ಕರಾವಳಿ

ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಕಾಳಿಂಗ ಸುಬ್ರಹ್ಮಣ್ಯ ದೇವಸ್ಥಾನ; ಷಷ್ಠಿ ಮಹೋತ್ಸವದ ಆಮಂತ್ರಣ ಪತ್ರ ಬಿಡುಗಡೆ 

Pinterest LinkedIn Tumblr

ಕುಂದಾಪುರ: ಪುರಾಣ ಪ್ರಸಿದ್ಧವಾದ ಶ್ರೀ ಕ್ಷೇತ್ರ ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಕಾಳಿಂಗ (ಸುಬ್ರಮಣ್ಯ) ದೇವಸ್ಥಾನದಲ್ಲಿ ಡಿ.15ರಂದು ನಡೆಯಲಿರುವ ಹಿರಿ ಷಷ್ಠಿ (ಚಂಪಾ ಷಷ್ಠಿ) ಹಾಗೂ ಕಿರಿ ಷಷ್ಠಿ (ಸ್ಕಂದ ಷಷ್ಠಿ) ಪ್ರಯುಕ್ತ ಸಾರ್ವಜನಿಕರ ಪೂರ್ವಭಾವಿ ಸಭೆ ಹಾಗೂ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮವು ರವಿವಾರ ನಡೆಯಿತು.

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದು ಷಷ್ಠಿ ಮಹೋತ್ಸವದ ಆಮಂತ್ರಣ ಪತ್ರವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯತು.

ಈ ಸಭೆಯಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರಾದ ಸತ್ಯನಾರಾಯಣ ಪುರಾಣಿಕ್, ಕೆ. ರಂಜಿತ್ ಕುಮಾರ್ ಶೆಟ್ಟಿ ಸಲ್ವಾಡಿ, ಸುಧೀರ್ ಜಿ. ಕಾಳಾವರ, ರಾಜೀವಿ ಕಾಳಾವರ, ಸುಧಾಕರ್ ಶೆಟ್ಟಿ ಕಾಳಾವರ, ಚಂದ್ರಶೇಖರ್ ಶೆಟ್ಟಿಗಾರ್ ಅಸೋಡು, ಅಕ್ಷತಾ ಶೆಟ್ಟಿ ಕಾಳಾವರ ಹಾಗೂ ರತ್ನಾಕರ ಶೆಟ್ಟಿ ಕಾಳಾವರ ಉಪಸ್ಥಿತರಿದ್ದರು.

ವ್ಯವಸ್ಥಾಪನ ಸಮಿತಿ ಸದಸ್ಯರಾದ ಕೆ. ರಂಜಿತ್ ಕುಮಾರ್ ಶೆಟ್ಟಿ ಸಲ್ವಾಡಿ ಸ್ವಾಗತಿಸಿದರು, ಉಪನ್ಯಾಸಕ ಕಾಳಾವರ ಉದಯ್ ಕುಮಾರ್ ಶೆಟ್ಟಿ ನಿರೂಪಿಸಿ, ವಂದಿಸಿದರು.

Comments are closed.