ಆರೋಗ್ಯ

ಸೀಬೆಹಣ್ಣು ಮತ್ತು ಅದರ ಎಲೆಯ ಮಹತ್ವ ಗೊತ್ತೆ….?

Pinterest LinkedIn Tumblr

guva_leaf_benifit

ಮಂಗಳೂರು: ನಾವು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ನಮ್ಮ ಸುತ್ತಮುತ್ತ ಕಂಡುಬರುವ ಎಷ್ಟೋ ಉತ್ತಮ ಆಹಾರ ಪದಾರ್ಥದ ಮಹಿಮೆಯನ್ನ ರಿಯದೇ, ಅದರ ಬಳಕೆಯ ಹಿಂದಿನ ವೈಜ್ಞಾನಿಕ ಔಷಧೀಯ ಅಂಶ, ಗುಣಗಳ ಬಗೆಗೆ ನಿಶ್ಕಾಳಜಿಯುತವಾಗಿ ನಡೆದುಕೊಳ್ಳುತ್ತಿದ್ದೇವೆ. ಅದರ ಪರಿಣಾಮವಾಗಿ ಹಲವಾರು ತೊಂದರೆಗಳಿಗೆ ಸುಲಭವಾದ, ನಿಸರ್ಗದತ್ತವಾದ ಮನೆಮದ್ದು ಪರಿಹಾರದ ಬದಲಾಗಿ ಕಠಿಣ ಜಟಿಲ ಮಾರ್ಗದತ್ತ ಮುಖ ಮಾಡಿದ್ದೇವೆ. ಹಾಗಾಗಿ ನಮ್ಮ ಆಹಾರದ ಬಗೆಗಿನ ಅರಿವು ಬಹಳ ಮುಖ್ಯವಾದುದು.

ಅಂತಹ ಆಹಾರ ಪದಾರ್ಥಗಳಲ್ಲೊಂದಾದ ಭಾರತೀಯ ಬಡವರ ಸೇಬು ಎಂದೇ ಕರೆಯಲಾಗುವ ಪೇರಲೆ ಹಣ್ಣು ಔಷಧಗಳ ಆಗರ. ಪೇರಲೆ ಹಣ್ಣು ಯಾರಿಗೆ ಇಷ್ಟವಿಲ್ಲ ಹೇಳಿ. ತಿನ್ನಲು ರುಚಿಕರವಾಗಿರುವ ಹಣ್ಣು ಆರೋಗ್ಯಕ್ಕೂ ಒಳ್ಳೆಯದು.

ಅತಿ ಹೆಚ್ಚು ಪ್ರಮಾಣದ ಜೀವಸತ್ವ ಸಿ ಯನ್ನು ಹೊಂದಿರುವ ಪೇರಲೆಹಣ್ಣು ಹೆಚ್ಚಿನ ಪ್ರಮಾಣದಲ್ಲಿ ನಾರಿನಾಂಶ, ಪೊಟ್ಯಾಷಿಯಂ, ಮೆಗ್ನೀಷಿಯಂ, ಸಲ್ಪರ್, ತಾಮ್ರದಂಶಗಳನ್ನು ಸಹ ಒಳಗೊಂಡಿರುತ್ತದೆ. ಸಂಜೀವಿನಿ ರೀತಿಯಲ್ಲಿ ಕೆಲಸಮಾಡುವ ಈ ಪೇರಲೆಹಣ್ಣು ಆಂಟಿ ಆಕ್ಸಿಡಾಂಟ್ಗಳನ್ನೂ ಹೊಂದಿರುತ್ತದೆ. ದೇಹದ ಬೆಳವಣಿಗೆಗೆ ಪೂರಕವಾದ ಅಗತ್ಯ ಪೋಷಕಾಂಶಗಳು ಈ ಹಣ್ಣನ್ನು ತಿನ್ನುವುದರಿಂದ ದೊರೆಯುತ್ತದೆ. ಅಜೀರ್ಣ, ಹೊಟ್ಟೆಯಲ್ಲಿ ವಾಯು, ಕಫ, ಕೆಮ್ಮು ಇವುಗಳಿಗೆ ಈ ಪೇರಲೆಹಣ್ಣಿನಿಂದ ಮಾಡಿದ ಪದಾರ್ಥವನ್ನು ಉಪಯೋಗಿಸಬಹುದು.ಅದೇ ರೀತಿ ನಿಮಗೆ ಪೇರಲೆ ಹಣ್ಣಿನ ರುಚಿ ಮಾತ್ರ ಗೊತ್ತು. ಆದ್ರೆ ಪೇರಲೆ ಎಲೆಗಳು ಕೂಡ ಬಹಳ ಒಳ್ಳೆಯದು.

ಅರ್ಧ ಚಮಚ ಪೇರಲೆಹಣ್ಣಿನಿಂದ ಮಾಡಿದ ಪೇಸ್ಟ್ಗೆ ಚಿಟಿಕೆ ಒಣಶುಂಠಿ ಪೌಡರ್, ಸ್ವಲ್ಪ ಜೀರಿಗೆ ಪೌಡರ್, ಅತ್ಯಲ್ಪ ಕಾಳು ಮೆಣಸು, ಓಂ ಕಾಳಿನ ಪುಡಿ ಇವುಗಳನ್ನು ಸೇರಿಸಿ ಸರಿಯಾಗಿ ಮಿಶ್ರಣ ಮಾಡಿ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಸೇವಿಸುತ್ತ ಬೇಕು. ಇದು ಹೊಟ್ಟೆಯ ಸಮಸ್ಯೆಗೆ ಪರಿಹಾರವಾಗಬಲ್ಲದು. ಅದರಲ್ಲೂ ಕಫವನ್ನು ಹೊರಗೆ ಹಾಕುವ ವಿಶಿಷ್ಟ ಗುಣವನ್ನು ಇದು ಹೊಂದಿದೆ.

ಪೇರಲೆಹಣ್ಣು ಮಾತ್ರವಲ್ಲದೇ ಇದರ ಎಲೆಯೂ ಸಹ ಬಹು ಉಪಕಾರಿಯಾಗಿರುತ್ತದೆ. ಪೇರಲೆ ಎಲೆ ಬ್ಯಾಕ್ಟಿರಿಯಾ ವಿರೋಧಿ ಗುಣವನ್ನು ಹೊಂದಿದೆ. ಉರಿಯೂತ ನಿರೋಧಕ ಶಕ್ತಿ ಕೂಡ ಇದರಲ್ಲಿದೆ.ಕೂದಲು ಹಾಗೂ ಆರೋಗ್ಯ ವೃದ್ಧಿಗೆ ಇದು ಪ್ರಯೋಜನಕಾರಿ. ಈ ಎಲೆಗಳು ಚರ್ಮದ ಸಮಸ್ಯೆಗಳನ್ನು ದೂರಮಾಡಬಲ್ಲುದು. ಒಂದು ಗ್ಲಾಸ್ ನೀರನ್ನು ತೆಗೆದುಕೊಂಡು ಅದಕ್ಕೆ ಸಾಕಷ್ಟು ಸೀಬೆ ಎಲೆಗಳನ್ನು ಹಾಕಿ ಸರಿಯಾಗಿ ಕುದಿಸಿ ಕಷಾಯ ಮಾಡಿಕೊಂಡು ಕುಡಿದರೆ ಚರ್ಮದ ಸಮಸ್ಯೆ ಪರಿಹಾರವಾಗುತ್ತದೆ. ಈ ಕಷಾಯವನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಬಾಯಿ ಮುಕ್ಕಳಿಸುತ್ತ ಬಂದಲ್ಲಿ ಬಾಯಲ್ಲಿನ ಹುಣ್ಣು, ವಸಡಿನ ತೊಂದರೆ, ಹಲ್ಲಿನ ತೊಂದರೆ, ತುಟಿಗಳ ತೊಂದರೆಗಳೂ ಕಡಿಮೆಯಾಗುತ್ತದೆ. ಪೇರಲೆ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಅಂಶವು ಉಲ್ಪಣವಾಗುತ್ತದೆ.

ಇದೇ ಪೇರಲೆಹಣ್ಣುಗಳನ್ನು ತೆಗೆದುಕೊಂಡು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ಮೇಲೆ ತಿಳಿಸಿದ ಕಷಾಯಕ್ಕೆ ಹಾಕಿ, ಸ್ವಲ್ಪ ಅರಿಶಿಣ ಸೇರಿಸಿ ಕುಡಿದರೆ ಸೌಂದರ್ಯ ವೃದ್ಧಿಯಾಗುತ್ತದೆ. ಪೇರಲೆಹಣ್ಣಿನ ಸೇವನೆಯು ರಕ್ತದೊತ್ತಡವನ್ನು ನಿಯಂತ್ರಣ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ ಬಿ. ಪಿ. ಇದ್ದವರು ಇದರ ಬಳಕೆ ಹೆಚ್ಚಿಸಬೇಕು. ಮಧುಮೇಹ ರೋಗಿಗಳಿಗೂ ಸಹ ಸೀಬೆಹಣ್ಣಿನ ಸೇವನೆ ಅತ್ಯುತ್ತಮ.

ಸೀಬೆಹಣ್ಣನ್ನು ಪ್ರತಿನಿತ್ಯ ಬಳಕೆ ಮಾಡಿದಾಗ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆಗೊಳಿಸುವಂತೆ ಮಾಡಬಹುದು.

Comments are closed.