ಕರಾವಳಿ

ಸ್ಕ್ಯಾನ್ ಅಲ್ಲಿ ಕಾಣಿಸಿಕೊಂಡಿದ್ದು ಕೇವಲ ಮಕ್ಕಳಲ್ಲ…! ಇಂತದ್ದನ್ನ ನೀವೆಂದಿಗೂ ನೋಡಿಲ್ಲ !

Pinterest LinkedIn Tumblr

ಅಲ್ಟ್ರಾಸೌಂಡ್ ಸ್ಕ್ಯಾನ್ ಅನ್ನು ಪ್ರತಿ ಗರ್ಭಿಣಿ ಹೆಂಗಸೂ ಮಾಡಿಸಿರುತ್ತಾಳೆ. ಮಾನಿಟರ್ ಮೇಲೆ ತನ್ನ ಮಗುವಿನ ಮುಖವನ್ನ ನೋಡಿ, ಅದನ್ನ ಕಣ್ತುಂಬಿಸಿಕೊಂಡು, ಮನಸಾರೆ ಖುಷಿ ಪಡುತ್ತಾರೆ ಅಮ್ಮಂದಿರು. ಆದರೆ ನೀವು ಇಲ್ಲಿ ನೋಡಲಿರುವ ಅಲ್ಟ್ರಾಸೌಂಡ್ ಸ್ಕ್ಯಾನ್ ಫೋಟೋಗಳ ರೀತಿಯ ಫೋಟೋಗಳನ್ನ ಹಿಂದೆಂದೂ ಎಲ್ಲೆಲ್ಲಿಯೂ ಬಹುಷಃ ನೋಡಿರುವುದಿಲ್ಲ. ಈ ಭಾವಚಿತ್ರಗಳಲ್ಲಿ ನೀವು ಮಗುವನ್ನ ಕಾಣಬಹುದು. ಆದರೆ ಅದರಲ್ಲಿ ಇರುವುದು ಕೇವಲ ಮಗುವೊಂದೇ ಅಲ್ಲ. ಹಾಗಿದ್ದರೆ ಇನ್ನೇನಿದೆ? ಆಶ್ಚರ್ಯ ಪಟ್ಟುಕೊಳ್ಳಲು ಸಿದ್ದರಾಗಿ !

ಕ್ಯಾರಿಸ್ಸಾ ಗಿಲ್ ಎಂಬ ತಾಯಿ ಫೇಸ್ಬುಕ್ ಅಲ್ಲಿ ಹಂಚಿಕೊಂಡ ಈ ಫೋಟೋದಲ್ಲಿ ಆಕೆಯ ಹೊಟ್ಟೆಯೊಳಗಿರುವ ಅವಳಿ-ಜವಳಿ ಮಕ್ಕಳು ಒಬ್ಬರಿಗೊಬ್ಬರು ಮುತ್ತು ನೀಡುತ್ತಿರುವುದನ್ನ ಕಾಣಬಹುದು!

ಎಲ್ಲಾ ಅಮ್ಮಂದಿರು ತಮ್ಮ ಮಕ್ಕಳನ್ನ ದೇವರ ವರ ಎಂದು ಭಾವಿಸುತ್ತಾರೆ. ಆದರೆ ಕೆಲ್ಲಿ ಎಂಬಾಕೆಯ ಈ ಅಲ್ಟ್ರಾಸೌಂಡ್ ಸ್ಕ್ಯಾನ್ ಫೋಟೋದಲ್ಲಿ ಮಗುವಿನ ಹಣೆಯ ಮೇಲೆ ಒಂದು ಏಂಜಲ್ ಅಥವಾ ದೇವದೂತನು ಕಣ್ಣಿಟ್ಟು ನೋಡುತ್ತಿರುವುದನ್ನ ಕಾಣಬಹುದು.

ನೀವು ನಿಮ್ಮ ಜೀವನದಲ್ಲಿ ಏನೇನೋ ನೋಡಿರುತ್ತೀರಾ. ಆದರೆ ಅಲ್ಟ್ರಾಸೌಂಡ್ ಸ್ಕ್ಯಾನ್ ಅಲ್ಲಿ ಮಗುವಿನ ಜೊತೆಗೆ ಬಾತುಕೋಳಿ ಇರುವುದನ್ನ ನೋಡಿದ್ದೀರಾ? ಇಲ್ಲಿ ನೋಡಿ !

ರಾಜಕಾರಣಿಗಳು, ಕ್ರೀಡಾಪಟುಗಳು ಗೆದ್ದಾಗ ವಿಜಯದ ಸಂಕೇತ ಅಥವಾ ವಿಕ್ಟರಿ ಸಿಂಬಲ್ ಆದ “V” ಅನ್ನು ತೋರಿಸುತ್ತಾರೆ. ಆದರೆ ಇಲ್ಲೊಂದು ಮಗು ತಾನು ಇನ್ನೂ ಭೂಮಿಗೆ ಕಾಲಿಡುವ ಮುನ್ನವೇ ತಾನು ಜಯಿಸುತ್ತೇನೆ ಎಂದು ಅಲ್ಟ್ರಾಸೌಂಡ್ ಸ್ಕ್ಯಾನ್ ಮೂಲಕ ಹೇಳುತ್ತಿದೆ.

ಸಾಮಾನ್ಯವಾಗಿ ಸಂಗೀತಗಾರರು, ಅದರಲ್ಲೂ ಮುಖ್ಯವಾಗಿ ಈ ರಾಕ್ ಸಂಗೀತಗಾರರು, ತಮ್ಮ ಪ್ರದರ್ಶನದ ವೇಳೆ ಈ “ರಾಕ್ ಆನ್” ಸನ್ನೆಯನ್ನ ಮಾಡುವುದನ್ನ ನೀವು ಕಂಡಿರುತ್ತೀರಾ. ಈ ಮಗು ಹುಟ್ಟುವ ಮುನ್ನವೇ ರಾಕ್ ಸ್ಟಾರ್ ಆಗಿದೆ !

ಅಂತರ್ಜಾಲದಲ್ಲಿ ಒಬ್ಬ ವ್ಯಕ್ತಿಯು ಹೆಮ್ಮೆ ಪಡುತ್ತಾ ತನ್ನ ಹೆಂಡತಿಯು ಒಂದು ಸ್ಪೋರ್ಟ್ಸ್ ಕಾರ್ ಗೆ ಜನ್ಮ ನೀಡಲಿದ್ದಾಳೆ ಎಂದು ಈ ಫೋಟೋವನ್ನು ಹಂಚಿಕೊಂಡಿದ್ದನು. ಈ ಫೋಟೋ ನೋಡಿದ ಮೇಲೆ ನಮಗೂ ಹಾಗೆ ಅನಿಸುತ್ತಿದೆ !

ಫಗಾನ್ ಎಂಬ ತಾಯಿಯ ಹೊಟ್ಟೆಯೊಳಗಿದ್ದ ಈ ಮಗುವು ಏನೇ ಮಾಡಿದರು ಅಲ್ಟ್ರಾಸೌಂಡ್ ಸ್ಕ್ಯಾನ್ ಅಲ್ಲಿ ತನ್ನ ಮುಖವನ್ನ ತೋರಿಸುತ್ತಿರಲಿಲ್ಲ. ಆಗ, ಫಗಾನ್ನ ದೊಡ್ಡ ಮಗಳಾದ ಮೋಲ್ಲಿ ತನ್ನ ಅಮ್ಮನ ಹೊಟ್ಟೆಯ ಹತ್ತಿರ ಬಂದು ಪಿಸುಗುಡಲು ಶುರು ಮಾಡಿದಳು. ಆಗ ಹೊಟ್ಟೆಯಲ್ಲಿದ್ದ ಮಗುವಿಗೆ ಏನಾಯಿತೋ ಗೊತ್ತಿಲ್ಲ, ಅದರ ಮುಖ ಅರಳಿಕೊಂಡು, ಒಂದು ದೊಡ್ಡ ನಗೆಯನ್ನ ಬೀರಿತು. ಹೀಗಾಗಿಯೇ ಈ ಮಗುವಿಗೆ “ಬ್ರಿಟನ್ನ್ನಿನ ಅತ್ಯಂತ ಆನಂದಮಯ ಮಗು” ಎಂಬ ಖ್ಯಾತಿ ಬಂದಿತು.

ಇಂಡಿಯಾನಾ ದೇಶದ ಓರ್ವ ತಾಯಿಯು ತನ್ನ ಅಲ್ಟ್ರಾಸೌಂಡ್ ಸ್ಕ್ಯಾನ್ ಫೋಟೋವನ್ನ ನೋಡಿ ಖುಷಿ ಪಟ್ಟು ಸುಮ್ಮನಾದಳು. ಆದರೆ ಆಕೆಯ ಸ್ನೇಹಿತೆ ಹೇಳಿದ ಮೇಲೆಯೇ ಗೊತ್ತಾಗಿದ್ದು, ಆ ಫೋಟೋದಲ್ಲಿ ಯೇಸು ಕ್ರಿಸ್ತನನ್ನು ಶಿಲುಬೆಗೆ ಏರಿಸಿರುವುದನ್ನ ಕಾಣಬಹುದು ಎಂದು. ಈಗ ಕಣ್ಣಮುಂದೆ ಅದೇ ಬರುತ್ತದೆ !

ಈ ಅಮ್ಮ ತನ್ನ ಮಗುವಿಗೆ ಹೊಟ್ಟೆಯೊಳಗೆ ಒಂಟಿತನ ಉಂಟಾಗಬಾರದು ಎಂದು, ಬೆಕ್ಕನ್ನು ಸಹಾ ಹೊತ್ತಿದ್ದಾಳೆ !

ಹಿಂದಿನ ಅಮ್ಮ ಬೆಕ್ಕು ಹೊತ್ತಿದ್ದರೇನು? ಇಲ್ಲಿ ನಾವು ಹೇಳುತ್ತಿರುವ ಅಮ್ಮ ಆಕೆಗೇನೂ ಕಮ್ಮಿ ಇಲ್ಲ. ಈಕೆ ತನ್ನ ಹೊಟ್ಟೆಯಲ್ಲಿ ಮರಕುಟಿಕವನ್ನೇ ಹೊತ್ತಿದ್ದಾಳೆ ! ಸೂಪರ್ !

ಈ ಪೋಷಕರು ತಮ್ಮ ಮಗುವಿನ ಮುಖವನ್ನ ಕಣ್ತುಂಬಿಕೊಳ್ಳಬೇಕು ಎಂದು ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿಸಿದರು. ಆದರೆ ಈ ಚಿತ್ರವನ್ನ ನೋಡಿದ ಮೇಲೆ, ಅವರಿಗೆ ಬಹುಷಃ ರಾತ್ರಿ ನಿದ್ದೆ ಬರುತ್ತಿಲ್ಲ ಎಂದುಕೊಳ್ಳುತ್ತೀನಿ !

Comments are closed.