
ಬೆಂಗಳೂರು: ಕನ್ನಡ ಚಿತ್ರರಂಗದ ಪ್ರೇಕ್ಷಕರ ಗಮನ ಸೆಳೆದಿದ್ದ ರೊಮ್ಯಾಂಟಿಕ್ ಡ್ರಾಮಾ ಸಿನಿಮಾ ‘ಪ್ರೇಮದ ಊರಲಿ’ ಇದೀಗ ಒಟಿಟಿ ಅಂಗಳಕ್ಕೆ ಕಾಲಿರಿಸಿದೆ.
ಮನೋಜ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಚಿತ್ರಮಂದಿರಗಳಲ್ಲಿ 50 ದಿನಗಳ ಯಶಸ್ವಿ ಪ್ರದರ್ಶನ ಪೂರೈಸಿ ಪ್ರೇಕ್ಷಕರ ನೆಚ್ಚಿನ ಫ್ಯಾಮಿಲಿ ಎಂಟರ್ಟೈನರ್ ಆಗಿ ಹೊರಹೊಮ್ಮಿದ ಈ ಚಿತ್ರ, ಇದೀಗ ಡಿಜಿಟಲ್ ಪ್ಲಾಟ್ಫಾರ್ಮನಲ್ಲಿ ಕಾಣಿಸಿಕೊಳ್ಳಲಿದೆ. ಈ ಹಿಂದೆ ಚಿತ್ರಮಂದಿರಗಳಲ್ಲಿ ಯಶಸ್ಸು ಕಂಡಿದ್ದ ಈ ಸಿನಿಮಾ ಬರೊಬ್ಬರಿ 130ಕೋಟಿಗೂ ಅಸುಪಾಸು ಗಳಿಕೆ ಕಂಡಿತ್ತು.
ಬೆಳ್ಳಿಪರದೆಯ ಮೇಲೆ ಲಕ್ಷಾಂತರ ಅಭಿಮಾನಿಗಳನ್ನು ರಂಜಿಸಿದ ‘ಪ್ರೇಮದ ಊರಲಿ’ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಜಾಗತಿಕ ಮಟ್ಟದ ಮುಂಚೂಣಿ ಒಟಿಟಿ ಸಂಸ್ಥೆಯಾದ ಅಮೆಝಾನ್ ಪ್ರೈಮ್ ವಿಡಿಯೋ ಅತ್ಯುತ್ತಮ ಮೊತ್ತಕ್ಕೆ ಪಡೆದುಕೊಂಡಿದೆ. ಇಂದು (ನವೆಂಬರ್ 17) ರಿಂದ ಈ ಸಿನಿಮಾ ಪ್ರೈಮ್ ವಿಡಿಯೋ ಒಟಿಟಿ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ.
ಅಮೆಜಾನ್ ಪ್ರೈಮ್ನಲ್ಲಿ ಪ್ರದರ್ಶನ: ನವೆಂಬರ್ 17ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಪ್ರೇಮ, ಭಾವನೆ ಮತ್ತು ಸಂಬಂಧಗಳ ಸುತ್ತ ಹೆಣೆದಿರುವ ‘ಪ್ರೇಮದ ಊರಲಿ’ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇಂದಿನಿಂದಲೇ ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರರು ಈ ಸಿನಿಮಾವನ್ನು ಮನೆಯಲ್ಲಿಯೇ ಕುಳಿತು ಒಟಿಟಿಯಲ್ಲಿ ವೀಕ್ಷಿಸಬಹುದು.
Comments are closed.