ಆರೋಗ್ಯ

ಬಣ್ಣದಿಂದ ಸ್ವಭಾವ ಟ್ಯಾಲಿ ಮಾಡಿ

Pinterest LinkedIn Tumblr

ಸಾಮಾನ್ಯವಾಗಿ ನಮಗೆ ಬೇರೆಯವರ ಸ್ವಭಾವದ ಬಗ್ಗೆ ಚೆನ್ನಾಗಿಯೇ ಅರ್ಥವಾಗುತ್ತದೆ. ಅವರೊಂದಿಗೆ ಎಷ್ಟು ಹೆಚ್ಚು ಹೊತ್ತು ಕಳೆದರೆ ಅಷ್ಟು ಹೆಚ್ಚು ಅರ್ಥವಾಗುತ್ತದೆ. ಆದರೆ ನಮ್ಮ ಬಗ್ಗೆ ನಮಗೆ ಬಹಳಷ್ಟು ಗೊತ್ತಿರಲ್ಲ. ನಮ್ಮ ಬಗ್ಗೆ ನಾವು ತಿಳಿದುಕೊಳ್ಳಬೇಕೆಂದು ತುಂಬಾ ಆಸಕ್ತಿ ಇರುತ್ತದೆ. ಹಾಗಾಗಿಯೇ ಜ್ಯೋತಿಷ್ಯ, ಹಾಳುಮೂಳು ಎಂದು ಮೊರೆಹೋಗುತ್ತಾರೆ. ನೀವು ಇಂತಹವರು, ನೀವು ಈ ರೀತಿ ಮಾಡುತ್ತೀರಿ ಎಂದು ಅವರು ಹೇಳುತ್ತಿದ್ದರೆ ಟ್ಯಾಲಿ ಮಾಡಿಕೊಳ್ಳುತ್ತೇವೆ.

ನೀವು ಆಯ್ಕೆ ಮಾಡಿಕೊಳ್ಳುವ ಬಣ್ಣದ ಆಧಾರವಾಗಿ ನಿಮ್ಮ ಸ್ವಭಾವ ತಿಳಿದುಕೊಳ್ಳಬಹುದು. ಅದು ಹೇಗೆ ಅಂತ ಈಗ ನೋಡೋಣ. ನಿಮಗೆ 5 ಸೆಕೆಂಡ್ ಟೈಮ್ ಅಷ್ಟೇ. ನಿಮಗಿಷ್ಟವಾದ ಇಲ್ಲಿನ ಯಾವುದಾದರು ಒಂದು ಬಣ್ಣವನ್ನು ಆಯ್ಕೆ ಮಾಡಿಕೊಳ್ಳಿ. ಬಳಿಕ ನಿಮ್ಮ ಸ್ವಭಾವ ಆ ಬಣ್ಣದ ಆಧಾರವಾಗಿ ತಿಳಿದುಕೊಳ್ಳಿ.

ಕೆಂಪು ಬಣ್ಣ
ಕೆಂಪು ಬಣ್ಣ ಇಷ್ಟಪಡುವವರು ತುಂಬಾ ಕೋಮಲವಾಗಿ ಇರುತ್ತಾರೆ. ಇವರಿಗೆ ಸಹನೆ ಕಡಿಮೆ. ಪ್ರತಿ ಚಿಕ್ಕ ವಿಷಯಕ್ಕೂ ಕುಗ್ಗಿಹೋಗುತ್ತಾರೆ. ತನ್ನ ಸುತ್ತಲೂ ಅನ್ಯಾಯ ನಡೆದರೆ ನೋಡುತ್ತಾ ಇರಲ್ಲ.

ನೀಲಿ ಬಣ್ಣ
ಎಲ್ಲರನ್ನೂ ಬೆರೆಸಿಕೊಂಡು ಮುಂದೆ ಸಾಗುವ ಗುಣ. ಇವರು ತುಂಬಾ ಮೌನ. ಪ್ರೀತಿಯುಳ್ಳವರಾಗಿರುತ್ತಾರೆ. ತನ್ನ ಕರ್ತವ್ಯವನ್ನು ನಿರ್ವಹಿಸುವಲ್ಲಿ ಯಾವುದೇ ಲೋಪ ಮಾಡಲ್ಲ. ಯವುದೇ ತಪ್ಪು ಮಾಡಬಾರದು ಎಂದುಕೊಳ್ಳುತ್ತಾರೆ. ನಗುವುದು, ನಗಿಸುವುದು ಇವರಿಗೆ ಇಷ್ಟ.

ಕಪ್ಪು ಬಣ್ಣ
ಇವರು ತುಂಬಾ ಆಳವಾದ ಆಲೋಚನೆ ಉಳ್ಳವರು. ಎಷ್ಟೆ ಬಣ್ಣಗಳಿದ್ದರೂ ಎಲ್ಲ ಬಣ್ಣಗಳನ್ನು ತನ್ನಲ್ಲಿ ಅಡಗಿಸಿಡುವ ಗುಣ ಕಪ್ಪು ಬಣ್ಣಕ್ಕಿದೆ. ಅಂದರೆ ಇವರಿಗೆ ಎಷ್ಟೋ ನೋವು, ಸಮಸ್ಯೆಗಳಿದ್ದರೂ ಹೊರಗೆ ತೋರಿಸಿಕೊಳ್ಳದೆ ತಮ್ಮಲ್ಲೇ ಇಟ್ಟುಕೊಳ್ಳುತ್ತಾರೆ. ಉದಾಹಣೆಗೆ ಹೇಳಬೇಕಂದರೆ ಶಿವ. ಶಿವನು ಹಲವಾರು ಭಾವಗಳ ಸಂಗಮ. ಈ ಬಣ್ಣ ಇಷ್ಟಪಡುವವರು ಅಷ್ಟೇ. ಹಾಲಾಹಲವನ್ನೇ ಕುಡಿದು ಎಂತಹ ವಿಷವನ್ನೂ ತನ್ನಲ್ಲೇ ಇಟ್ಟುಕೊಂಡ ಎಂದರೆ ಬಿಡಿಸಿ ಹೇಳಬೇಕಾಗಿಲ್ಲ.

ಬಿಳಿ ಬಣ್ಣ…
ಈ ಬಣ್ಣ ಇಷ್ಟಪಡುವವರು ಸಮಾಜದಲ್ಲಿ ಎಲ್ಲರಿಗಿಂತ ಮುಂದೆ ಇರಬೇಕೆಂದು ಭಾವಿಸುತ್ತಾರೆ. ಹೆಚ್ಚು ಕಷ್ಟಪಡದೆ ವಿಜಯ ಸಾಧಿಸುತ್ತಾರೆ ಕೂಡ. ಅವರಿಗೆ ಬೇಕಾದದ್ದನು ಪಡೆಯಲು ತುಂಬಾ ಕಷ್ಟಪಡುತ್ತಾರೆ. ಸಂಬಂಧಗಳಿಗೆ ಬೆಲೆ ಕೊಡುತ್ತಾರೆ.

ಗುಲಾಬಿ ಬಣ್ಣ…
ಈ ಬಣ್ಣ ಇಷ್ಟಪಡುವವರು ತುಂಬಾ ಎಮೋಷನಲ್ ಆಗಿರುತ್ತಾರೆ. ಪ್ರತಿ ವಿಷಯವನ್ನು ನಿಧಾನವಾಗಿ, ಸಂಪೂರ್ಣಗೊಳಿಸುವುದು ಇವರಿಗಿಷ್ಟ.

ಕಿತ್ತಳೆ ಬಣ್ಣ…
ಈ ಬಣ್ಣ ಇಷ್ಟಪಡುವವರು ತಮ್ಮ ಜೀವನದಲ್ಲಿ ದೇವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ನಂಬಿಕೆ ಜಾಸ್ತಿ. ಕೋಪವನ್ನೂ ಬೇಗ ತೋರಿಸಲ್ಲ. ಪ್ರತಿ ಆಲೋಚನೆಯನ್ನೂ ಹಿರಿಯರೊಂದಿಗೆ ಹಂಚಿಕೊಂಡು ಪರಿಹರಿಸಲು ಪ್ರಯತ್ನಿಸುತ್ತಾರೆ. ಒಡಹುಟ್ಟಿದವರನ್ನು ತುಂಬಾ ಪ್ರೀತಿಸುತ್ತಾರೆ. ಅವರಿಗಾಗಿ ಪ್ರಾಣತ್ಯಾಗಕ್ಕೂ ಇವರು ಸಿದ್ಧ.

ಹಳದಿ ಬಣ್ಣ
ಇವರು ಎಲ್ಲರೊಂದಿಗೆ ಬೆರೆಯುವ ಗುಣ ಉಳ್ಳವರು. ಎಲ್ಲರೂ ಸಂತೋಷವಾಗಿ ಇರಬೇಕೆಂದು ಬಯಸುತ್ತಾರೆ. ಸ್ನೇಹಿತರ ಜತೆಗೆ ಹೆಚ್ಚಾಗಿ ಕಳೆಯಲು ಇಷ್ಟಪಡುತ್ತಾರೆ. ಅವರ ಸುತ್ತಲೂ ಇರುವವರನ್ನು ತುಂಬಾ ಇಷ್ಟಪಡುತ್ತಾರೆ.

ಹಸಿರು ಬಣ್ಣ
ಕುಟುಂಬಿಕರಿಗೆ, ಸಂಪ್ರದಾಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಪ್ರತಿ ವಿಷಯವನ್ನೂ ಅಳೆದು ತೂಗಿ ನಿರ್ಧರಿಸುತ್ತಾರೆ. ಪ್ರತಿಯೊಬ್ಬರನ್ನೂ ಕುರುಡಾಗಿ ನಂಬಿ ಮೋಸ ಹೋಗುತ್ತಾರೆ. ಬೇರೆಯವರನ್ನು ಆಟ ಆಡಿಸುವುದೆಂದರೆ ತುಂಬಾ ಇಷ್ಟ. ಬೇರೆಯವರ ಮೇಲೆ ಎಷ್ಟೇ ಕೋಪ ಇದ್ದರೂ ತೋರಿಸಿಕೊಳ್ಳಲ್ಲ.

ನೇರಳೆ ಬಣ್ಣ…
ಇವರು ಕನಸಿನ ಜಗತ್ತಿನಲ್ಲಿ ಜೀವಿಸುತ್ತಿರುತ್ತಾರೆ. ಇವರಿಗೆ ಲಲಿತಕಲೆಗಳಲ್ಲಿ ಆಸಕ್ತಿ ಇರುತ್ತದೆ. ಹೆಚ್ಚು ಹಣ ಖರ್ಚು ಮಾಡುತ್ತಾರೆ. ಇವರಿಗೆ ಒಳ್ಳೆಯ ಮನಸ್ಸಿರುತ್ತದೆ. ಸಂತೋಷವನ್ನು ಹಂಚುತ್ತಾರೆ. ಇವರು ಎಲ್ಲಿರುತ್ತಾರೋ ಅಲ್ಲಿ ಖುಷಿ ಇರುತ್ತದೆ.

Comments are closed.