ಆರೋಗ್ಯ

ಅದ್ಭುತ ಆಹಾರ ಪದ್ದತಿಗಳ ಅನುಕರಣೆಯಿಂದ ರಕ್ತ ಶುದ್ಧೀಕರಣ

Pinterest LinkedIn Tumblr

ನಮ್ಮ ದೇಹದ ಅತ್ಯಂತ ಪ್ರಮುಖ ದ್ರವವೆಂದರೆ ರಕ್ತ. ಇದನ್ನು ಬದಲಿಸಲು ಬೇರಾವುದೇ ದ್ರವದಿಂದ ಸಾಧ್ಯವಿಲ್ಲ. ಅಲ್ಲದೇ ಅತಿ ಕಡಿಮೆ ಆರೈಕೆ ಪಡೆಯುವ ದ್ರವವೂ ಆಗಿದೆ. ಶರೀರದ ಎಲ್ಲಾ ಜೀವಕೋಶಗಳಿಗೆ ಶಕ್ತಿ ಮತ್ತು ಆಮ್ಲಜನಕವನ್ನು ಒದಗಿಸಿ ಕಲ್ಮಶಗಳನ್ನು ವಿಸರ್ಜಿಸುವ ರಕ್ತವೂ ಕೆಲವೊಮ್ಮೆ ಮಲಿನಗೊಳ್ಳುತ್ತದೆ. ರಕ್ತ ಮಲಿನಗೊಂಡ ಸೂಚನೆಯನ್ನು ದೇಹ ಆಗಾಗ ನೀಡುತ್ತಿರುತ್ತದೆ. ಈ ಸೂಚನೆಗಳನ್ನು ಎಂದಿಗೂ ಅಲಕ್ಷಿಸಕೂಡದು.

ರಕ್ತದ ಗುಣಮಟ್ಟ ಉತ್ತಮವಾಗಿರಬೇಕಾದರೆ ಮಲಿನಗೊಂಡ ರಕ್ತವನ್ನು ಶುದ್ಧೀಕರಿಸುತ್ತಾ ಇರಬೇಕಾಗುತ್ತದೆ. ಶುದ್ಧ ರಕ್ತದಿಂದ ಆರೋಗ್ಯವೂ ಉತ್ತಮ ವಾಗಿರುತ್ತದೆ. ರಕ್ತವನ್ನು ಶುದ್ಧೀಕರಿಸುವ ಮೂಲಕ ಮೂತ್ರಪಿಂಡಗಳ ಮೇಲೆ ಬೀಳುವ ಒತ್ತಡವನ್ನೂ ಕಡಿಮೆ ಮಾಡಿದಂತಾಗುತ್ತದೆ. ಅಷ್ಟೇ ಅಲ್ಲ, ರಕ್ತ ಶುದ್ಧೀಕರಣದಿಂದ ಇನ್ನೂ ಹಲವಾರು ಉಪಯೋಗಗಳಿವೆ. ರಕ್ತ ಶುದ್ಧ ಮತ್ತು ಆರೋಗ್ಯಕರವಾಗಿದ್ದಷ್ಟೂ ದೇಹದ ಎಲ್ಲಾ ಅಂಗಾಂಗಗಳು ಆರೋಗ್ಯಕರವಾಗಿದ್ದು ಘಾಸಿಗೊಳ್ಳುವುದರಿಂದ ರಕ್ಷಣೆ ಪಡೆಯುತ್ತವೆ..

ರಕ್ತ ಶುದ್ಧೀಕರಣದಿಂದ ಲಭಿಸುವ ಪ್ರಯೋಜನಗಳು ರಕ್ತ ಶುದ್ಧೀಕರಣದ ಮೂಲಕ ಕಲ್ಮಶಗಳನ್ನು ಹೊರಹಾಕಿದರೆ ಇದರ ಮೂಲಕ ಎದುರಾಗುವ ತಲೆನೋವು, ಹಠಾತ್ತಾಗಿ ಆವರಿಸುವ ಅಲರ್ಜಿ, ಸುಸ್ತು, ಸುಲಭವಾಗಿ ರೋಗಗಳಿಗೆ ತುತ್ತಾಗುವುದು, ಮೊಡವೆಗಳು, ಚರ್ಮದ ಬಣ್ಣ ಕಾಂತಿ ರಹಿತ ವಾಗುವುದು, ಚರ್ಮ ಬಿರಿ ಬಿಡುವುದು ಮೊದಲಾದ ತೊಂದರೆಗಳೂ ಇಲ್ಲವಾಗುತ್ತವೆ. ಬನ್ನಿ, ರಕ್ತ ಶುದ್ಧೀಕರಣವನ್ನು ಸುಲಭವಾಗಿಸುವ ಕೆಲವು ಅದ್ಭುತ ಆಹಾರಗಳ ಬಗ್ಗೆ ಈಗ ಅರಿಯೋಣ.

1.ಬೆಳ್ಳುಳ್ಳಿ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹಾಗೂ ಖನಿಜಗಳು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತವೆ ಹಾಗೂ ರಕ್ತವನ್ನು ಶುದ್ಧೀಕರಿಸಲು ನೆರವಾಗುತ್ತವೆ. ಇದೇ ಕಾರಣಕ್ಕೆ ಒಂದೆರಡು ಹಸಿ ಬೆಳ್ಳುಳ್ಳಿ ಎಸಳನ್ನು ದಿನಕ್ಕೊಂದು ಬಾರಿಯಾದರೂ ಆಹಾರದೊಡನೆ ಸೇವಿಸಲು ಸಲಹೆ ನೀಡಲಾಗುತ್ತದೆ.
2.ಅರಿಶಿನ ಅರಿಶಿನ ಒಂದು ಉತ್ತಮವಾದ ಬ್ಯಾಕ್ಟೀರಿಯಾ ನಿವಾರಕ, ಉರಿಯೂತ ನಿವಾರಕ ಹಾಗೂ ಒತ್ತಡನಿವಾರಕವಾಗಿದೆ. ಅಲ್ಲದೇ ಇದೊಂದು ಉತ್ತಮ ರಕ್ತ ಶುದ್ಧೀಕಾರಕವೂ ಆಗಿದೆ. ನಿತ್ಯವೂ ಆಹಾರದಲ್ಲಿ ಅರಿಸಿನವನ್ನು ಸೇವಿಸುವ ಮೂಲಕ ರಕ್ತವನ್ನು ಶುದ್ಧವಾಗಿಟ್ಟುಕೊಳ್ಳಬಹುದು.
3.ಕೊತ್ತಂಬರಿ ಮತ್ತು ಪಾರ್ಸ್ಲೆ ಎಲೆಗಳು ಇವೆರಡೂ ಎಲೆಗಳಲ್ಲಿ ರಕ್ತವನ್ನು ಶುದ್ದೀಕರಿಸುವ ಉತ್ತಮ ಪೋಷಕಾಂಶಗಳಿವೆ ಹಾಗೂ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತವೆ. ಇವುಗಳಲ್ಲಿರುವ ವಿಟಮಿನ್ ಎ, ಸಿ ಮತ್ತು ವಿಶೇಷವಾಗಿ ವಿಟಮಿನ್ ಕೆ ಹಾಗೂ ಫೋಲೇಟ್ ಗಳು ರಕ್ತ ಶುದ್ದೀಕರಿಸಲು ನೆರವಾಗುತ್ತದೆ.
4.ತುಳಸಿ ಈ ಎಲೆಗಳಲ್ಲಿ ಆಂಟಿ ಆಕ್ಸಿಡೆಂಟು, ಬ್ಯಾಕ್ಟೀರಿಯಾ ನಿವಾರಕ ಹಾಗೂ ಒತ್ತಡ ನಿವಾರಕ ಗುಣಗಳಿವೆ. ಈ ಎಲೆಗಳನ್ನು ಕೊಂಚವೇ ನಿತ್ಯವೂ ಸೇವಿಸುವ ಮೂಲಕ ರಕ್ತವನ್ನು ಅತ್ಯುತ್ತಮವಾಗಿ ಶುದ್ಧೀಕರಿಸಬಹುದು. ರಕ್ತ ಶುದ್ಧೀಕರಣಕ್ಕೆ ತುಳಸಿ ಅತ್ಯುತ್ತಮವಾದ ಆಹಾರವಾಗಿದೆ.
5.ಕೇಯ್ನ್ ಮೆಣಸು ಈ ಮೆಣಸಿನಲ್ಲಿ ವಿಟಮಿನ್ ಇ ಹಾಗೂ ಏ ಇವೆ. ಅಲ್ಲದೇ ಪೊಟ್ಯಾಶಿಯಂ ಹಾಗೂ ಮೆಗ್ನೇಶಿಯಂ ಸಹಾ ಇವೆ. ಇವೆಲ್ಲವೂ ರಕ್ತ ಶುದ್ಧೀಕರಣದಲ್ಲಿ ನೆರವಾಗುತ್ತವೆ. ಇದರಿಂದ ನಿತ್ಯದ ಆಹಾರದಲ್ಲಿ ಈ ಮೆಣಸಿಗೂ ಸ್ಥಾನ ನೀಡುವುದು ಆರೋಗ್ಯಕ್ಕೆ ಪೂರಕವಾಗಿದೆ.
6.ಕ್ಯಾರೆಟ್ ಗಜ್ಜರಿ ಅಥವಾ ಕ್ಯಾರೆಟ್ಟುಗಳಲ್ಲಿ ಸಹಾ ಉತ್ತಮ ಪೋಷಕಾಂಶಗಳಿದ್ದು ರಕ್ತ ಶುದ್ದೀಕರಣಕ್ಕೆ ನೆರವಾಗುತ್ತವೆ. ಅಲ್ಲದೇ ಚರ್ಮ, ಕೂದಲು ಹಾಗೂ ಕಣ್ಣುಗಳಿಗೂ ಕ್ಯಾರೆಟ್ ಉತ್ತಮ ಆಹಾರವಾಗಿದೆ.
7.ಹಾಗಲಕಾಯಿ ರಕ್ತ ಶುದ್ಧೀಕರಣಕ್ಕೆ ಹಾಗಲಕಾಯಿ ಉತ್ತಮ ಆಹಾರವಾಗಿದೆ ಹಾಗೂ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಸಮತೋಲನದಲ್ಲಿರಲು ನೆರವಾಗುತ್ತದೆ. ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ನಿವಾರಿಸುವ ಕಾರಣಕ್ಕೆ ಇದಕ್ಕೆ ಅದ್ಭುತ ಆಹಾರದ ಪಟ್ಟವೂ ದೊರಕಿದೆ
8.ಬೀಟ್ರೂಟ್ ಈ ತರಕಾರಿಯಲ್ಲಿ ವಿಟಮಿನ್ ಎ,ಬಿ,ಸಿ ಹಾಗೂ ಕೆ, ಫೋಲಿಕ್ ಆಮ್ಲ ಹಾಗೂ ಉತ್ತಮ ಪ್ರಮಾಣದ ಕರಗುವ ನಾರು ಸಹಾ ಇವೆ. ಇವೆಲ್ಲವೂ ರಕ್ತ ಶುದ್ಧೀಕರಣಕ್ಕೆ ನೆರವಾಗುತ್ತವೆ

Comments are closed.