ಆರೋಗ್ಯ

ಸ್ತನ್ಯಪಾನ ಮಾಡುವಾಗ ನಿಂಬೆ ನೀರಿನ ಸೇವನೆಯಿಂದ ಆಗುವ ಪ್ರಯೋಜನಗಳು

Pinterest LinkedIn Tumblr

ನೀವು ಎದೆಹಾಲುಣಿಸುತ್ತಿರುವ ತಾಯಿಯೇ? ನಿಮ್ಮ ಮಗುವಿಗೆ ಶುದ್ಧವಾದ ಮತ್ತು ಆರೋಗ್ಯಕರ ಹಾಲನ್ನು ಕುಡಿಸಲು ನೀವು ಬಯಸುವಿರೇ? ಮತ್ತು ನಿಮ್ಮ ಮಗುವಿನ ಯಾವುದೇ ಉದರ ಸಮಸ್ಯೆಯನ್ನು ತಡೆಯಲು ನೀವು ಪ್ರಯತ್ನಿಸುತ್ತಿದ್ದರೆ ಈ ಲೇಖನ ನಿಮಗಾಗಿ. ಸ್ತನ್ಯಪಾನ ಮಾಡಿಸುವಾಗ ನಿಂಬೆ ನೀರನ್ನು ಕುಡಿಯುವುದರಿಂದ ಆಗುವ ಲಾಭಗಳನ್ನು ಇಲ್ಲಿ ತಿಳಿದುಕೊಳ್ಳಿ.

ನಿಂಬೆ ನೀರು
ನಿಂಬೆಹಣ್ಣು ಸುಲಭವಾಗಿ ಸಿಗುವ ಸಿಟ್ರಸ್ ಹಣ್ಣು. ಇದರಲ್ಲಿ ೫% ಸಿಟ್ರಸ್ ಆಮ್ಲ ಇದ್ದು, ಇದರ ಜೊತೆಗೆ ವಿಟಮಿನ್ C, B, ಕ್ಯಾಲ್ಸಿಯಂ, ಮೆಗ್ನೀಷಿಯಂ, ಫಾಸ್ಫರಸ್, ಕಾರ್ಬೋಹೈಡ್ರೇಟ್ಸ್ ಮತ್ತು ಪ್ರೊಟೀನ್ ಅನ್ನು ತನ್ನಲ್ಲಿ ಇರಿಸಿಕೊಂಡಿದೆ.

ಎದೆಹಾಲುಣಿಸುವಾಗ ನಿಂಬೆ ನೀರನ್ನು ಸೇವಿಸುವುದರಿಂದ ನಿಮಗೆ ಮತ್ತು ಮಗುವಿಗೆ ಆಗುವ ಪ್ರಯೋಜನಗಳು

೧.ಆರೋಗ್ಯಕರ ಹಾಲು ಪೂರೈಕೆ
ನಿಂಬೆ ನೀರನ್ನು ಸೇವಿಸುವುದರಿಂದ ದೇಹವನ್ನು ಶುದ್ಧಗೊಳಿಸುವ ಜೊತೆಗೆ ತಾಜಾ ಆಗಿರಿಸಲು ನೆರವಾಗುತ್ತದೆ ಮತ್ತು ದೇಹದಲ್ಲಿ ನೀರಿನ ಕೊರತೆ ಕಾಣದಂತೆ ಕಾಪಾಡುತ್ತದೆ. ಇದರಿಂದ ಮಗುವಿಗೆ ಆರೋಗ್ಯಕರ ಹಾಲನ್ನು ನೀವು ಕುಡಿಸಬಹುದು.

೨.ಜೀರ್ಣಕ್ರಿಯೆ ಸಮಸ್ಯೆಯನ್ನು ತಡೆಯುತ್ತದೆ
ನಿಂಬೆ ರಸ ಜೀರ್ಣ ಕ್ರಿಯೆ ಸರಾಗವಾಗಿ ಆಗಲು ನೆರವಾಗುತ್ತದೆ. ನೀವು ಎದೆಹಾಲುಣಿಸುವಾಗ ನಿಂಬೆರಸವನ್ನು ನೀರಿನ ಜೊತೆ ಕುಡಿಯುದರಿಂದ ಮಗುವಿನ ಉದರದ ಸಮಸ್ಯೆ ಅದರಲ್ಲೂ ಅಜೀರ್ಣ ಸಮಸ್ಯೆಯನ್ನು ಶಮನಮಾಡಬಹುದು.

೩.ಮಗುವಿಗೆ ಶುದ್ಧ ಹಾಲು ಸಿಗುತ್ತದೆ
ಶುದ್ಧ ಹಾಲು ಎಂದರೆ, ದೇಹದ ಒಳಗೆ ಇರುವ ವಿಷಯುಕ್ತ ಅಂಶವನ್ನು ಎದೆಹಾಲಿಗೆ ಸೇರದಂತೆ ನೋಡಿಕೊಂಡು ವಿಷಮುಕ್ತ ಹಾಲನ್ನು ಮಗುವಿಗೆ ನೀಡುವುದು. ನಿಂಬೆರಸವನ್ನು ನೀರಿನ ಜೊತೆ ಸೇವಿಸುವುದರಿಂದ ವಿಷಮುಕ್ತ ಅಂಶವನ್ನು ಎದೆಹಾಲಿಗೆ ಸೇರದಂತೆ ತಡೆಯುತ್ತದೆ. ಇದರಿಂದ ಮಗುವು ಶುದ್ಧ ಮತ್ತು ಪೌಷ್ಟಿಕ ಹಾಲನ್ನು ಸೇವಿಸಲು ಸಹಾಯವಾಗುತ್ತದೆ.

೪.ಗಂಟಲು ನೋವಿನಿಂದ ಅಥವಾ ಊತದಿಂದ ಮುಕ್ತಿ ಪಡೆಯಬಹುದು
ನಿಂಬೆರಸದ ನೀರು ಪೋಷಣೆ ಮಾಡುತ್ತಿರುವ ತಾಯಿಯ ಗಂಟಲು ನೋವು ಮತ್ತು/ಅಥವಾ ಗಂಟಲಿನ ಊತದಿಂದ ಮುಕ್ತಿ ಪಡೆಯಬಹುದು. ಇದು ಪರಿಣಾಮಕಾರಿಯಾಗಿ ಗಂಟಲಿನ ಸೋಂಕನ್ನು ನಿವಾರಿಸುತ್ತದೆ.

೫.ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಲು ಸಹಾಯವಾಗುತ್ತದೆ
ಹೆರಿಗೆ ನಂತರ ಎದೆಹಾಲುಣಿಸುವ ತಾಯಿಯರು ಅಧಿಕ ರಕ್ತದೊತ್ತಡದಿಂದ ಬಳಲುವರು, ನಿಂಬೆರಸದ ನೀರಿನಲ್ಲಿ ಪೊಟ್ಯಾಸಿಯಂ ಹೇರಳವಾಗಿದ್ದು, ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯಮಾಡುತ್ತದೆ. ಇದನ್ನು ನಿಯಮಿತವಾಗಿ ತೆಗೆದುಕೊಳ್ಳುವುದರಿಂದ ವಾಕರಿಕೆ, ಆಯಾಸ ಮುಂತಾದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

೬.ನರಗಳಿಗೆ ಶಕ್ತಿನೀಡುತ್ತದೆ
ಹೆರಿಗೆ ನಂತರ ತಾಯಿಯರು ನರಗಳ ನೋವಿನಿಂದ ಬಳಲುವರು. ನಿಂಬೆರಸದ ನೀರು ರೂಟಿನ್ ಅನ್ನು ತನ್ನಲ್ಲಿ ಇರಿಸಿಕೊಂಡಿರುವುದರಿಂದ ನರಗಳಿಗೆ ಶಕ್ತಿ ನೀಡುತ್ತದೆ.

೭.ಚರ್ಮದ ರಕ್ಷಣೆ ಮತ್ತು ಪೋಷಣೆ ಮಾಡುತ್ತದೆ
ಹೆರಿಗೆ ನಂತರ ಸಾಮಾನ್ಯವಾಗಿ ಕಾಡುವುದು ತ್ವಚೆಯ ಸಮಸ್ಯೆ, ಮಹಿಳೆಯರು ಇದರ ಬಗ್ಗೆ ಚಿಂತಿಸುವುದು ಸಹಜ, ಇದನ್ನ ಸುಲಭವಾಗಿ ಬಗೆಹರಿಸಲು ಇರುವ ಸರಳ ಮಾರ್ಗವೆಂದರೆ ನಿಂಬೆರಸದ ನೀರು ಕುಡಿಯುವುದು. ಇದು ತ್ವಚೆಯ ವಿನ್ಯಾಸವನ್ನು ಅಥವಾ ರಚನೆಯನ್ನು ನಯವಾಗುವಂತೆ ಮಾಡುತ್ತದೆ.

೮.ಸ್ತನ ಕ್ಯಾನ್ಸರ್ ಅನ್ನು ತಡೆಯುತ್ತದೆ
ಅಧ್ಯಯನ ಮತ್ತು ಸಂಶೋಧನೆ ಪ್ರಕಾರ ನಿಂಬೆಯಲ್ಲಿನ ಬಿಳಿ ಮೆಂಬ್ರೇನ್ ಮತ್ತು ನಿಂಬೆಯ ಸಿಪ್ಪೆಯಲ್ಲಿ ಲಿಮೊನೆನೆ, ಇದು ಒಂದು ಆಂಟಿ-ಟ್ಯೂಮೊರ್ ಲಕ್ಷಣವಿರುವ ರಾಸಾಯನಿಕವಾಗಿದೆ. ಇದು ಸ್ತನ ಕ್ಯಾನ್ಸರ್ ಅನ್ನು ತಡೆಯುತ್ತದೆ.

೯.ರಕ್ತವನ್ನು ಶುದ್ದೀಕರಿಸುತ್ತದೆ
ನಿಂಬೆರಸ ರಕ್ತ ಶುದ್ದೀಕರಿಸುವ ಸಾಧನವಾಗಿ ಕೆಲಸ ಮಾಡುತ್ತದೆ. ತಾಯಿಯು ಇದನ್ನು ಸೇವಿಸುವುದರಿಂದ ರಕ್ತ ಶುದ್ದಿಯಾಗುವ ಜೊತೆಗೆ ಸೋಂಕು ತಗುಲದಂತೆ ಕಾಪಾಡುತ್ತದೆ. ಇದು ತಾಯಿ ಮತ್ತು ಮಗು ಇಬ್ಬರಿಗೂ ಸೋಂಕಿನಿಂದ ರಕ್ಷಣೆ ನೀಡುತ್ತದೆ.

Comments are closed.