ಆರೋಗ್ಯ

ನೀವು ಧೂಮಪಾನ ಬಿಟ್ಟಿದ್ದರೆ ನಿಮ್ಮ ಶ್ವಾಸಕೋಶದ ದುರಸ್ತಿಗೆ ನಿಮಗೆ ಸದಾ ಕಾಲ ಸಿಗುವ ಈ ಹಣ್ಣನನ್ನು ತಿನ್ನಿ….

Pinterest LinkedIn Tumblr

ವಾಷಿಂಗ್ಟನ್‌: ಧೂಮಪಾನವನ್ನು ಬಿಟ್ಟಿರುವವರು ತಮ್ಮ ಆಹಾರ ಕ್ರಮದಲ್ಲಿ ಟೊಮ್ಯಾಟೊ ಮತ್ತು ಹಣ್ಣುಗಳನ್ನು ಬಳಸಿದರೆ ಧೂಮಪಾನದಿಂದಾಗಿ ಹಾಳಾಗಿದ್ದ ಶ್ವಾಸನಾಳವನ್ನು ಸರಿಪಡಿಸಲು ಸಹಕಾರಿಯಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ಸಂಶೋಧಕರ ಪ್ರಕಾರ, ದಿನಕ್ಕೆ ಎರಡು ಟೊಮ್ಯಾಟೊಗಳನ್ನು ಅಥವಾ ಮೂರು ಪಟ್ಟು ಹೆಚ್ಚು ತಾಜಾ ಹಣ್ಣುಗಳನ್ನು ತಿನ್ನುತ್ತಿದ್ದವರ ಶ್ವಾಸನಾಳವು ದಿನಕ್ಕೆ ಒಂದು ಟೊಮೇಟೊ ಮತ್ತು ಒಂದು ಪಟ್ಟು ಹಣ್ಣುಗಳನ್ನು ತಿನ್ನುತ್ತಿದ್ದವರ ಶ್ವಾಸನಾಳಕ್ಕಿಂತ ಬೇಗ ಗುಣಮುಖವಾಗುತ್ತಿರುವುದು ಕಂಡು ಬಂದಿದೆ ಎನ್ನಲಾಗಿದೆ.

ಆಹಾರ ಕ್ರಮದಲ್ಲಿ ಇತರೆ ಆಹಾರ ಪದಾರ್ಥಗಳು ಮತ್ತು ಸಂಸ್ಕರಿಸಿದ ಹಣ್ಣು, ತರಕಾರಿಗಳಿಗೆ ಹೋಲಿಸಿದರೆ ತಾಜಾ ಹಣ್ಣು ಮತ್ತು ತರಕಾರಿ ಸೇವಿಸಿದವರಲ್ಲಿ ರಕ್ಷಣಾತ್ಮಕ ಪರಿಣಾಮವನ್ನುಂಟು ಮಾಡುತ್ತದೆ.

ಧೂಮಪಾನ ಮಾಡದವರು ಅಥವಾ ಧೂಮಪಾನ ನಿಲ್ಲಿಸಿರುವ ಎಲ್ಲ ವಯಸ್ಕರೂ ಶ್ವಾಸಕೋಶವೂ ನಿಧಾನಕ್ಕೆ ತನ್ನ ಕಾರ್ಯವನ್ನು ಕಡಿಮೆಗೊಳಿಸುತ್ತ ಸಾಗುತ್ತದೆ ಈ ವೇಳೆ ಅತ್ಯಧಿಕ ಟೊಮ್ಯಾಟೊ ಸೇವನೆಯಿಂದಾಗಿ ಶ್ವಾಸಕೋಶದ ಆರೋಗ್ಯ ಕಾಪಾಡಬಹುದು.

ಈ ಅಧ್ಯಯನದಿಂದಾಗಿ ಧೂಮಪಾನ ನಿಲ್ಲಿಸಿದವರ ಶ್ವಾಸಕೋಶದ ದುರಸ್ತಿಗೆ ಮತ್ತು ಧೂಮಪಾನ ಮಾಡದವರು ತಮ್ಮ ಶ್ವಾಸಕೋಶದ ನೈಸರ್ಗಿಕ ಆರೋಗ್ಯ ಕಾಪಾಡಿಕೊಳ್ಳಲು ಟೊಮ್ಯಾಟೊ ನೆರವಾಗುತ್ತದೆ ಎನ್ನುತ್ತಾರೆ ಸಂಶೋಧಕ ವನೆಸ್ಸಾ ಗಾರ್ಶಿಟ ಲಾರ್ಸೆನ್‌.

Comments are closed.