೆ.

Comments are closed.