ಆರೋಗ್ಯ

ಕೂದಲಿನ ಸೌಂದರ್ಯ ಹೆಚ್ಚಿಸಲು ಹೀಗೆ ಮಾಡಿ

Pinterest LinkedIn Tumblr


ಕೂದಲಿನ ಸರಿಯಾದ ಆರೈಕೆ ಮಾಡದಿರುವುದು, ಆಹಾರ ಕ್ರಮ ಮತ್ತು ಧೂಳು ಕೂದಲು ತನ್ನ ಕಾಂತಿಯನ್ನು ಕಳೆದುಕೊಳ್ಳಲು ಪ್ರಮುಖ ಕಾರಣವಾಗಿದೆ. ಆರೋಗ್ಯಕರವಾದ ಕೂದಲು ಪಡೆಯಬೇಕೆಂದರೆ ಪೋಷಕಾಂಶಗಳು ಅಗತ್ಯವಾಗಿ ಬೇಕು.

ಬೆಣ್ಣೆಹಣ್ಣಿನ (ಆವಕಾಡೊ) ಪೇಸ್ಟ್‌ ಮಾಡಿಕೊಳ್ಳಬೇಕು. ಬೆಣ್ಣೆಹಣ್ಣು ಆರೋಗ್ಯಕರವಾದ ಹಣ್ಣು. ಇದರ ಎಣ್ಣೆಯೂ ಸೌಂದರ್ಯವರ್ಧಕವಾಗಿದೆ. ಇದರಲ್ಲಿರುವ ವಿಟಮಿನ್‌, ಲಿಸೈಥಿನ್‌, ಪೊಟ್ಯಾಶಿಯಂ ಚರ್ಮಕ್ಕೆ ಹಾಗೂ ಕೂದಲಿಗೆ ಅಗತ್ಯವಾದ ಪೋಷಣೆಯನ್ನು ನೀಡುತ್ತವೆ.

ಎರಡು ಕ್ಯಾರೆಟ್‌ ಅನ್ನು ತುರಿದುಕೊಂಡು ಅದರಿಂದ ರಸ ತೆಗೆಯಬೇಕು. ಕ್ಯಾರೆಟ್‌ ರಸ, ಅವಕಾಡೊ ಪೇಸ್ಟ್‌ ಅನ್ನು ಮಿಕ್ಸ್‌ ಮಾಡಬೇಕು. ಇದಕ್ಕೆ 1 ಚಮಚ ಆಲಿವ್‌ ಎಣ್ಣೆ, ಮೊಸರನ್ನು ಸೇರಿಸಬೇಕು. ಎಲ್ಲವನ್ನೂ ಮಿಕ್ಸ್‌ ಮಾಡಿ ಕೂಲದ ಬುಡಕ್ಕೆ ಹಚ್ಚಿ 20 ನಿಮಿಷ ಬಿಟ್ಟು ಸ್ನಾನ ಮಾಡಬೇಕು.

ಯಾವುದೇ ಕಂಡೀಷನರ್‌ ಅನ್ನು ಕೂದಲಿಗೆ ಹಚ್ಚುವಾಗ ನಿಧಾನವಾಗಿ ಮಸಾಜ್‌ ಮಾಡಬೇಕು. ಇದರಿಂದ ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ.

ಸಿಕ್ಕುಗಳನ್ನು ಕೈಯಿಂದಲೇ ಬಿಡಿಸಬೇಕು. ನಂತರ ನಿಧಾನವಾಗಿ ಅಗಲವಾದ ಹಲ್ಲುಗಳುಳ್ಳ ಬಾಚಣಿಗೆಯಿಂದ ಕೂದಲನ್ನು ಬಾಚಬೇಕು. ಇದರಿಂದ ಕೂದಲು ಉದುರುವುದನ್ನು ತಪ್ಪಿಸಬಹುದು.

Comments are closed.