ಕರಾವಳಿ

ದೇಹದ ಪೌಷ್ಠಿಕತೆಗಾಗಿ, ಶೃಂಗಾರ ಸಾಮರ್ಥ್ಯ ಹೆಚ್ಚಿಸಲು ಮೆಡಿಸಿನ್ಸ್ ಉಪಯೋಗಿಸುತ್ತಿದ್ದೀರಾ…?

Pinterest LinkedIn Tumblr

ಸ್ಲಿಮ್ ಆಗಲು ಮಾತ್ರೆಗಳನ್ನು ಬಳಸುತ್ತಿದ್ದೀರಾ..? ಸೆಕ್ಸ್ ಸಾಮರ್ಥ್ಯ ಹೆಚ್ಚಾಗಲು ಟ್ಯಾಬ್ಲೆಟ್ ಬಳಸುತ್ತಿದ್ದೀರಾ..? ನಿಶ್ಯಕ್ತಿಗಾಗಿ, ದೇಹದ ಪೌಷ್ಠಿಕತೆಗಾಗಿ, ಮೆಡಿಸಿನ್ಸ್ ಉಪಯೋಗಿಸುತ್ತಿದ್ದೀರಾ..? ಆದರೆ ನೀವು ಅಪಾಯದಲ್ಲಿದ್ದೀರಿ ಎಂದೇ ಅರ್ಥ. ಸಾಧ್ಯವಾದಷ್ಟೂ ಇವುಗಳಿಂದ ದೂರವಾಗಿ ಎಂದು ದುಬೈ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚರಿಸುತ್ತಿದ್ದಾರೆ. ತೂಕ ಕಡಿಮೆ ಮಾಡಿಕೊಂಡು ಸ್ಲಿಮ್ ಆಗಿ ಬದಲಾಗಲು 14 ಮೆಡಿಸಿನ್ಸ್, ಶೃಂಗಾರ ಸಾಮರ್ಥ್ಯ ಹೆಚ್ಚಿಸಲು 19 ವಿಧದ ಮಾತ್ರೆಗಳು..ದೇಶದಾದ್ಯಂತ ದುಬೈ ನಾಗರೀಕರು ಅತ್ಯಧಿಕವಾಗಿ ಬಳಸುತ್ತಿದ್ದಾರೆಂದು ಒಂದು ಸೀಕ್ರೆಟ್ ಆಪರೇಷನ್ ಬಹಿರಂಗಪಡಿಸಿದೆ.

ಸ್ಲಿಮ್ ಆಗಲು ಬಳಸುವ ಮಾತ್ರೆಗಳಲ್ಲಿ ಇರುವ ನಿಷೇಧಿತ ಔಷಧಿಗಳಿಂದ ರಕ್ತದೊತ್ತಡ ಅಧಿಕವಾಗಿ, ಹೃದಯದ ವೇಗ ಹೆಚ್ಚಾಗುತ್ತದೆ. ಬಾಯಿ ಒಣಗುವುದು, ನಿದ್ದೆ ಬರದಂತಾಗುವಂತಹ ಆಪತ್ತಿನ ಪರಿಣಾಮಗಳಿಗೆ ಕಾರಣವಾಗುತ್ತದೆ. ಶೃಂಗಾರ ಸಾಮರ್ಥ್ಯ ಹೆಚ್ಚಿಸಲು ಬಳಸುತ್ತಿರುವ ಮಾತ್ರೆಗಳಲ್ಲಿ ದೀರ್ಘಕಾಲದಲ್ಲಿ ನಪುಂಸಕತ್ವಕ್ಕೆ ಕಾರಣವಾಗುವ ಅಪಾಯ ಇಲ್ಲದಿಲ್ಲ. ಹೃದಯದ ಸಾಮರ್ಥ್ಯವನ್ನು ಈ ಮಾತ್ರೆಗಳು ತೀವ್ರವಾಗಿ ಪ್ರಭಾವಿಸಿ ಹೃದಯಾಘಾತಕ್ಕೆ ಕಾರಣವಾಗುತ್ತಿವೆ ಎಂದು ಎಚ್ಚರಿಸಿದ್ದಾರೆ. ಯಾವ್ಯಾವ ಮಾತ್ರೆಗಳನ್ನು ಬಳಸಬಾರದೋ ಎಂದು ಅವರು ಪಟ್ಟಿ ಮಾಡಿ ಬಿಡುಗಡೆ ಮಾಡಿದ್ದಾರೆ..

ಸ್ಲಿಮ್ ಆಗಲು ಬಳಸುತ್ತಿರುವ ನಿಷೇಧಿತ ಔಷಧಿಗಳು:
Idol Slim Coffee
Super Slimming Herb
Refwa Royal Power
AB Slim- Cellulose Capsule
Slimming Body Capsule Plus
Miaomiao Slimming Capsule
Natural Chinese Medicine Magic Slim
Super Fat Burning
Quick Slimming Capsule Plus
Sliming Bomb
Health Slimming Capsules
Natural Max Slimming
Health Aid-Hoodia Gordonii-Kalahari Desert Capsules
Burning Fat Slimming Capsule Diet

ಶೃಂಗಾರ ಸಾಮರ್ಥ್ಯ ಹೆಚ್ಚಿಸಲು ಬಳಸುತ್ತಿರುವ ನಿಷೇಧಿತ ಮಾತ್ರೆಗಳು:
Refwa Royal Power
Power Male Sexual Stimulant
King of Romance
CONTROL All Natural Sexual Enhancement
Boss Number #Six
Bull’s Genita
Golden Night
Mamba is Hero
Neophase Natural Sex Enhance
Salute Capsules
Sextra
Weekend Prince
Wonder-Erect Male Gum
Old Chinese
XtraHRD
African Viagra
Black 3K Plus
Rhino 7K 9000
Rhino 8 Platinum 8000.

ನಮ್ಮ ಬಳಿ ಸಹ ಸ್ಲಿಮ್ ಆಗಲು, ಎತ್ತರ ಬೆಳೆಯಲು ಎನ್ನುತ್ತಾ ಅನೇಕ ವಿಧದ ಪ್ರಾಡಕ್ಟ್ಸ್ ಬಳಸುತ್ತಿರುತ್ತೇವೆ..ಅವುಗಳಿಂಗಿಂತ ಮೊದಲು ನಮ್ಮ ದೇಹವನ್ನು ನಾವು ಪ್ರೀತಿಸಿದರೆ ಆಟೋಮೆಟಿಕ್ ಆಗಿ ಇತರರಿಗೆ ಇಷ್ಟವಾಗುತ್ತೇವೆ.. ನಮ್ಮ ಆಹಾರದಲ್ಲಿ, ಜೀವನಶೈಲಿಯಲ್ಲಿ ಬದಲಾವಣೆ ತಂದುಕೊಂಡು ಸಂತೋಷವಾಗಿ ಇರಲು ಪ್ರಯತ್ನಿಸಬೇಕು ಅಷ್ಟೇ ಹೊರತು ಔಷಧಿಗಳ ಮೇಲೆ ಆಧಾರಪಟ್ಟರೆ ಇನ್ನಷ್ಟು ಸಮಸ್ಯೆಗಳನ್ನು ತಂದುಕೊಂಡವರಾಗುತ್ತೇವೆ.

Comments are closed.