ಮನೋರಂಜನೆ

ಪ್ರಶ್ನೆ ಮಾಡಿದ್ದಕ್ಕೆ ಬಲಪಂಥೀಯರು ನನ್ನ ಜಾಹೀರಾತುಗಳಿಗೆ ಕತ್ತರಿ ಹಾಕುತ್ತಿದ್ದಾರೆ: ಪ್ರಕಾಶ್ ರೈ

Pinterest LinkedIn Tumblr


ಬೆಂಗಳೂರು: ಬಹುಭಾಷಾ ತಾರೆ ಪ್ರಕಾಶ್ ರೈ ಮತ್ತೆ ಬಲಪಂಥೀಯರ ವಿರುದ್ಧ ಕಿಡಿ ಕಾರಿದ್ದಾರೆ. ಕಳೆದ ಕೆಲವು ದಿನಗಳಿಂದ ಕೇಂದ್ರ ಸರ್ಕಾರ ಮತ್ತು ಬಲಪಂಥೀಯ ಶಕ್ತಿಗಳ ವಿರುದ್ಧ ಕಿಡಿ ಕಾರುತ್ತಿರುವ ಕಾರಣಕ್ಕೆ ನನ್ನ ಕೆಲವು ಜಾಹೀರಾತುಗಳಿಗೇ ಅಡ್ಡಗಾಲು ಹಾಕಲು ಯತ್ನಗಳು ನಡೆಯುತ್ತಿವೆ ಎಂದು ಹೊಸ ಆರೋಪ ಮಾಡಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಕಾಶ್ ರೈ, ‘ನಾನು ರಾಯಭಾರಿಯಾಗಿರುವ ಉತ್ಪನ್ನಗಳ ಸಂಸ್ಥೆ ಮೇಲೆ ಬಲಪಂಥೀಯರು ನನ್ನನ್ನು ಕೈ ಬಿಡುವಂತೆ ಒತ್ತಡ ಹೇರುತ್ತಿದ್ದಾರೆ. ಅವರನ್ನು ಪ್ರಶ್ನಿಸಿದ್ದಕ್ಕೆ ನನಗೆ ಸಿಕ್ಕಿದ ಉಡುಗೊರೆ ಇದು’ ಎಂದು ಪ್ರಕಾಶ್ ರೈ ಕಿಡಿ ಕಾರಿದ್ದಾರೆ.

ಆದರೆ ಆ ಕಂಪನಿಗಳು ಒತ್ತಡಕ್ಕೆ ಮಣಿದು ನನ್ನನ್ನು ಕೈ ಬಿಡಲು ತಯಾರಿಲ್ಲ. ಅವರು ನನ್ನ ಪರವಾಗಿ ನಿಂತಿದ್ದಾರೆ. ಇದು ನನಗೆ ಮಾತ್ರವಲ್ಲ, ಶಾರುಖ್ ಖಾನ್, ಅಮೀರ್ ಖಾನ್ ನಂತಹ ಸ್ಟಾರ್ ನಟರೇ ಈ ಸಮಸ್ಯೆ ಎದುರಿಸಿದ್ದಾರೆ ಎಂದು ಪ್ರಕಾಶ್ ರೈ ಹೇಳಿದ್ದಾರೆ.

Comments are closed.