ಕುಂದಾಪುರ: ಹೆಮ್ಮಾಡಿ ಮೂಲಕವಾಗಿ ಪ್ರಸಿದ್ಧ ತೀರ್ಥ ಕ್ಷೇತ್ರ ಕೊಲ್ಲೂರಿಗೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಂಡ್ಸೆ-ಚಿತ್ತೂರಿನಿಂದ ಮೊದಲ್ಘೊಂಡು ಇಡೂರು-ಕುಂಜ್ಞಾಡಿ, ಹೊಸೂರು ಹಾಗೂ ಹಾಲ್ಕಲ್-ಕೊಲ್ಲೂರು ರಸ್ತೆಯಲ್ಲಿ ಸುಗಮ ಸಂಚಾರ ದುಸ್ತರವಾಗಿದೆ. ನೆಂಪು ಕ್ರಾಸ್ನಿಂದ ಅಲ್ಲಲ್ಲಿ ಬ್ರಹತ್ ಗಾತ್ರದ ಹೊಂಡ-ಗುಂಡಿಗಳು ಬಿದ್ದಿದೆ.

(ಚಿತ್ರ: ದೊಡ್ಡ ಗಾತ್ರದ ಕಲ್ಲು ಬಡಿದು ಕಾರೊಂದರ ಗಾಜು ಹಾನಿಗೀಡಾಗಿರುವುದು)
ಇನ್ನು ಬೈಂದೂರು-ಕೊಲ್ಲೂರು ರಸ್ತೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದ್ದು ಹಾಲ್ಕಲ್ನಿಂದ ಕೊಲ್ಲೂರು ಸಾಗುವಾಗ ಬಹಳಷ್ಟು ಗುಂಡಿಗಳು ವಾಹನ ಸವಾರರಿಗೆ ಮಾರಕವಾಗಿದೆ. ಕೆಲವು ಹೊಂಡಗಳಲ್ಲಿ ದೊಡ್ಡ ಗಾತ್ರದ ಕಲ್ಲುಗಳನ್ನು ಹಾಕಿದ್ದು ವೇಗವಾಗಿ ಬರುವ ವಾಹನಗಳ ಚಕ್ರಕ್ಕೆ ಸಿಕ್ಕು ಇತರೆ ವಾಹನಗಳ ಗಾಜು ಹಾಗೂ ವಾಹನಗಳಿಗೆ ತಗುಲಿ ಹಾನಿಯುಂಟಾಗುತ್ತಿದೆ. ಅಲ್ಲದೆ ದ್ವಿಚಕ್ರವಾಹನ ಸವಾರರಿಗೆ ಇದು ಅಪಾಯಕಾರಿಯಾಗಿದೆ. ಸ್ವಲ್ಪವೇಹೆಚ್ಚು ಕಮ್ಮಿಯಾದರೂ ಸಾವು-ನೋವು ನಿಶ್ಚಿತ ಎಂಬಂತಾಗಿದೆ ಇಲ್ಲಿನ ದುಸ್ಥಿತಿ. ರಸ್ತೆಯಲ್ಲಿ ಹಲವಾರು ಸಮಸ್ಯೆಗಳಿದ್ದರೂ ಸಂಬಂದಪಟ್ಟವರು ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆಂದು ವಾಹನ ಸವಾರರು ಆಕ್ರೋಷ ಹೊರಹಾಕಿದ್ದಾರೆ.
Comments are closed.