ಆರೋಗ್ಯ

ಬೊಜ್ಜು ಕರಗಿಸಲು ಸಹಾಯ ಮಾಡುವ ಸೂಪ್

Pinterest LinkedIn Tumblr

ಸೂಪ್ ಅಥವಾ ಸಾರು, ಇದು ದ್ರವ ಆಹಾರ ಆಗಿರುವುದರಿಂದ ದೇಹದಲ್ಲಿ ಬೇಗನೆ ಜೀರ್ಣ ಆಗುವುದು ಮತ್ತು ಸವಿಯಲು ರುಚಿಕರ ಆಗಿರುವುದು. ತರಕಾರಿ ಅಥವಾ ಮಾಂಸದ ಸೂಪ್ ಯವುದೇ ಆಗಿರಲಿ ಎರಡರಲ್ಲೂ ಪೌಷ್ಟಿಕಾಂಶದ ಗುಣಗಳು ನೀರಿನಲ್ಲಿ ಬೆರೆಯುವುದು (ಹೆಚ್ಚು ಬೇಯಿಸಿದರೆ ನೀರಿನ ಜೊತೆ ಅವುಗಳು ಕೂಡ ಆವಿಯಾಗುವುದು), ಅದಕ್ಕಾಗಿ ಒಂದು ಪಾತ್ರೆಯಲ್ಲಿ ಮುಚ್ಚಳ ಮುಚ್ಚಿ ಬೇಯಿಸುವುದು ಜಾಣ್ಮೆ.

ತೂಕ ಇಳಿಸಲು ಈ ಬಗೆಯ ಸೂಪ್ ಗಳು ಉತ್ತಮ ಆಯ್ಕೆಯಾಗಿವೆ. ಇವುಗಳ ಸೇವನೆಯಿಂದ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ದೇಹದಿಂದ ಹೆಚ್ಚು ಕ್ಯಾಲೋರಿಗಳನ್ನು ವ್ಯಯಮಾಡಲು ನೆರವಾಗುತ್ತದೆ. ಅಲ್ಲದೇ ಹೊಟ್ಟೆ ತುಂಬಿರುವ ಭಾವನೆ ತರಿಸಿ ನೀವು ಬೇಗನೆ ಆರೋಗ್ಯಕರ ರೀತಿಯಲ್ಲಿ ತೂಕ ಕಳೆದುಕೊಳ್ಳುವಲ್ಲಿ ಸಹಾಯಮಾಡುತ್ತದೆ.

೧.ಕೋಸಿನ ಸಾರು(ಸೂಪ್)
ಒಂದು ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ, ಸಣ್ಣಗೆ ಕತ್ತರಿಸುವ ಈರುಳ್ಳಿ ಹಾಕಿ, ಚೆನ್ನಾಗಿ ಉರಿದುಕೊಳ್ಳಿ.
ಇದಕ್ಕೆ ಮೆಣಸು, ಉಪ್ಪು ಮತ್ತು ಟೊಮೊಟೊವನ್ನು ಸೇರಿಸಿ, ಉರಿಯಿರಿ.
ಇದಕ್ಕೆ ಕೊಸನ್ನು ಸೇರಿಸಿ ನೀರನ್ನು ಹಾಕಿ 20 ನಿಮಿಷಗಳ ಕಾಲ ಬೇಯಿಸಲು ಬಿಡಿ.
ನಂತರ ಕೆಳಗಿಳಿಸಿ ಸವಿಯಿರಿ.

೨.ಕಪ್ಪು ಬೀನ್ಸ್ ಸೂಪ್
4 ಬೆಳ್ಳುಳ್ಳಿ ಎಸಳು, 1 ಈರುಳ್ಳಿ, 1 ದೊಡ್ಡ ಚಮಚ ಜೀರಿಗೆ ಇಷ್ಟನ್ನೂ ಆಲಿವ್ ಎಣ್ಣೆಯಲ್ಲಿ ಉರಿದು, ಬಳಿಕ ಮೂರು ಟೊಮಾಟೋ, ನಾಲ್ಕು ಹಸಿ ಮೆಣಸಿನಕಾಯಿ, ಹಾಗೂ ರಾತ್ರಿಯಿಡೀ ನೆನೆಸಿಟ್ಟ ಕಪ್ಪು ಬೀನ್ಸ್ ಗಳನ್ನು ಹಾಕಿ ಸಾಕಷ್ಟು ನೀರು ಬೆರೆಸಿ ಸುಮಾರು ಇಪ್ಪತ್ತು ನಿಮಿಷ ಕುದಿಸಿ.
ನಂತರ ಇದನ್ನು ಸವಿಯಿರಿ.

೩.ಬೆಳ್ಳುಳ್ಳಿ ಕ್ಯಾರೆಟ್ ಸೂಪ್
ಒಂದು ಪಾತ್ರೆಗೆ ಎಣ್ಣೆ ಹಾಕಿ, ಅದಕ್ಕೆ ತುರಿದ ಕ್ಯಾರೆಟ್, ಜಜ್ಜಿದ ಬೆಳ್ಳುಳ್ಳಿ, ಮೆಣಸಿನ ಪುಡಿ ಹಾಕಿ ಉರಿಯಿರಿ. ಇದಕ್ಕೆ ನೀರು ಸೇರಿಸಿ ಕುದಿಸಿ, ಇದು ಸ್ವಲ್ಪ ಖಾರ ಆಗಿದ್ದರೂ ತೂಕ ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದನ್ನು ಊಟಕ್ಕೆ ಮೊದಲು ಸೇವಿಸಿ.

೪.ಬಿಟ್ರುಟ್ ಸೂಪ್
ಇದು ತೂಕ ಇಳಿಸಲು ಮಾತ್ರವಲ್ಲ, ರಕ್ತಕಣಗಳನ್ನು ಹೆಚ್ಚಿಸಲೂ ನೆರವಾಗುತ್ತದೆ. ಇದರ ಸೇವನೆಯಿಂದ ಚರ್ಮದ ಕಾಂತಿ ಹೆಚ್ಚುತ್ತದೆ ಹಾಗೂ ಕೂದಲು ಸಹಾ ಉತ್ತಮವಾಗುತ್ತದೆ. ಈ ಸೂಪ್ ತಯಾರಿಸಲು ಒಂದು ಬೀಟ್ರೂಟ್ ಅನ್ನು ಇಡಿಯಾಗಿ ಪ್ರೆಶರ್ ಕುಕ್ಕರಿನಲ್ಲಿ ನಾಲ್ಕು ಸೀಟಿ ಬರುವವರೆಗೆ ಕುದಿಸಿ. ಬಳಿಕ ಇದನ್ನು ಚಿಕ್ಕದಾಗಿ ಕತ್ತರಿಸಿ ಹಿಂಡಿ ರಸ ಸಂಗ್ರಹಿಸಿ. ಒಂದು ಪಾತ್ರೆಯಲ್ಲಿ ಕೊಂಚ ಓಟ್ಸ್ ರವೆ, ಈರುಳ್ಳಿ, ಟೊಮಾಟೋ ಹಾಗೂ ಬೀಟ್ರೂಟ್ ನೀರನ್ನು ಹಾಕಿ ಸುಮಾರು ಹತ್ತು ನಿಮಿಷದವರೆಗೆ ಕುದಿಸಿ. ಬಿಸಿಯಾಗಿದ್ದಂತೆಯೇ ಸೂಪ್ ಕುಡಿಯಲು ರುಚಿಕರವಾಗಿರುತ್ತದೆ.

Comments are closed.