ಆರೋಗ್ಯ

ಏಡ್ಸ್‌ ಬಗ್ಗೆ ನೀವು ಇದನ್ನು ತಿಳಿದಿರಲೇಬೇಕು…

Pinterest LinkedIn Tumblr

ಡಿಸೆಂಬರ್ 1 ವಿಶ್ವ ಏಡ್ಸ್‌ ಜಾಗೃತಿ ದಿನ. ಏಡ್ಸ್‌ ರೋಗದ ಕುರಿತು ಜನರಿಗೆ ಅರಿವು ಮೂಡಿಸಲು 1988ರಿಂದ ಈ ದಿನವನ್ನು ಆಚರಿಸಲಾಗುವುದು.

ಏಡ್ಸ್‌ ರೋಗಕ್ಕೆ ಬಲಿಯಾಗುತ್ತಿರುವ ಸಂಖ್ಯೆಯಲ್ಲಿ ಇಳಿಮುಖವಾಗಿರುವುದು ಸಂತೋಷದ ವಿಷಯವಾದರೂ, ಈ ರೋಗ ಸಂಪೂರ್ಣವಾಗಿ ನಿರ್ನಾಮವಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 2016ರಲ್ಲಿ ವಿಶ್ವಾದ್ಯಂತ 36.7 ಮಿಲಿಯನ್‌ HIV ಪೀಡಿತರಿದ್ದಾರೆ. 1.8 ಮಿಲಿಯನ್ ಜನರಿಗೆ ಸೋಂಕು ತಗುಲಿದೆ.

ಭಾರತದಲ್ಲಿ HIV ಸೋಂಕಿಗೆ ಒಳಗಾಗುವವರ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, 2030ರಷ್ಟರಲ್ಲಿ HIV ಮುಕ್ತ ಭಾರತವಾಗಲು ಹಲವಾರು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

HIV ಎನ್ನುವುದು ಮಾರಕ ರೋಗವಾದರೂ ಇದನ್ನು ಮುನ್ನೆಚ್ಚರಿಕೆ ಕ್ರಮಗಳಿಂದ ತಡೆಗಟ್ಟಬಹುದಾಗಿದೆ. HIV ಒಂದಕ್ಕಿಂತ ಹೆಚ್ಚಿನ ಜನರಲ್ಲಿ ಲೈಂಗಿಕ ಸಂಪರ್ಕ ಹೊಂದಿದ್ದರೆ ಅವರ ರಕ್ತ ನಮ್ಮ ದೇಹವನ್ನು ಸೇರಿದರೆ ಈ ಸೋಂಕು ಹರಡುವುದು.

HIV ಸೋಂಕು ತಗುಲಿದರೆ ಈ ರೀತಿಯ ಲಕ್ಷಣಗಳು ಕಂಡು ಬರುವುದು:
* ಜ್ವರ
* ತಲೆನೋವು
* ಗಂಟಲುನೋವು
*ಮೈಯಲ್ಲಿ ಗುಳ್ಳೆಗಳು ಬರುವುದು
*ತೊಡೆಗಳಲ್ಲಿ ಊತ
* ಬೇಧಿ
*ಕೆಮ್ಮು
*ತೂಕದಲ್ಲಿ ಇಳಿಕೆ
* ಸ್ನಾಯು ಸೆಳೆತ
* ಬಾಯಿಯಲ್ಲಿ ಹುಣ್ಣು
* ಗುಪ್ತಾಂಗಗಳಲ್ಲಿ ಹುಣ್ಣು
*ರಾತ್ರಿಯಲ್ಲಿ ಸೆಕೆಯಾಗುವುದು

ಈ ಲಕ್ಷಣಗಳು ಒಂದು ವಾರಕ್ಕಿಂತ ಜಾಸ್ತಿ ದಿನ ಇದ್ದರೆ ಪರೀಕ್ಷೆ ಮಾಡಿಸುವುದು ಒಳ್ಳೆಯದು.

HIV ಸೋಂಕು ತಗುಲಿದವರು ಉತ್ತಮ ಜೀವನಶೈಲಿ, ಆಹಾರ ಶೈಲಿ ರೂಪಿಸಿದರೆ ಈ ಸೋಂಕು ತಗುಲಿದರೂ ತುಂಬಾ ವರ್ಷ ಬದುಕಬಹುದಾಗಿದೆ.

ಸಲಹೆ: ಏಡ್ಸ್‌ ರೋಗಿಗಳನ್ನು ಮುಟ್ಟುವುದರಿಂದ, ಅವರ ಜತೆ ಊಟ-ತಿಂಡಿ ಮಾಡುವುದರಿಂದ ಈ ರೋಗ ಹರಡುವುದಿಲ್ಲ. ಏಡ್ಸ್‌ ರೋಗಿಗಳನ್ನು ದೂರವಿಡಬೇಡಿ, ಅವರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಿ.

Comments are closed.