ಆರೋಗ್ಯ

ಕೊತ್ತಂಬರಿ ಸೊಪ್ಪಿನಲ್ಲಿರುವ ಆರೋಗ್ಯಕರ ಅಂಶಗಳು

Pinterest LinkedIn Tumblr

ಕೊತ್ತಂಬರಿ ಸೊಪ್ಪಿನ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಇದನ್ನು ಎಲ್ಲಾ ಅಡುಗೆಗಳಲ್ಲೂ ಬಳಸುತ್ತಾರೆ. ಮುಖ್ಯವಾಗಿ ತಯಾರಿಸಿದ ಆಹಾರ ಇನ್ನೂ ರುಚಿಯಾಗಿ, ಘಮಘಮ ಅನ್ನಲು ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ ಪಲಾವ್, ಸಾರು, ಸಾಂಬಾರು, ತಿಂಡಿಯ ಮೇಲೆ ಹರಡುತ್ತಾರೆ. ಇದರಿಂದ ಆಯಾ ಆಹಾರ ಇನ್ನಷ್ಟು ರುಚಿಕರವಾಗಿರುತ್ತದೆ. ಅಡುಗೆಯಲ್ಲಿ ಕೊನೆಯದಾಗಿ ಬಳಸಿದರೂ ಆರೋಗ್ಯದ ವಿಚಾರದಲ್ಲಿ ಇದು ಸದಾ ಮೊದಲ ಸ್ಥಾನದಲ್ಲಿರುತ್ತದೆ. ಇದಕ್ಕೆ ಕಾರಣ ಕೊತ್ತಂಬರಿಯಲ್ಲಿ ಪುಷ್ಕಳವಾಗಿರುವ ಆರೋಗ್ಯ ಅಂಶಗಳು. ಅವುಗಳಲ್ಲಿ ಕೆಲವನ್ನು ಈಗ ನೋಡೋಣ.

1. ಕೊತ್ತಂಬರಿಯಲ್ಲಿ ಕ್ಯಾಲರಿಗಳು ತುಂಬಾ ಕಡಿಮೆ. ಕೊಲೆಸ್ಟ್ರಾಲ್ ಇರುವುದಿಲ್ಲ. ನಮ್ಮಲ್ಲಿನ ಕೆಟ್ಟ ಕೊಲೆಸ್ಟ್ರಾಲನ್ನು ಕಡಿಮೆ ಮಾಡುವ ಗುಣ ಇದಕ್ಕಿದೆ. ಆದಕಾರಣ ಕೊಲೆಸ್ಟ್ರಾಲ್ ಬಗ್ಗೆ ಭಯಬೀಳುವವರು ಕೊತ್ತಂಬರಿ ತಿಂದರೆ ಸಾಕು. ಸ್ಥೂಲಕಾಯವನ್ನು ನಿವಾರಿಸಿಕೊಳ್ಳಬಹುದು. ದೇಹ ನಿಯಂತ್ರಣದಲ್ಲಿರುತ್ತದೆ.
2.ಕೊತ್ತಂಬರಿಯಲ್ಲಿ ಪೊಟ್ಯಾಷಿಯಂ, ಕ್ಯಾಲ್ಸಿಯಂ, ಮ್ಯಾಂಗನೀಸ್, ಐರನ್, ಮೆಗ್ನಿಷಿಯಂ ಸಮೃದ್ಧವಾಗಿರುತ್ತದೆ. ಪೊಟ್ಯಾಷಿಯಂ ಜೀವಕಣಗಳ ಆರೋಗ್ಯವನ್ನು ಉತ್ತಮಗೊಳಿಸುವುದರ ಜತೆಗೆ ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ. ಹೃದಯದ ಆರೋಗ್ಯವನ್ನು ಸಹ ಉತ್ತಮಗೊಳಿಸುತ್ತದೆ.
3. ಕೊತ್ತಂಬರಿಯಲ್ಲಿ ವಿಟಮಿನ್-ಎ, ವಿಟಮಿನ್ ಬಿ ಕಾಂಪ್ಲೆಕ್ಸ್ ಹೇರಳವಾಗಿದೆ. ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೊತ್ತಂಬರಿಯಲ್ಲಿ ವಿಟಮಿನ್-ಸಿ ಅಂಶ ಎಷ್ಟು ಜಾಸ್ತಿ ಎಂದರೆ ಒಬ್ಬ ವ್ಯಕ್ತಿಗೆ ನಿತ್ಯ ಅಗತ್ಯವಿರುವ ವಿಟಮಿನ್ ಸಿಯಲ್ಲಿನ ಶೇ.30ರಷ್ಟು ಕೊತ್ತಂಬರಿಯಲ್ಲಿ ಲಭಿಸುತ್ತದೆ.
4.ಕೊತ್ತಂಬರಿಯಲ್ಲಿನ ಐರನ್ ಅಂಶ ರಕ್ತಹೀನತೆಯನ್ನು ನಿವಾರಿಸುವುದರ ಜತೆಗೆ ಕೆಂಪುರಕ್ತ ಕಣಗಳ ಉತ್ಪಾದನೆಗೂ ಸಹಕಾರಿ.
5.ಕೊತ್ತಂಬರಿ ಬಾಯಿಯ ಕ್ಯಾನ್ಸರ್ ನಿವಾರಿಸುತ್ತದೆ. ನ್ಯೂರಾನ್‌ಗಳ ಆರೋಗ್ಯವನ್ನು ಕಾಪಾಡುತ್ತದೆ. ರಕ್ತ ಗಡ್ಡೆ ಕಟ್ಟಿಸುವಲ್ಲಿ ಪ್ರಮುಖ ಪಾತ್ರವಹಿಸುವ ವಿಟಮಿನ್ ಕೆ ಕೊತ್ತಂಬರಿಯಲ್ಲಿ ಹೇರಳವಾಗಿದೆ. ಇದರಲ್ಲಿನ ಔಷಧಿ ಗುಣಗಳನ್ನು ಅಲ್ಜೀಮರ್ ರೋಗ ಚಿಕಿತ್ಸೆಯಲ್ಲೂ ಬಳಸುತ್ತಾರೆ.

Comments are closed.