ಕರಾವಳಿ

ಮಗು ತಾಯಿಗರ್ಭದಲ್ಲಿದ್ದಾಗ ಇಷ್ಟಪಡದಂತಹ ಕೆಲವು ವಿಷಯಗಳು.

Pinterest LinkedIn Tumblr

https://www.youtube.com/watch?v=XMktcCPEQwU

ಗರ್ಭಧಾರಣೆ ಎಂಬ ಪದ ಕೇಳಿದೊಡನೆ ಎಲ್ಲರ ಯೋಚನೆಗೆ ಬರುವುದೇ ಅಮ್ಮ, ಅಪ್ಪ ಮತ್ತು ಉದರದೊಳಗಿನ ಆ ಪುಟ್ಟ ಮಗು. ಅಮ್ಮಂದಿರು ತಾವು ಏನು ತಿನ್ನಬೇಕು, ಏನು ತಿನ್ನಬಾರದು ಎಂಬುದರ ಬಗ್ಗೆ ಬಹಳಷ್ಟು ತಲೆ ಕೆಡಿಸಿಕೊಳ್ಳುತ್ತಾರೆ. ಅಪ್ಪಂದಿರು ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೆ. ಇವರು ಸರಿಯಾದ ಸಮಯಕ್ಕೆ ಚೆಕ್-ಅಪ್ ಗಳಿಗೆ ಹೋಗುತ್ತಾರೆ ಮತ್ತು ತಮ್ಮ ಮಗುವಿಗೆ ಇಡಬೇಕೆಂದುಕೊಂಡಿರುವ ಹೆಸರುಗಳ ಪಟ್ಟಿ ಮಾಡಿಕೊಳ್ಳುತ್ತಾರೆ. ಆದರೆ ಯಾರು ಯೋಚಿಸದ ಒಂದು ವಿಷಯ ಎಂದರೆ, ಅದು ಹೊಟ್ಟೆಯೊಳಗೆ ಮಗುವಿಗೆ ಏನು ಅನಿಸುತ್ತಿರುತ್ತದೆ ಎಂಬುದು!

ಉದರದೊಳಗೆ ಮಗುವಿಗೆ ಏನು ಅನಿಸುತ್ತಿರುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ, ಏಕೆಂದರೆ ಯಾರಿಗೂ ಅದರ ನೆನಪು ಇರುವುದಿಲ್ಲ ಮತ್ತು ಅದಕ್ಕೆ ಪೂರಕವಾಗಿ ಯಾವ ಪುರಾವೆಗಳೂ ಇಲ್ಲ. ಆದರೆ ಅಲ್ಟ್ರಾಸೌಂಡ್ ಮೂಲಕ ನಿಮ್ಮ ಮಗುವಿನ ಮುಖಭಾವವನ್ನು ನೋಡಿ, ಅದು ಖುಷಿಯಾಗಿದೆಯೋ ಅಥವಾ ಬೇಸರದಲ್ಲಿದೆಯೋ ಎಂಬುದನ್ನು ನಾವು ಅರಿಯಬಹುದು. ಹೊಟ್ಟೆಯೊಳಗಿನ ಮಕ್ಕಳು ಅಳುವುದಿಲ್ಲ, ಆದರೆ ಅವುಗಳು ಬೇಸರವಾದಾಗ ಅಥವಾ ಅವುಗಳಿಗೆ ಅಹಿತಕರ ಭಾವನೆಗಳು ಉಂಟಾದರೆ ತಮ್ಮ ಮುಖವನ್ನು ಮುದುರಿಕೊಳ್ಳುತ್ತವೆ. ಬಹುತೇಕ ಮಕ್ಕಳು ಹೊಟ್ಟೆಯೊಳಗಿದ್ದಾಗ ಇಷ್ಟಪಡದಂತಹ ಕೆಲವು ವಿಷಯಗಳು ಯಾವು ಎಂಬುದರ ಪಟ್ಟಿ ಇಲ್ಲಿದೆ ನೋಡಿ

೧. ಅಮ್ಮ ನಕ್ಕಾಗ
ಗರ್ಭಿಣಿ ಹೆಣ್ಣು ಮತ್ತು ಅಲ್ಟ್ರಾಸೌಂಡ್ ತಪಾಸಣೆ ಯಂತ್ರ ಒಳಗೊಂಡಿದ್ದ ಒಂದು ಅಧ್ಯಯನದಲ್ಲಿ, ಅಮ್ಮನ ನಗುವಿಗೆ ಮಗುವಿನ ಪ್ರತಿಕ್ರೆಯೆಯನ್ನು ಗಮನಿಸಲಾಯಿತು. ಅಮ್ಮನ ನಗು ಆಕೆಯ ಹೊಟ್ಟೆ ಮೇಲೆ-ಕೆಳಗೆ ಅಲುಗಾಡುವ ಕಾರಣ, ಅದು ಮಗುವು ಕೂಡ ಜಿಗಿಯುವಂತೆ ಮಾಡುತ್ತದೆ. ಅರ್ಧದಷ್ಟು ಮಕ್ಕಳು ಅಮ್ಮ ನಕ್ಕೊಡನೆ, ತಾವು ಕೂಡ ಮುಗುಳ್ನಗು ಬೀರಿದವು. ಆದರೆ ಇನ್ನುಳಿದ ಅರ್ಧದಷ್ಟು ಮಕ್ಕಳಿಗೆ ಇದು ಅಷ್ಟೊಂದು ಖುಷಿ ತರಲಿಲ್ಲ. ಅವರ ಮುಖವು ಬೇಸರವನ್ನು ವ್ಯಕ್ತಪಡಿಸುತಿತ್ತು ಮತ್ತು ಕೆಲವು ಮಕ್ಕಳು ಅಳಲು ಕೂಡ ಶುರು ಮಾಡಿದವು.

೨. ಮಗುವನ್ನು ಆಶ್ಚರ್ಯಪಡಿಸುವುದು
ಮಕ್ಕಳು ಜೋರಾದ ಸದ್ದುಗಳನ್ನು ಕೇಳಿದಾಗ ಅಥವಾ ಅವರ ಅಮ್ಮ ದಿಢೀರನೆ ಜಿಗಿಯದಾಗ ಅಥವಾ ಭಂಗಿ ಬದಲಿಸದಾಗ ಚಕಿತಗೊಳ್ಳುತ್ತವೆ. ಹೇಗೆ ನಾವು ದಿಢೀರನೆ ಗಾಬರಿಪಡಿಸುವುದು ಇಷ್ಟಪಡುವುದಿಲ್ಲವೋ, ಮಕ್ಕಳು ಕೂಡ ಹಾಗೆಯೆ. ಅವರಿಗೆ ಹೊರಜಗತ್ತಿಒನೊಂದಿಗೆ ಇರುವ ಒಂದೇ ಒಂದು ಕೊಂಡಿಯಂದರೆ ಅದು ನೀವೇ. ಭ್ರೂಣಕ್ಕೆ 28 ವಾರಗಳು ಆಗುವವರೆಗು ಅವುಗಳಿಗೆ ದೃಷ್ಟಿಯು ಕೂಡ ಇರುವುದಿಲ್ಲ.

೩. ಅಮ್ಮ ಬೆಡ್ ಮೇಲೆ ಹೊರಳಾಡಿದಾಗ
ಇದು ಕೂಡ ಅಮ್ಮ ನಕ್ಕಾಗ ಹೇಗೆ ಆಗುತ್ತದೋ ಹಾಗೆ ಆಗುತ್ತದೆ ಆದರೆ ಒಂದನ್ನು ಬಿಟ್ಟು. ಅದು ಏನೆಂದರೆ ಇಲ್ಲಿ ಮಗುವಿಗೆ ತನ್ನ ಇಡೀ ಮನೆಯನ್ನೇ ಒಂದು ಕಡೆಯಿಂದ ಇನ್ನೊಂದು ಕಡೆಗೆ ವರ್ಗಾಯಿಸಿದಂತೆ ಅನಿಸುತ್ತದೆ. ಅಮ್ಮನ ಕೆಲವೊಂದು ಮಲಗುವ ಭಂಗಿಗಳು, ಹೊಟ್ಟೆಯೊಳಗೆ ಮಗುವಿಗೆ ತನ್ನ ಚಲನೆಗಳನ್ನು ಮಾಡುವಷ್ಟು ಜಾಗವನ್ನು ನೀಡುವುದಿಲ್ಲ. ಆಗಲೇ ನೀವು ಬೇಬಿ ಕಿಕ್ಸ್ ಅಥವಾ ಮಗುವಿನ ಒದೆಗಳನ್ನು ಅನುಭವಿಸುವುದು.

೪. ಗದ್ದಲ ವಾತಾವರಣ
ಯಾರಿಗೂ ಗಲಾಟೆ, ಗದ್ದಲ ಎಂದರೆ ಇಷ್ಟವಾಗುವುದಿಲ್ಲ. ವಾತಾವರಣವು ಗದ್ದಲದಿಂದ ಕೂಡಿದ್ದರೆ ನಿಮ್ಮ ಮಗುವಿಗೆ ಇರಿಸುಮುರಿಸು ಉಂಟಾಗುತ್ತದೆ ಮತ್ತು ಅವು ಚಕಿತಗೊಳ್ಳುತ್ತವೆ. ಇದು ನೀವು ನಿಮ್ಮ ಟಿವಿ ಸೀರಿಯಲ್ ಅನ್ನು ಜೋರಾಗಿ ಸೌಂಡ್ ಇಟ್ಟುಕೊಂಡು ನೋಡುವಾಗಲೂ ಆಗಬಹುದು.

೫. ಹೊಟ್ಟೆಯನ್ನು ಒತ್ತಿದ್ದಾಗ
ಅಮ್ಮಂದಿರು ತಮ್ಮ ಮಕ್ಕಳ ಪ್ರತಿಕ್ರಿಯೆ ಪಡೆಯಲು ತಮ್ಮ ಹೊಟ್ಟೆಯನ್ನು ಮುಟ್ಟುವುದು, ಬೆರಳುಗಳಿಂದ ಒತ್ತುವುದು ಸಹಜ. ನಿಮ್ಮ ಮಗುವು ಆಟ ಆಡುವ ಮೂಡ್ ಅಲ್ಲಿ ಇದ್ದರೆ, ಬಾಂಧವ್ಯ ಬೆಸೆಯಲು ಇದೊಂದು ಅತ್ಯುತ್ತಮ ದಾರಿ. ನಿಮ್ಮ ಮಗುವು ಒದ್ದಾಗ, ನೀವು ಮೃದುವಾಗಿ ಅದನ್ನು ಒತ್ತುವ ಮೂಲಕ ನೀವು ಅದು ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ನೋಡಬಹುದು. ಒಂದು ವೇಳೆ ಅವರು ತಿರುಗಿಸಿ ಹೊಟ್ಟೆಗೆ ಒದ್ದರೆ, ಮಗುವು ಆಟ ಆಡುವ ಮೂಡ್ ಅಲ್ಲಿ ಇದೆ ಎಂದರ್ಥ. ಅವರು ಒಂದು ವೇಳೆ ನೀವು ಒತ್ತಿದ ಜಾಗದಿಂದ ಬೇರೆಡೆ ತಿರುಗಿಕೊಂಡರೆ, ನಮ್ಮನ್ನು ಸುಮ್ಮನೆ ಬಿಡಿ ಎಂದರ್ಥ.

೬. ಅಮ್ಮ ಒತ್ತಡದಲ್ಲಿ ಇದ್ದಾಗ
ಅಮ್ಮ ಒತ್ತಡದಲ್ಲಿ ಇರುವುದನ್ನು ಮಗು ಗುರುತಿಸಬಲ್ಲದು. ದೇಹವು ಈ ಸಮಯದಲ್ಲಿ ಕಾರ್ಟಿಸೋಲ್ ಎಂಬ ಹಾರ್ಮೋನ್ ಬಿಡುಗಡೆ ಮಾಡುತ್ತದೆ. ಈ ಹಾರ್ಮೋನ್ ನಿಮ್ಮ ದೇಹವನ್ನು ದುರ್ಬಲ ಮಾಡುತ್ತದೆ ಮತ್ತು ನಿಮಗೆ ನಿದ್ರೆ ತರಿಸುತ್ತದೆ. ಅಮ್ಮ ಬೇಜಾರು ಆದಾಗಲೂ ಇದು ಆಗಬಹದು. ಮಗುವಿನ ಮೂಡ್ ಅಮ್ಮನ ಮೂಡ್ ಮೇಲೆ ಅವಲಂಬಿತ ಆಗಿರುತ್ತದೆ. ಹೀಗಾಗಿ, ನೀವು ಖುಷಿಯಾಗಿ ಇದ್ದರೆ, ನಿಮ್ಮ ಮಗುವು ಕೂಡ ಖುಷಿಯಾಗಿ ಇರುತ್ತದೆ.

Comments are closed.