ಆರೋಗ್ಯ

ಪೋರ್ನೋಗ್ರಫಿ ವೀಕ್ಷಿಸುದರಿಂದ ನಿಮಗೆ ಗೊತ್ತಿಲ್ಲದೆಯೇ ಸಮಸ್ಯೆಗೆ ಸಿಲುಕುತ್ತೀರಿ…!

Pinterest LinkedIn Tumblr

ಲಂಡನ್: ತಂತ್ರಜ್ಙಾನ ಬೆಳೆದಂತೆ ಅನುಕೂಲತೆಗಳ ಜೊತೆ ಅನಾನುಕೂಲತೆಗಳು ಹೆಚ್ಚಾಗುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಇಂಟರ್ನೆಟ್. ಇಂಟರ್ನೆಟ್`ನಿಂದ ಜ್ಞಾನಾರ್ಜನೆ ಸೇರಿದಂತೆ ಇನ್ನಿತರೆ ಹಲವು ಪ್ರಯೋಜನಗಳಿವೆ. ಅದರ ಜೊತೆಗೆ ಅನಾನುಕೂಲತೆಗಳೂ ಇಲ್ಲದಿಲ್ಲ. ಇಂಟರ್ನೆಟ್ ಭರಾಟೆಯಲ್ಲಿ ಪೋರ್ನ್ ವೀಕ್ಷಣೆ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ.

ಇದೀಗ, ಮೊಬೈಲ್`ಗಳಲ್ಲೆ ಇಂಟರ್ನೆಟ್ ಲಭ್ಯವಿದ್ದು, ಹದಿಹರೆಯದಿಂದ ಹಿಡಿದು ವಯೋವೃದ್ಧರವರೆಗೆ ಪ್ರತಿಯೊಬ್ಬರೂ ಪೋರ್ನೋಗ್ರಫಿಗೆ ಮುಗಿಬೀಳುತ್ತಿದ್ದಾರೆ. ಅಮೆರಿಕ ಪೋರ್ನ್ ಇಂಡಸ್ಟ್ರೀಯ ವಾರ್ಷಿಕ ವಹಿವಾಟು 13 ಬಿಲಿಯನ್ ಡಾಲರ್`ಗೆ ಮುಟ್ಟಿರುವುದು ಇದರ ಬೇಡಿಕೆ ಎಷ್ಟಿದೆ ಎಂಬುದನ್ನ ಸಾಬೀತುಪಡಿಸುತ್ತಿದೆ.

ಅಮೆರಿಕದಲ್ಲಿ 18 ವರ್ಷದೊಳಗಿನ ಯುವಕರ ಪೈಕಿ 10ರಲ್ಲಿ 9 ಮಂದಿ 18ರ ಗಡಿ ದಾಟುವ ಮುನ್ನವೇ ಪೋರ್ನೋಗ್ರಫಿ ವೀಕ್ಷಿಸುತ್ತಿದ್ದಾರೆ. ಪೋರ್ನೋಗ್ರಫಿಯಿಂದ ಲೈಂಗಿಕ ಜ್ಞಾನ ಹೆಚ್ಚುತ್ತದೆಯಾದರೂ ಅದರ ದುಷ್ಪರಿಣಾಮಗಳೇ ಜಾಸ್ತಿ ಎನ್ನುತ್ತೆ ಸಮೀಕ್ಷೆ.

ಪೋರ್ನೋಗ್ರಫಿ ವೀಕ್ಷಣೆಯಿಂದ ವೈವಾಹಿಕ ಯಾತನೆ, ಬೇರಾಗುವುದು, ಲೈಂಗಿಕಾಸಕ್ತಿ ಕುಂದುವುದು, ರೊಮ್ಯಾಂಟಿಕ್ ಜೀವನದಲ್ಲಿ ಅನ್ಯೋನ್ಯತೆ ಕುಂದುವುದು, ಲೈಂಗಿಕ ಅತೃಪ್ತಿ, ದಾಂಪತ್ಯದಲ್ಲಿ ವಂಚನೆ ಪ್ರೌವೃತ್ತಿ ಇವೇ ಮುಂತಾದ ಸಮಸ್ಯೆ ಉಂಟಾಗುತ್ತೆ ಎನ್ನುತ್ತೆ ಸಮೀಕ್ಷೆ.

Comments are closed.