ಆರೋಗ್ಯ

ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಆಕ್ಯುಪ್ರೆಷರ್ ಪದ್ಧತಿ

Pinterest LinkedIn Tumblr

ಸ್ಥೂಲಕಾಯ… ಇಂದು ಹೆಚ್ಚಿನ ಮಂದಿಗೆ ತೊಂದರೆ ಕೊಡುತ್ತಿರುವ ಸಮಸ್ಯೆ. ಕಾರಣಗಳು ಏನೇ ಇರಲಿ ಇಂದು ಸ್ಥೂಲಕಾಯದಿಂದ ಬಹಳಷ್ಟು ಮಂದಿ ಸಮಸ್ಯೆ ಎದುರಿಸುತ್ತಿದ್ದಾರೆ. ಸ್ಥೂಲಕಾಯ ಸಮಸ್ಯೆ ದಿನೇ ದಿನೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಆಹಾರ ಅಭ್ಯಾಸಗಳು, ವ್ಯಾಯಾಮ ಮಾಡುವ ಇನ್ನಿತರೆ ಎಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ ಸ್ಥೂಲಕಾಯದ ಕಾರಣ ಡಯಾಬೆಟೀಸ್, ಹೃದಯ ಸಮಸ್ಯೆಗಳು ಬರುವ ಸಾಧ್ಯತೆಗಳು ಹೆಚ್ಚಾಗಿವೆ. ಆದರೆ ಅಧಿಕ ತೂಕವನ್ನು ಕಡಿಮೆ ಮಾಡಿಕೊಳ್ಳಲು ವಿವಿಧ ಪದ್ಧತಿಗಳು ನಮಗೆ ಲಭ್ಯವಿದೆ. ಅವುಗಳಲ್ಲಿ ಒಂದು ಆಕ್ಯುಪ್ರೆಷರ್.

ದೇಹದ ಹಲವು ಭಾಗಗಳಲ್ಲಿನ ನಾಡಿಗಳು ಇತರೆ ಭಾಗಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಅಂತಹ ನಾಡಿಗಳ ಮೇಲೆ ಒತ್ತುವುದರಿಂದ, ಸ್ವಲ್ಪ ಹೊತ್ತು ಅವುಗಳ ಮೇಲೆ ಮಸಾಜ್ ಮಾಡುವುದರಿಂದ ಆಯಾ ಭಾಗಗಳು ಉತ್ತೇಜನಗೊಂಡು ನಮಗೆ ಉಂಟಾಗುವ ಹಲವು ಅನಾರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತವೆ. ಇದನ್ನೇ ಆಕ್ಯುಪ್ರೆಶರ್ ವೈದ್ಯ ಎನ್ನುತ್ತಾರೆ. ಆದರೆ ಆಕ್ಯುಪ್ರೆಶರ್ ವೈದ್ಯದಿಂದ ದೇಹದ ಅಧಿಕ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಅದು ಹೇಗೆಂದರೆ…

ನಿಮ್ಮ ಕಿವಿ ಬಳಿ ತ್ರಿಕೋನ ಆಕಾರದಲ್ಲಿರುವ ಒಂದು ಭಾಗದ ಬಳಿ ತೋರು ಬೆರಳಿನಿಂದ ಒಮ್ಮೆ ಟಚ್ ಮಾಡಿ ಹಾಗೆಯೇ ಇಟ್ಟುಕೊಳ್ಳಿ. ಈಗ ನಿಮ್ಮ ದವಡೆಯನ್ನು ಒಂದೆರಡು ಸಲ ಮೇಲೆ ಕೆಳಗೆ ತೆರೆದು ಮುಚ್ಚಿಕೊಳ್ಳಿ. ಆ …ಅದೇ.. ನೀವು ತೋರು ಬೆರಳು ಇಟ್ಟಿರುವ ಪ್ರದೇಶದ ಬಳಿ ಒಂದು ದವಡೆ ಮೂವ್‌ಮೆಂಟ್ ನಿಮಗೆ ಗೊತ್ತಾಗುತ್ತದೆ. ಆ ಮೂವ್‌ಮೆಂಟ್ ಇರುವ ಜಾಗದಲ್ಲಿ ಬೆರಳನ್ನಿಟ್ಟು ಒಂದು ನಿಮಿಷ ಕಾಲ ಆ ಪ್ರದೇಶದಲ್ಲಿ ಒತ್ತಡ ಉಂಟು ಮಾಡುತ್ತಾ ನಯವಾಗಿ ಮಸಾಜ್ ಮಾಡಿಕೊಳ್ಳಿ. ನಿತ್ಯ ಈ ರೀತಿ ಮಾಡಿದರೆ ಒಳ್ಳೆಯ ಫಲಿತಾಂಶ ಪಡೆಯಬಹುದು. ಶೀಘ್ರದಲ್ಲೇ ನಿಮ್ಮ ಅಧಿಕ ತೂಕ ಕಡಿಮೆಯಾಗುತ್ತದೆ. ಆದರೆ ಇದನ್ನು ಮಾಡುತ್ತಿದ್ದೇನೆ ಎಂದು ಹೆಚ್ಚಾಗಿ ತಿಂದು ಕನಿಷ್ಠ ಎಚ್ಚರಿಕೆಗಳನ್ನೂ ಪಾಲಿಸುವುದನ್ನು ಮಾತ್ರ ಮರೆಯಬೇಡಿ!

Comments are closed.