ಗಲ್ಫ್

ಯಶಸ್ವಿ ಕಂಡ DKSC ಫ್ಯಾಮಿಲಿ ಮುಲಾಖತ್ ; ಸಚಿವ ಯು.ಟಿ.ಖಾದರ್ – ಶಾಸಕ ಮೊಯ್ದಿನ್ ಬಾವ ರಿಂದ ಪ್ರಶಂಸೆ: DKSC ಅದೀನ ಸಂಸ್ಥೆಗೆ ಸಹಕಾರದ ಭರವಸೆ

Pinterest LinkedIn Tumblr

ದುಬೈ: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ರಾಷ್ಟ್ರಿಯ ಸಮಿತಿಯು ವುಡ್ ಲೀಂ ಪಾರ್ಕ್ ಸ್ಕೂಲ್ ಅಜ್ಮಾನ್ ನಲ್ಲಿ ಜನವರಿ 1 ರಂದು ಹಮ್ಮಿಗೊಂಡ ಗ್ರಾಂಡ್ ಕರಾವಳಿ ಫ್ಯಾಮಿಲಿ ಮುಲಾಖತ್ ನೀರಿಕ್ಷೆಗೂ ಮಿಗಿಲಾದ ಯಶಸ್ವಿಯನ್ನುಪಡೆದು ಆಗಮಿಸಿದ ಪ್ರತಿಯೋರ್ವರ ಮನಸ್ಸಿನಲ್ಲಿ ಡಿ.ಕೆ.ಎಸ್.ಸಿ ಮುಂದಿನ ಮುಲಾಖತ್ ನ್ನು ನಿರೀಕ್ಷಿಸುವಂತೆ ಮಾಡಿತು.

ಫ್ಯಾಮಿಲಿ ಮುಲಾಖತ್ ಕಾರ್ಯಕ್ರಮವು ಮಾಸ್ಟರ್ ಮುಹಮ್ಮದ್ ಹಾದಿ ರವರ ಕಿರಾಹತ್ ಹಾಗೂ ಇಬ್ರಾಹಿಂ ಸಖಾಫಿ ಕೆದಂಬಾಡಿ ಯವರ ದುವಾದೊಂದಿಗೆ ಮರ್ಕಜ್ ಕಮಿಟಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಹು.ಜಿ.ಎಂ.ಕಾಮಿಲ್ ಸಖಾಫಿ ರವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರಾಷ್ಟೀಯ ಸಮಿತಿ ಅಧ್ಯಕ್ಷರಾದ ಹಾಜಿ.ಇಕ್ಬಾಲ್ ಕಣ್ಣಂಗಾರ್ ಪ್ರಾಸ್ತಾವಿಕ ಮಾತನ್ನು ಆಡಿದರು. ಫ್ಯಾಮಿಲಿ ಮೂಲಖಾತ್ ಸ್ವಾಗತ ಸಮಿತಿ ಸಹ ಸಂಚಾಲಕ ಇಬ್ರಾಹಿಂ ಕಳತ್ತೂರ್ ಆಗಮಿಸಿದ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲು ಸಹಕರಿಸುವಂತೆ ವಿನಂತಿಸಿದರು. ವೇದಿಕೆಯಲ್ಲಿ ಡಿ.ಕೆ.ಎಸ್.ಸಿ ಸೆಂಟ್ರಲ್ ಕಮಿಟಿ ಪ್ರಧಾನ ಕಾರ್ಯದರ್ಶಿ ಹಾಜಿ.ಇಸ್ಮಾಯಿಲ್ ಕಿನ್ಯ, ರಾಷ್ಟ್ರಿಯ ಸಮಿತಿ ಉಪಾಧ್ಯಕ್ಷರಾದ ಹಾಜಿ.ಅಬ್ದುಲ್ಲಾ ಬೀಜಾಡಿ, ರಾಷ್ಟ್ರಿಯ ಸಮಿತಿ ಸಲಹೆಗಾರರಾದ ಹಾಜಿ.ಹಸನಬ್ಬ ಕೊಳ್ನಾಡು, ಅಬ್ದುಲ್ಲಾ ಮುಸ್ಲಿಯಾರ್, ಅಬೂಬಕ್ಕರ್ ಮದನಿ, ಹಾಜಿ ಅಬ್ದುಲ್ಲಾ ಬೀಜಾಡಿ, ಕೆ.ಸಿ.ಎಫ್ ಶಾರ್ಜಾ ನೇತಾರರಾದ ಅಬ್ದುಲ್ ಕರೀಮ್ ಉಸ್ತಾದ್, ದಾರುಲ್ ಅಸರಿಯಾ ಸಂಚಾಲಕರಾದ ಮುಹಮ್ಮದ್ ಫೈಝಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಧಿಕ್ರತವಾಗಿ ಡಿ.ಕೆ.ಎಸ್.ಸಿ ರಾಷ್ಟೀಯ ಸಮಿತಿ ಗೌರವಾಧ್ಯಕ್ಷರಾದ ಸಯ್ಯದ್ ತ್ವಾಹ ಭಾಪಕಿ ತಂಘಳ್ ರವರ ಉದ್ಘಾಟನೆಯೊಂದಿಗೆ ಭಾರತ ದೇಶ ಹಾಗೂ ಯು.ಎ.ಇ ರಾಷ್ಟ್ರದ ರಾಷ್ಟ್ರಗೀತೆಯೊಂದಿಗೆ ಚಾಲನೆ ನೀಡಲಾಯಿತು.

ಮಗ್ರಿಬ್ ನಮಾಝಿನ ನಂತರ ನಡೆದ ಸಮಾರೋಪಕ್ಕೆ ಯು.ಎ.ಇ ರಾಷ್ಟ್ರಿಯ ಸಮಿತಿ ಗೌರವ ಅಧ್ಯಕ್ಷರಾದ ಸಯ್ಯದ್ ತ್ವಾಹ ಬಾಫಖಿ ತಂಙಳ್ ದುಃವಾ ಮೂಲಕ ಸಭೆಗೆ ಚಾಲನೆ ನೀಡಿದರು. ಯು.ಎ.ಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಹಾಜಿ.ಇಕ್ಬಾಲ್ ಕಣ್ಣಂಗಾರ್ ಸಭೆಯ ಸಭಾಧ್ಯಕ್ಷೆತೆ ವಹಿಸಿದರು. ಪ್ರಸ್ತುತ ಕಾರ್ಯಕ್ರಮಕ್ಕಾಗಿ ಆಗಮಿಸಿದ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸಚಿವರಾದ ಯು.ಟಿ.ಖಾದರ್, ಶಾಸಕರಾದ ಮೊಯ್ದಿನ್ ಬಾವ, ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹಾಜಿ ಕಿನ್ಯ, ಮುಲಾಖತ್ ಕಮಿಟಿ ಚೆಯರ್ಮೆನ್ ಅಬ್ದುಲ್ ಲತೀಫ್ ಮುಲ್ಕಿ , ಸೌದಿ ಅಲ್ ಫಲಾಹ್ ಗ್ರೂಪ್ ನ ನಝೀರ್ ಹುಸೈನ್, ಬಿ.ಸಿ.ಎಫ್. ಅಧ್ಯಕ್ಷರಾದ ಡಾ.ಬಿ.ಕೆ.ಯೂಸುಫ್, ವುಡ್ ಲೇಮ್ ಪಾರ್ಕ್ ಸ್ಕೂಲ್ ಮೆನೇಜಿಂಗ್ ಡೈರಕ್ಟರ್ ನೌಫಲ್, ಸಿ.ಇ.ಓ. ಗಪೂರ್, ಸಮೀಮ್ ಇಂಜಿನಿಯರಿಂಗ್ ಮೆನೇಜಿಂಗ್ ಡೈರೆಕ್ಟರ್ ಹಾಜಿ.ಮುಹಮ್ಮದ್ ದೆಂಜಿಪ್ಪಾಡಿ, ಬಿ.ಎಂ.ಸಾಬಿರ್ ಅಲ್ ಪುರ್ಕಾನ್, ಮೊಯಿದೀನ್ ವುಡ್ ವರ್ಕ್ಸ್ ನ ಮೆನೇಜರ್ ಅನ್ವರ್, ಲ್ಯಾಂಡ್ ಮಾರ್ಕ್ ಗ್ರೂಪ್ ಇದರ ರಿಯಾಜ್ , ಕೆ.ಸಿ.ಎಫ್ ಯು.ಎ.ಇ ರಾಷ್ಟೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಾಜೂರ್, ವುಡ್ ಲೇಮ್ ಪಾರ್ಕ್ ಸ್ಕೂಲ್ ನ ಇಬ್ರಾಹಿಂ ಸಖಾಫಿ ಕಿನ್ನಿಂಗಾರ್, ಮುಲಾಖತ್ ಕಮಿಟಿ ಸಂಚಾಲಕರರಾದ ಹುಸೈನ್ ಹಾಜಿ ಕಿನ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಯೂಸುಫ್ ಅರ್ಲಪದವು ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸುವುದರೊಂದಿಗೆ ಫ್ಯಾಮಿಲಿ ಮೂಲಾಖತ್ ಚೆಯರ್ಮೆನ್ ಅಬ್ದುಲ್ ಲತೀಫ್ ಮುಲ್ಕಿ ಸ್ವಾಗತ ಭಾಷಣ ಮಾಡಿ ಡಿ.ಕೆ.ಎಸ್.ಸಿ ಸೆಂಟ್ರಲ್ ಕಮಿಟಿ ಪ್ರಧಾನ ಕಾರ್ಯದರ್ಶಿ ಹಾಜಿ. ಇಸ್ಮಾಯಿಲ್ ಕಿನ್ಯ ರವರು ಡಿ.ಕೆ.ಎಸ್.ಸಿ ನಡೆದು ಬಂದ ದಾರಿಯನ್ನು ವಿವರಿಸುವುದರೊಂದಿಗೆ ಸಭೆಯನ್ನು ಉದ್ಘಾಟಿಸಿದರು. ರಾಷ್ಟ್ರಿಯ ಸಮಿತಿ ಅದ್ಯಕ್ಷರಾದ ಹಾಜಿ.ಇಕ್ಬಾಲ್ ಕಣ್ಣಂಗಾರ್ ರವರು ಡಿ.ಕೆ.ಎಸ್.ಸಿ ಯು.ಎ.ಇ ವತಿಯಿಂದ ನಡುಸುತ್ತಿರುವ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣ ಹಾಗೂ ಇನ್ನಿತರ ಕಾರ್ಯಕ್ರಮಗಳ ಬಗ್ಗೆ ಸಚಿವರು ಶಾಸಕ ರು ಅತಿಥಿಗಳು ಹಾಗೂ ಸಭಿಕರಿಗೆ ತಿಳಿಸುವುದರೊಂದಿಗೆ ಎಲ್ಲರ ಸಹಕಾರವನ್ನು ಕೋರಿದರು. ಸಚಿವರು ಈ ಸಂದರ್ಭದಲ್ಲಿ ಡಿ.ಕೆ.ಎಸ್.ಸಿ ಸೆಂಟ್ರಲ್ ಕಮಿಟಿ ಅಧ್ಯಕ್ಷರಾದ ಸಯ್ಯದ್ ಆಟಕ್ಕೋಯ ತಂಘಳ್ ರವರ ನಿರ್ದೇಶನದಂತೆ ಡಿ.ಕೆ.ಎಸ್.ಸಿ ಇದರ ಅದೀನ ಸಂಸ್ಥೆಯಾದ ಅಲ್ ಇಹ್ಸಾನ್ ಎಜುಕೇಷನ್ ಸೆಂಟರ್ ಇದರ ಸ್ಥಿರ ವರಮಾನಕ್ಕಾಗಿ ಪ್ರಾರಂಭಿಸಿದ ಸಿಲ್ವರ್ ಕಾರ್ಡ್ ಯೋಜನೆಯನ್ನು ಹಾಜಿ.ಮುಹಮ್ಮದ್ ದೆಂಜಿಪ್ಪಾಡಿ ರವರಿಗೆ ನೀಡುವುದರ ಮೂಲಕ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮವನ್ನು ಸಿಲ್ವರ್ ಕಾರ್ಡ್ ಯೋಜನೆ ಯು.ಎ.ಇ ಸಂಚಾಲಕರಾದ ಹಾಜಿ.ನವಾಜ್ ಕೋಟೆಕ್ಕಾರ್ ನಡೆಸಿಕೊಟ್ಟರು. ಸಚಿವರು ತಮ್ಮ ಭಾಷಣದಲ್ಲಿ ಸರಕಾರದಿಂದ ಸಿಗುವ ಸೌಲತ್ತಿನ ಬಗ್ಗೆ ವಿವರಿಸುತ್ತಾ ಡಿ.ಕೆ.ಎಸ್.ಸಿ ಯ ಕಾರ್ಯವೈಕರ್ಯವನ್ನು ಕೊಂಡಾಡಿದರು ಹಾಗೂ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಇನ್ನೋರ್ವ ಮುಖ್ಯ ಅತಿಥಿ ಮಂಗಳೂರು ಶಾಸಕರಾದ ಮೊಯ್ದಿನ್ ಬಾವ ರವರು ಅಚ್ಚುಕಟ್ಟಾಗಿ ನಡೆದ ಎಲ್ಲ ಕಾರ್ಯಕ್ರಮದ ದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಾ ಸ್ಥಾಪನೆಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಅಲ್ ಫಲಾಹ್ ಗ್ರೂಪ್ ನ ನಝೀರ್ ಹುಸೈನ್, ಬಿ.ಸಿ.ಎಫ್. ಅಧ್ಯಕ್ಷರಾದ ಡಾ. ಬಿ.ಕೆ .ಯೂಸುಫ್, ಬಿ.ಎಂ.ಸಬ್ಬಾರ್ – ಅಲ್ ಪುರ್ಕಾನ್ ರವರು ಶುಭ ಹಾರೈಕೆಯೊಂದಿಗೆ ಸಹಕಾರವನ್ನು ನೀಡುವುದಾಗಿ ತಿಳಿಸಿದರು. ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು. ವೇದಿಕೆಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತರಿಗೆ ಬಹುಮಾನ ವಿತರಣೆಯು ನಡೆಯಿತ್ತು. ಉಮ್ಮರ್ ಎಸ್.ಎಂ. ಹಾಗೂ ಕಮಲ್ ಅಜ್ಜಾವರ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪ್ರಸ್ತುತ ಕಾರ್ಯಕ್ರಮದಲ್ಲಿ ಸೇರಿದ ಸುಮಾರು 800 ಕ್ಕಿಂತಲೂ ಹೆಚ್ಚಿನ ಜನರಲ್ಲಿ ಒಬ್ಬರನ್ನು ಅದೃಷ್ಟ ಚೀಟಿ ಎತ್ತುವ ಮೂಲಕ ಒಬ್ಬರಿಗೆ ಪವಿತ್ರ ಉಮ್ರಾ ಯಾತ್ರೆಗೆ ಅವಕಾಶ ಕಲ್ಪಿಸಲಾಯಿತು ಅದರಲ್ಲಿ ಜಾವಿದ್ ಅಲಿ ಕಾಪು ಭಾಗ್ಯಶಾಲಿಯಾಗಿ ಒರಹೊಮ್ಮಿದರು. ಪ್ಯಾಮಲಿ ಮುಲಾಖತ್ ಸಹ ಸಂಚಾಲಕ ಇಬ್ರಾಹಿಂ ಕಳತ್ತೂರ್ ರವರು ಧನ್ಯವಾದ ಸಮರ್ಪಿಸಿದರು.

ಮುಲಾಖತ್ ನಲ್ಲಿ ಕಂಡು ಬಂದ ವಿಶೇಷತೆಗಳು:

1. ನೋಂದಾವಣೆ ಕೌಂಟರ್ ನಲ್ಲಿ ಕಮಲ್ ಅಜ್ಜಾವರ ಹಾಗೂ ಕಮರುದ್ದೀನ್ ಗುರುಪುರ ಆಗಮಿಸಿದ ಪ್ರತಿಯೊಬ್ಬರನ್ನು ಸ್ವಾಗತಿಸಿ ನೋಂದಾವಣೆ ಮಾಡಿಸಿ ವಿವಿಧ ಬಣ್ಣದ ಟಿ ಶರ್ಟ್ ಕೂಪನ್ ನೀಡುವುದರ ಮೂಲಕ ನೇರವಾಗಿ ತಂಡಗಳಿಗೆ ಆಯ್ಕೆ ಮಾಡುವ ವ್ಯವಸ್ಥೆಗೊಳಿಸಲಾಗಿತ್ತು.

2. 10 ತಂಡಗಳನ್ನಾಗಿ ವಿಂಗಡಿಸಲಾಗಿತ್ತು. ವಿವಿಧ ಬಣ್ಣದ ಟಿ ಶರ್ಟ್ ಇದರ ಪ್ರಾಯೋಜಕರಾಗಿ ಸಹಕರಿಸಿದ ಅಲ್ ಮನಾಪ್ ಗ್ರೂಪ್, ಮಿಲನೋ , ಮುಸಲ್ಲ ಸ್ಟೇಶನರಿ, ನಫೀಸ್ ಗ್ರೂಪ್ , ಗ್ರಾಂಡ್ ಸ್ಟೇಷನರಿ, ನಜ್ಮ್ ಅಲ್ ವಹ, ಅಲ್ ಸುವೈದಿ , ಶಮೀಮ್ ಇಂಜಿನಿಯರಿಂಗ್ , ಲ್ಯಾನ್ಡ್ ಮಾರ್ಕ್, ಕಾಪಿಕ್ಕಾಡ್ ಗ್ರೂಪ್ ಮುಂದಾಳುತ್ವ ವಹಿಸಿದ್ದರು.

3. ವಿಶಾಲ ಮೈದಾನದಲ್ಲಿ ಸಮವಸ್ತ್ರದೊಂದಿಗೆ ಭಾರತದ ಹಾಗೂ ಯು.ಎ.ಇ ರಾಷ್ಟ್ರ ದ್ವಜವನ್ನು ಕ್ರಮವಾಗಿ ಅಬ್ದುಲ್ಲಾ ಮುಸ್ಲಿಯಾರ್ ಕುಡ್ತಮುಗೇರು ಹಾಗೂ ಹಾಜಿ. ಅಬ್ದುಲ್ಲಾ ಬೀಜಾಡಿ ರವರು ಹಿಡಿದು ಆಕರ್ಷಕ ಪಥ ಸಂಚನ ನಡೆಯಿತ್ತು. ಪಥ ಸಂಚಲನದಲ್ಲಿ ಭಾರತದ ಹಾಗೂ ಯು ಎ ಇ ರಾಷ್ಟ್ರಿಯ ಗೀತೆಯೊಂದಿಗೆ ಡಿ.ಕೆ.ಎಸ್.ಸಿ ಯ ಸುಂದರವಾದ ಹಾಡು ಮೊಳಗಿತು. ಪಥ ಸಂಚನದ ನೇತೃತ್ವವನ್ನು ಅಲ್ ಐನ್ ಜೂನಿಯರ್ ಸ್ಕೂಲ್ ನ ಪ್ರಾದ್ಯಾಪಕ ಉಮ್ಮರ್ ಎಸ್.ಎಂ ವಹಿಸಿದರು. ಪಥ ಸಂಚಲನ ದ ಪ್ರಥಮ ಬಹುಮಾನವನ್ನು ರಫೀಕ್ ಸತ್ತಿಕಲ್ ನೇತೃತ್ವದ ಗ್ರಾಂಡ್ ಸ್ಟೇಷನರಿ ಪಡೆಯಿತು.

4. ಅತಿಥಿಗಳನ್ನು ಹಸನಬ್ಬ ಕೊಳ್ನಾಡ್ ಹಾಗೂ ಸಮದ್ ಬಿರಾಲಿ ರವರ ಉಸ್ತುವಾರಿಯಲ್ಲಿ ನಡೆದ ಇಸ್ಲಾಂ ಧರ್ಮದ ಪಾರಂಪರ್ಯ ಕಲೆಯಾದ ದಫ್ಫ್ ಮೂಲಕ ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟ್ರೀಯ ಸಮಿತಿ ನೇತಾರರು ಬರಮಾಡಿಕೊಂಡರು.

5. ಮಕ್ಕಳಿಗೆ ವಿವಿಧ ಇಸ್ಲಾಮಿಕ್ ಸ್ಪರ್ಧಾ ಕಾರ್ಯಕ್ರಮ ಹಾಗೂ ಡ್ರಾಯಿಂಗ್ ಸ್ಪರ್ಧೆಗಳು ನಡೆಯಿತು. ಕಾರ್ಯಕ್ರಮವನ್ನು ರಹೀಮ್ ಕೊಡಿ, ರಫೀಕ್ ಸತ್ತಿಕಲ್ , ಹಾಜಿ. ಮೂಸಾ ಬಸ್ರಾ, ಅಬೂಬಕ್ಕರ್ ಮದನಿ ಮೊದಲಾದವರು ಕಾರ್ಯಕ್ರಮ ನಡೆಸಿ ಕೊಟ್ಟರು.

6. ಮಹಿಳೆಯರ ಇಸ್ಲಾಮಿಕ್ ರಸಪ್ರಶ್ನೆಗಳ ಸಮೇತ ವಿವಿಧ ಸ್ಫರ್ಧಾ ಕಾರ್ಯಕ್ರಮಗಳು ಅಚ್ಚು ಕಟ್ಟಾಗಿ ನಡೆಯಿತು.

7 . ಮಹಿಳೆಯರಿಗೆ ಆಹಾರ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರ ತೀರ್ಪುಗಾರರಾಗಿ ಇಸ್ಮಾಯಿಲ್ ಹಾಜಿ ಕಿನ್ಯ , ಜೆ.ಎಂ.ಕಾಮಿಲ್ ಸಖಾಫಿ ಉಸ್ತಾದ್, ರಿಯಾಜ್ ಲ್ಯಾಂಡ್ ಮಾರ್ಕ್ ಗ್ರೂಪ್ ರವರು ವಿಜೇತರನ್ನು ಆಯ್ಕೆ ಮಾಡಿದರು.

8. ವಿಶಾಲ ಮೈದಾನದಲ್ಲಿ ಗಂಡಸರಿಗೆ ವಿವಿಧ ಸ್ಪರ್ಧೆಗಳು ನಡೆಯಿತು. ಇದರ ಉಸ್ತುವಾರಿಯನ್ನು ಜನಾಬ್ ನವಾಜ್ ಕೋಟೆಕ್ಕಾರ್ ಹಾಗೂ ಜನಾಬ್ ಉಮ್ಮರ್ ಎಸ್.ಎಂ ಅವರ ನೇತೃತ್ವದಲ್ಲಿ ಸಮದ್ ಬಿರಾಲಿ, ರಫೀಕ್ ಮುಲ್ಕಿ, ರಫೀಕ್ ಸತ್ತಿಕಲ್, ಅಕ್ಬರ್ ಅಲಿ ಸುರತ್ಕಲ್, ರವೂಫ್ ಕೋಟೆಕ್ಕಾರ್, ಅಶ್ರಫ್ ಸತ್ತಿಕಲ್, ಇಸ್ಮಾಯಿಲ್ ಮೂಳೂರು, ಇಬ್ರಾಹಿಂ ದುಬಾಲ್ ಅಗ್ನಾಡಿ, ಆರಿಫ್, ಸಮಾವೂನ್ ಇಸ್ಮಾಯಿಲ್, ಸಮೀರ್ ಕೊಳ್ನಾಡ್, ನಿಯಾಜ್, ಅಬ್ದುಲ್ ಕರೀಂ ಶಾನ್, ಅಬ್ದುಲ್ ರಹಿಮಾನ್ ಸಜಿಪ, ಅಶ್ರಫ್ ಕೊಳ್ನಾಡ್, ಜಮಾಲ್ ಬಜ್ಪೆ, ಸೈಫುದ್ದೀನ್ ಪಟೇಲ್, ಇಬ್ರಾಹಿಂ ಕಳತ್ತೂರು ಮೊದಲಾದವರು ನಡೆಸಿದರು.

9. ಪ್ರತಿ ನಮಾಝಿನ ಸಮಯದಲ್ಲಿ ನಮಾಝಿನ ವೆವಸ್ಥೆಯನ್ನು ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಲಾಗಿತ್ತು.

10. ಟ್ರಾನ್ಸ್ ಪೋರ್ಟ್ ಉಸ್ತುವಾರಿ ಯನ್ನು ಉಮ್ಮರ್ ಪಾಣಾಜೆ , ಅಬ್ದುಲ್ ರಜಾಕ್ ಮುಟ್ಟಿಕಲ್ , ಅಬ್ದುಲ್ ರಹಿಮಾನ್ ಮಾಡವು, ಇಸ್ಮಾಯಿಲ್ ಬಾಬಾ ವಹಿಸಿದ್ದರು.

10. ಇಬ್ರಾಹಿಂ ಕಳತ್ತೂರ್ ಹಾಗೂ ಸಮೀರ್ ಕೊಳ್ನಾಡ್ ರವರು ಸ್ವಯಂ ಸೇವಕರ ನೇತೃತ್ವವನ್ನು ವಹಿಸಿದ್ದರು. ಅಜ್ಮಾನ್ ಯೂನಿಟ್ ವಿಶೇಷವಾಗಿ ಅಚ್ಚುಕಟ್ಟಾಗಿ ನಿರ್ವಹಿಸಿದರು. ಹಾಗೂ ಹಾಜಿ. ಅಬ್ದುಲ್ ರಹಿಮಾನ್ ಸಂಟ್ಯಾರ್, ಮುಸ್ತಾಕ್ ಕಿನ್ಯ, ನಝೀರ್ ಕಣ್ಣಂಗಾರ್, ಶಕೂರ್ ಮನಿಲಾ, ಹಾಜಿ.ಅಬ್ದುಲ್ ಖಾದರ್ ಎಸ್.ಕೆ.ಉಚ್ಚಿಲ ರವರು ಹಾಗೂ ಡಿ.ಕೆ.ಎಸ್.ಸಿ ರಾಷ್ಟ್ರಿಯ ಕಮಿಟಿ ಪದಾಧಿಕಾರಿಗಳು ಹಾಗೂ ಯುನಿಟ್ ಕಮಿಟಿ ನೇತಾರರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಯುವಂತೆ ಜವಾಬ್ದಾರಿಯುತವಾಗಿ ಪ್ರವರ್ತಿಸಿದರು.

11. ಆಹಾರ ಉಸ್ತುವಾರಿಯಾದ ಶಕೂರ್ ಮನಿಲಾ ಹಾಗೂ ಹಾಜಿ ಅಬ್ದುಲ್ಲಾ ಬೀಜಾಡಿ ಸಮಯಕ್ಕೆ ಸರಿಯಾಗಿ ಶುಚಿ ರುಚಿಯಾದ ಬೆಳಗಿನ ಉಪಹಾರ ಮಧ್ಯಾಹ್ನದ ಊಟ ರಾತ್ರಿಯ ಭೋಜನ ಎಲ್ಲವನ್ನು ಸಮಯಕ್ಕೆ ಸರಿಯಾಗಿ ವ್ಯವಸ್ಥೆಗೊಳಿಸಿದ್ದರು.

12 . ಸಚಿವರು ಹಾಗೂ ಶಾಸಕರು ಹಗ್ಗ ಜಗ್ಗಾಟದಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು.

13 . ಸಮಾರೋಪ ಸಮಾರಂಭದಲ್ಲಿ ರಹೀಮ್ ಕೊಡಿ ಯವರ ನಾವೆಲ್ಲರೂ ಒಂದಾಗುವ ಎಂಬ ಕನ್ನಡ ಗಾನ ದೊಂದಿಗೆ ಅಲ್ ಕಮರ್ ವೆಲ್ಪೇರ್ ಎಸೋಸಿಯೇಶನ್ ವತಿಯಿಂದ ದಪ್ ಇಡೀ ಅತಿಥಿಗಳು ಹಾಗೂ ಸಭಿಕರ ಪ್ರಶಂಸೆಗೊಳಪಟ್ಟಿತು.

14 . ಸಮರೋಪ ಸಮಾರಂಭದ ಪ್ರಾರಂಭದಲ್ಲಿ ಅಕ್ಬರ್ ಸುರತ್ಕಲ್ ರವರು ಸ್ವರಚಿಸಿ ಹಾಡಿದ ಚುಟುಕು ಸ್ವಾಗತ ಗಾನವು ತುಂಬಾ ಉತ್ತಮವಾಗಿತ್ತು.

15 . ಕಾರ್ಯಕ್ರಮದಲ್ಲಿ ವಿಶೇಷವಾಗಿ ತುಂಬೆ ಹಾಸ್ಪಿಟಲ್ (GMC ) ವತಿಯಿಂದ ಬೆಳಿಗ್ಗೆ ಯಿಂದ ಸಮಾರೋಪದವರಿಗೆ ಉಚಿತ ಅರೋಗ್ಯ ತಪಾಸಣೆಯು ಯಶಸ್ವಿಯಾಗಿ ನಡಿಯಿತು. ಇದರ ಪ್ರಯೋಜನವನ್ನು ಸಚಿವರಾದ ಯು.ಟಿ.ಖಾದರ್, ಶಾಸಕರಾದ ಮೊಯ್ದಿನ್ ಬಾವ, ಡಿ.ಕೆ.ಎಸ್.ಸಿ ರಾಷ್ಟ್ರಿಯ ಸಮಿತಿ ಗೌರಾವಾಧ್ಯಕ್ಷರಾದ ಸಯ್ಯದ್ ತ್ವಾಹ ಬಾಪಕಿ ತಂಘಳ್ ಮುಂತಾದ ಅತಿಥಿಗಳು ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ ಹೆಚ್ಚಿನ ಹಿತೈಷಿಗಳು ಇದರ ಪ್ರಯೋಜನವನ್ನು ಪಡೆಯುವುದರೊಂದಿಗೆ ಆಗಮಿಸಿದ ವೈದ್ಯರ ತಂಡವು ನಿರೀಕ್ಷೆಗಿಂತಲೂ ಹೆಚ್ಚಾಗಿ ನಡೆದ ಯಶಸ್ವಿ ಕಾರ್ಯಕ್ರಮಕ್ಕೆ ಡಿ.ಕೆ.ಎಸ್.ಸಿ ಸಂಘಟನೆಗೆ ಕೃತಜ್ಜ್ಹತೆಯನ್ನು ಸಲ್ಲಿಸಿದರು.

16 . ತುಂಬೆ ಹಾಸ್ಪಿಟಲ್ (GMC ) ವತಿಯಿಂದ ಅಗತ್ಯ ಸಂದರ್ಭಕ್ಕಾಗಿ ಆಂಬುಲೆನ್ಸ್ ವ್ಯವಸ್ಥಿತಗೊಳಿಸಲಾಗಿತ್ತು.

17. ಪ್ರಾರಂಭದಿಂದಲೂ ಎಸ್.ಇಬ್ರಾಹಿಂ ಶರೀಫ್ ಅರ್ಲಪದವು ಹಾಗೂ ಅಬ್ದುಲ್ ರಜಾಕ್ ಬುಸ್ತಾನಿ ಯವರು ಕಾರ್ಕ್ರಮದ ಚಿತ್ರೀಕರಣ ಮಾಡುವುದರೊಂದಿಗೆ ನೇರ ಪ್ರಸಾರವನ್ನು ಮಾಡಿ ಎಲ್ಲರು ಕಾರ್ಯಕ್ರಮವನ್ನು ವೀಕ್ಷಿಸುವಂತೆ ವ್ಯವಸ್ಥೆ ಮಾಡಿದರು.

18 . ಕಾರ್ಯಕ್ರಮದ ಕೊನೆಯಲ್ಲಿ ಹುಸೈನ್ ಹಾಜಿ ಕಿನ್ಯ ರವರು ಮರ್ಕಜ್ ಗೆ ನೀಡಿದ ಆಡು ಅನ್ನು ಏಲಂ ಮಾಡಲಾಯಿತು.

ಕಾರ್ಯಕ್ರಮದ ಮುಖ್ಯ ಪ್ರಾಯೋಜಕರಾಗಿ ಬಿ.ಎ ತುಂಬೆ(ಮೊಯಿದ್ದೀನ್) ವುಡ್ ವರ್ಕ್ಸ್ ಮತ್ತು ತುಂಬೆ ಹಾಸ್ಪಿಟಲ್ (GMC ), ಸಹ ಪ್ರಾಯೋಜಕರಾಗಿ ಲ್ಯಾಂಡ್ ಮಾರ್ಕ್ ಗ್ರೂಪ್, ಹಾಜಿ.ಮೊಯಿದೀನ್ ಕುಟ್ಟಿ ಕಕ್ಕಿಂಜೆ ದಿಬ್ಬ, ಅಲ್ ಸುಹೋಲ್ ಟ್ರೇಡಿಂಗ್ ಕಂ ಲಿಮಿಟೆಡ್, ಅಲ್ ಶಹಮ ಮೆರೀನ್ ಎಕ್ಯುಪಿಮೆಂಟ್ ಅಂಡ್ ಪಿಸ್ಸಿಂಗ್ ಎಸ್ಸೆಸ್ಸ್ ಅಬುದಾಬಿ, ಅಫೀಜ್ ಪಾಣೆಮಂಗಳೂರು ರವರು ನೀಡಿ ಸಹಕರಿಸಿದರು.

ಅದೃಷ್ಟ ಡ್ರಾ ದಲ್ಲಿ ಉಮ್ರಾ ಯಾತ್ರೆ ಟೆಕೆಟ್ ಪ್ರಾಯೋಜಕರಾಗಿ ಮುಹಮ್ಮದ್ ದೆಂಜಿಪ್ಪಾಡಿ ಸಹಕರಿಸಿದರೆ ರೋಮನಾ ವಾಟರ್, ನಾಸಿರುದ್ದೀನ್ ಪಟೇಲ್ ರವರ ಸಹಕಾರದೊಂದಿಗೆ ಅಲೋಕೋಝಿ ಕಂಪನಿ, ಬ್ಯಾನರ್ ಯು.ಟಿ.ನೌಶಾದ್ ಹಾಗೂ ವಿವಿಧ ಗಿಫ್ಟ್ ಗಳನ್ನೂ ಲತೀಫ್ ಮುಲ್ಕಿ, ಎಂ.ಇ.ಮೂಳೂರು, ಶೇಖಬ್ಬ ಕಿನ್ಯ, ಇಕ್ಬಾಲ್ ಕಣ್ಣಂಗಾರ್ ರವರು ವಿಜೇತರಿಗೆ ನೀಡುವ ಬಹುಮಾನವನ್ನು ನೀಡಿ ಸಹಕರಿಸಿದರು.

ವರದಿ : ಎಸ್.ಯೂಸುಫ್ ಅರ್ಲಪದವು

Comments are closed.