ಆರೋಗ್ಯ

ಮೊಡವೆಯಿಂದ ದೇಹದ ವಿವಿಧ ಅಂಗಗಳ ಆರೋಗ್ಯ ಸಮಸ್ಯೆ ತಿಳಿಯಿರಿ

Pinterest LinkedIn Tumblr

ಹಾರ್ಮೋನುಗಳ ಕಾರಣದಿಂದ ಹಲವು ಜನರು ತೊಂದರೆಯನ್ನು ಅಥವಾ ಮುಜುಗರವನ್ನು ಅನುಭವಿಸುವರು. ಮೊಡವೆಗಳು ಸಾಮಾನ್ಯವಾಗಿ ಮುಖದ ಮೇಲೆ ಮತ್ತು ಕತ್ತಿನಲ್ಲಿ ಕಾಣಿಸಿಕೊಳ್ಳುತ್ತವೆ. ಆದಾಗ್ಯೂ, ಅಸಕ್ತಿದಾಯಕ ಸಂಗತಿ ಎಂದರೆ, ಮೊಡವೆಗಳು ನಿಮ್ಮ ಆರೋಗ್ಯದ ಬಗ್ಗೆ ಏನನ್ನೂ ಹೇಳುತ್ತಿವೆ ಮತ್ತು ನೀವು ಅದರ ಬಗ್ಗೆ ಸ್ವಲ್ಪ ಕಾಳಜಿ ತೆಗೆದುಕೊಳ್ಳಬೇಕು. ಸಾಮಾನ್ಯವಾಗಿ ಮುಖದ ಬೇರೆ ಬೇರೆ ಭಾಗದಲ್ಲಿ ಮತ್ತು ಕುತ್ತಿಗೆಯ ಭಾಗದಲ್ಲಿ ಕಾಣಿಸಿಕೊಳ್ಳುವ ಮೊಡವೆಗಳು ನಿಮ್ಮ ದೇಹದ ವಿವಿಧ ಅಂಗಗಳು ಅಥವಾ ದೇಹದ ವಿವಿಧ ಜಾಗದಲ್ಲಿ ಆರೋಗ್ಯ ಸಮಸ್ಯೆಯನ್ನು ಸೂಚಿಸುತ್ತವೆ. ಇದನ್ನು ನೀವು ಬಗೆಹರಿಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುವ ಜೊತೆಗೆ ಮೊಡವೆ ಕೂಡ ತಾನಾಗಿಯೇ ಹೋಗುತ್ತದೆ.

೧.ಹಣೆಯ ಮೇಲೆ ಮೊಡವೆ
ಹಣೆಯ ಮೇಲೆ ಮೊಡವೆ ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆ ಇರುವುದನ್ನು ಸೂಚಿಸುತ್ತದೆ. ಇದನ್ನು ನೀವು ಗಮನಿಸಿದರೆ ಜಂಕ್ ಫುಡ್, ಕೊಬ್ಬಿನ ಆಹಾರ, ಅನಾರೋಗ್ಯಕರ ಆಹಾರ ಸೇವನೆಯನ್ನು ಕಡಿಮೆ ಮಾಡಿ, ಹೆಚ್ಚು ನೀರು ಮತ್ತು ತಂಪಾದ ಪದಾರ್ಥಗಳಾದ ಸೌತೆಕಾಯಿ ಮುಂತಾದವುಗಳನ್ನು ಹೆಚ್ಚು ಸೇವಿಸುವುದು ಉತ್ತಮ.

೨.ಉಬ್ಬುಗಳ ಮಧ್ಯೆ ಮೊಡವೆ
ಇದು ನಿಮ್ಮ ಲಿವರ್ ನಲ್ಲಿ ಏನೋ ತೊಂದರೆ ಅಥವಾ ಸಮಸ್ಯೆ ಇರಬಹುದು ಎಂದು ಹೇಳುತ್ತದೆ. ಈ ಸಮಯದಲ್ಲಿ ನೀವು ಮದ್ಯಪಾನವನ್ನು ನಿಷೇಧಿಸಬೇಕು, ಮತ್ತು ಹಾಲಿನ ಉತ್ಪನ್ನಗಳನ್ನು ಹಾಗೂ ಎಣ್ಣೆಯುಕ್ತ ಆಹಾರವನ್ನು ಕಡಿಮೆ ಸೇವಿಸಬೇಕು. ನಿಮಗೆ ಅಲರ್ಜಿ ಇರುವ ಯಾವುದೇ ಆಹಾರವನ್ನು ಸೇವಸಬೇಡಿ, ಆಹಾರ ಅಲರ್ಜಿ ಇಂದ ಮೊದಲು ತೊಂದರೆ ಅನುಭವಿಸುವುದು ಲಿವರ್.

೩.ನೆತ್ತಿಯ ಹತ್ತಿರ (ದೇವ ಮೂಲೆ)
ಇದು ನಿಮ್ಮ ಕಿಡ್ನಿ ಅಲ್ಲಿ ಏನೋ ಸಮಸ್ಯೆ ಇದೆ ಎಂದು ಹೇಳುತ್ತದೆ. ನೀವು ಹೆಚ್ಚು ನೀರನ್ನು ಮತ್ತು ನೀರಿನಾಂಶ ಇರುವುದನ್ನು ಸೇವಿಸಬೇಕು. ಹೆಚ್ಚು ಅಲರ್ಜಿಗೆ ಅಥವಾ ಕಲುಷಿತ ವಾತಾವರಣಕ್ಕೆ ಬರಬೇಡಿ.

೪.ಮೂಗಿನ ತುದಿಯಲ್ಲಿ ಮೊಡವೆ
ಇದು ನಿಮ್ಮ ಹೃದಯ ಭಾಗ ಸಮಸ್ಯೆಯನ್ನು ಎದುರಿಸುತ್ತಿದೆ ಎಂಬುದನ್ನು ನಿಮಗೆ ಹೇಳುತ್ತದೆ. ನೀವು ರಕ್ತದೊತ್ತಡವನ್ನು ಪರೀಕ್ಷಿಸಿ ಮತ್ತು ಜಂಕ್ ಫುಡ್ ಸೇವನೆಯನ್ನು ಕಡಿಮೆ ಮಾಡಿ. ಮಸಾಲೆಯುಕ್ತ ಆಹಾರವನ್ನು ನಿಷೇಧಿಸಿ. ಮೀನು, ಬೀಜಗಳು(ಧಾನ್ಯಗಳು), ಮುಂತಾದ ಆರೋಗ್ಯಕರ ಆಹಾರಗಳನ್ನು ಸೇವಿಸಿ.

೫.ಕಿವಿಯ ತುದಿಯಲ್ಲಿ ಮೊಡವೆ
ಇದು ಸಹ ನಿಮ್ಮ ಕಿಡ್ನಿಯಲ್ಲಿ ಸಮಸ್ಯೆ ಇರುವುದನ್ನು ಸೂಚಿಸುತ್ತದೆ. ಈ ಸಮಯದಲ್ಲಿ ನೀವು ಮದ್ಯಪಾನ, ಕಾಫಿ, ತಂಪು ಪಾನೀಯ ಸೇವನೆಯನ್ನು ನಿಷೇಧಿಸಿ. ಹೆಚ್ಚು ನೀರು ಮತ್ತು ನೀರಿನಾಂಶ ಪದಾರ್ಥಗಳನ್ನು ಹಾಗು ದ್ರವ ಪದಾರ್ಥಗಳನ್ನು ಸೇವಿಸಿ.

೬.ಕಣ್ಣಿನ ಕೆಳಭಾಗದಲ್ಲಿ ಮೊಡವೆ
ನಿಮ್ಮ ಉಸಿರಾಟ ಕ್ರಿಯೆ ಅಥವಾ ವ್ಯವಸ್ಥೆಯಲ್ಲಿ ಏನೋ ಸಮಸ್ಯೆ ಇರಬಹುದು. ಧೂಮಪಾನ ಮತ್ತು ಅಲರ್ಜಿ ಇರುವ ಯಾವುದೇ ಆಹಾರವನ್ನು ಸೇವಿಸಬೇಡಿ. ಮಸಾಲೆಯುಕ್ತ ಆಹಾರ, ಗ್ಯಾಸ್ಟ್ರಿಕ್ ಆಹಾರ ಮುಂತಾದವುಗಳನ್ನು ನಿಲ್ಲಿಸಿ. ಕಾಫಿ, ಹಾಲಿನ ಉತ್ಪನ್ನಗಳನ್ನು ಸೇವಿಸಬೇಡಿ. ಹೆಚ್ಚು ಹಸಿರು ತರಕಾರಿ ಸೊಪ್ಪುಗಳನ್ನು ಸೇವಿಸಿ.

೭.ಬಾಯಿಯ ಸುತ್ತ ಅಥವಾ ಬಾಯಿಯ ಹತ್ತಿರ ಮೊಡವೆ
ನಿಮ್ಮ ದೇಹದಲ್ಲಿ ಹಾರ್ಮೋನುಗಳ ಅಸಮತೋಲನವನ್ನು ಇದು ಇದು ಸೂಚಿಸುತ್ತದೆ. ಹೆಚ್ಚು ನೀರನ್ನು ಸೇವಿಸಿ, ಆರೋಗ್ಯಕರ ಆಹಾರ ಸೇವಿಸುವುದು ಇದಕ್ಕೆ ಪರಿಹಾರ. ನಿಮ್ಮ ತ್ವಚೆಯನ್ನು ಶುದ್ಧವಾಗಿರಿಸಿ.

೮.ಗಲ್ಲದ ಮೇಲೆ ಮೊಡವೆ
ನಿಮ್ಮ ಹೊಟ್ಟೆ ಸರಿಯಿಲ್ಲ ಎಂಬುದನ್ನು ಇದರಿಂದ ನಾವು ತಿಳಿದುಕೊಳ್ಳಬಹುದು. ಫೈಬರ್ ಆಹಾರವನ್ನು ಸೇವಿಸುವುದು ಉತ್ತಮ. ಗಿಡಮೂಲಿಕೆ ಚಹಾ ಅಥವಾ ಕಷಾಯವನ್ನು ಕುಡಿಯುವುದು ಒಳ್ಳೆಯದು. ಮಸಾಲೆ ಮತ್ತು ಜಂಕ್ ಫುಡ್ ಸೇವನೆಯನ್ನು ಕಡಿಮೆ ಮಾಡುವುದು ಉತ್ತಮ.

೯.ಕುತ್ತಿಗೆಯ ಮೇಲೆ ಮೊಡವೆ
ಇದು ನೀವು ಅಷ್ಟು ಅರಮದಯಕವಾಗಿಲ್ಲ ಎಂಬುದನ್ನು ಸೂಚಿಸುತ್ತದೆ, ಇದು ಕೆಲವೊಮ್ಮೆ ಮಾನಸಿಕ ಒತ್ತಡಕ್ಕೆ ಒಳಗಾಗಿರುವಿರಿ ಎಂಬುದನ್ನು ಗಮನಿಸಬಹುದು. ಸಾಧ್ಯವಾದಷ್ಟು ವಿಶ್ರಾಂತಿಯನ್ನು ನೀವು ತೆಗೆದುಕೊಳ್ಳುವುದು ಉತ್ತಮ. ಧ್ಯಾನ ಮಾಡಿ ಮತ್ತು ಅಧಿಕ ನೀರನ್ನು ಸೇವಿಸಿ. ಸಾಧ್ಯವಾದರೆ ವ್ಯಾಯಾಮ ಮಾಡಿ.

೧೦.ಸಂದೇಶವನ್ನು ಗಮನಿಸಿ
ವಯಸ್ಕರಲ್ಲಿ ಬರುವ ಮೊಡವೆ ಮತ್ತು ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಮೊಡವೆಗೆ ವ್ಯತ್ಯಾಸ ಗಮನಿಸಿ, ಇದನ್ನು ಕಂಡಾಗ ನಿಮ್ಮ ದೇಹದ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಈ ಸುಳಿವುಗಳನ್ನು ಗಮನಿಸಿ ನೀವು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ನಿಮ್ಮ ಆರೋಗ್ಯದ ಬಗ್ಗೆ ಮೊಡವೆಗಳು ಸಾಕಷ್ಟನ್ನು ತಿಳಿಸುತ್ತವೆ.

ಇದು ನಿಮಗೆ ಉಪಯೋಗ ಎಂದು ಅನ್ನಿಸಿದರೆ, ಇತರರೊಂದಿಗೆ ಹಂಚಿಕೊಳ್ಳಿ.

Comments are closed.