ಆರೋಗ್ಯ

ಚರ್ಮದ ಮೇಲೆ ಕೆಟ್ಟದಾಗಿ ಕಾಣುವ ರಾಶಸ್ (ದದ್ದು) ನಿವಾರಣೆಗೆ ಮನೆಮದ್ದು.

Pinterest LinkedIn Tumblr

ಚರ್ಮದಲ್ಲಿ ದದ್ದು(ರಾಶಸ್)(rashes) ಯಾವುದೇ ಕಾರಣಕ್ಕೆ ಬೇಕಾದರೂ ಆಗಬಹುದು, ಅದು ಅಲರ್ಜಿ ಇಂದ ಹಿಡಿದು, ಸೋಂಕಿನವರೆಗೆ ಆಗಿರಬಹುದು. ಕೆಲವು ದದ್ದುಗಳು ತಾವಾಗಿಯೇ ಸರಿಹೋಗುತ್ತವೆ, ಆದರೆ ಕೆಲವಕ್ಕೆ ಚಿಕಿತ್ಸೆ ಬೇಕು, ಇಲ್ಲದಿದ್ದರೆ ನಿಮ್ಮ ಚರ್ಮದ ಮೇಲೆ ಕೆಟ್ಟದಾಗಿ ಕಾಣುವ ಜೊತೆಗೆ ಕಾಯಿಲೆಯನ್ನು ತರಬಹುದು.

1.ಕೊತ್ತುಂಬರಿ
ಈ ಮಾಂತ್ರಿಕ ಘಟಕಾಂಶವು ನಿಮ್ಮ ತ್ವಚೆಯ ದದ್ದುಗಳನ್ನು ಸರಿಪಡಿಸಲು ಹಿತವಾದ, ಉರಿಯೂತದ ವಿರೋಧಿಯಾಗಿ ಮತ್ತು ನಂಜುನಿರೋಧಕ ಲಕ್ಷಣಗಳನ್ನು ಹೊಂದಿದೆ. ಸ್ವಲ್ಪ ಕೊತ್ತುಂಬರಿ ಸೊಪ್ಪನ್ನು ನುಣ್ಣಗೆ ಪೇಸ್ಟ್ ತರಹ ಮಾಡಿಕೊಂಡು ಅದಕ್ಕೆ ಸ್ವಲ್ಪ ನಿಂಬೆರಸ ಸೇರಿಸಿ. ಇದನ್ನು ದದ್ದು ಇರುವ ಜಾಗಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ತೊಳೆದುಕೊಳ್ಳಿ. ನಿಂಬೆಹಣ್ಣಿನಲ್ಲಿ ಆಮ್ಲ ಇರುವುದರಿಂದ ಸ್ವಲ್ಪ ಉರಿದಂತೆ ಅನುಭವವಾಗಬಹುದು. ದಿನಕ್ಕೆ ಎರಡು ಬಾರಿ ಅಂತೆ ಇದನ್ನು ಕೆಲವು ದಿನಗಳು ನಿರಂತರವಾಗಿ ಮಾಡಿ.

2.ಬಾಳೆಹಣ್ಣಿನ ಸಿಪ್ಪೆ
ಬಾಳೆಹಣ್ಣಿನ ಸಿಪ್ಪೆ ಇದರಿಂದ ಉಂಟಾಗುವ ಕಡಿತವನ್ನು, ಉರಿಯನ್ನು, ಚರ್ಮದ ಒಣಗುವಿಕೆಯನ್ನು ಕಡಿಮೆ ಮಾಡುತ್ತದೆ. ಒಂದು ಅಥವಾ ಎರಡು ಗಂಟೆಗಳ ಕಾಲ ಬಾಳೆಹಣ್ಣು ಸಿಪ್ಪೆ ಅನ್ನು ಫ್ರಿಡ್ಜ್ ನಲ್ಲಿ ಇಡಿ. ನಂತರ ಅದನ್ನು ತೆಗೆದು ನೇರವಾಗಿ ದದ್ದು ಇರುವ ಜಾಗಕ್ಕೆ ಇರಿಸಿ, ಅರ್ಧ ಗಂಟೆಗಳ ತನಕ ಹಾಗೆ ಬಿಡಿ. ನಂತರ ನೀರಿನಿಂದ ತೊಳೆದುಕೊಳ್ಳಿ.

ಅಥವಾ ಬಾಳೆಹಣ್ಣು ಸಿಪ್ಪೆಯನ್ನು ಪೇಸ್ಟ್ ಮಾಡಿಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ದದ್ದು ಇರುವ ಜಾಗಕ್ಕೆ ಹಚ್ಚಿ ಅರ್ಧ ಗಂಟೆಗಳ ನಂತರ ತೊಳೆದುಕೊಳ್ಳಿ.

3.ಬೇವಿನ ಎಲೆ
ಇದರಲ್ಲಿರುವ ಸೂಕ್ಹ್ಮ ಜೀವಾಣುಗಳು, ನಿಮ್ಮ ಚರ್ಮದಲ್ಲಿರುವ ವಿಷಕಾರಿ ಮತ್ತು ಕಲ್ಮಶ ಅಂಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಜೊತೆಗೆ ಇದು ಚರ್ಮದ ಕಡಿತವನ್ನು ಮತ್ತು ನೋವನ್ನು ಕಡಿಮೆ ಮಾಡುತ್ತದೆ. 15ನಿಮಿಷಗಳ ಕಾಲ 10 ರಿಂದ 15 ಬೇವಿನ ಎಲೆಗಳನ್ನು ನೀರಿನಲ್ಲಿ ಬೇಯಿಸಿ. ಈ ನೀರನ್ನು ನೀವು ಸ್ನಾನ ಮಾಡುವ ನೀರಿನೊಂದಿಗೆ ಸೇರಿಸಿ ಸ್ನಾನ ಮಾಡಿ.

4.ಓಟ್
ಇದು ತ್ವಚೆಯ ಉರಿಯೂತವನ್ನು ಕಡಿಮೆ ಮಾಡುವುದರಿಂದ ಇದನ್ನು ದದ್ದು ಇರುವ ಜಾಗಕ್ಕೆ ಬಳಸಬಹುದು. ಓಟ್ಮೀಲ್ ಪುಡಿಯನ್ನು ನೀವು ಸ್ನಾನ ಮಾಡುವಾಗ ಬಳಸಬಹುದು. ಅಥವಾ ಪುಡಿಯನ್ನು ಕಡಿತ ಇರುವ ಜಾಗಕ್ಕೆ ಹಚ್ಚಿ 10ರಿಂದ 20 ನಿಮಿಷ ಬಿಟ್ಟು ನಂತರ ಬೆಚ್ಚನೆಯ ನೀರಿನಲ್ಲಿ ತೊಳೆದುಕೊಳ್ಳುವುದು.

Comments are closed.