ಕರಾವಳಿ

ಕುಂದಾಪುರದ ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಭ್ರಮದ ಷಷ್ಟಿ ಮಹೋತ್ಸವ

Pinterest LinkedIn Tumblr

ಕುಂದಾಪುರ: ತಾಲೂಕಿನ ಪ್ರಸಿದ್ದ ದೇವಸ್ಥಾನವಾದ ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಬುಧವಾರ ಷಷ್ಠಿ ಮಹೋತ್ಸವವು ಶ್ರದ್ಧಾ ಭಕ್ತಿ ಪೂರ್ವಕವಾಗಿ ನಡೆಯಿತು.

ಸುಬ್ರಹ್ಮಣ್ಯ ದೇವರಿಗೆ ಮಹಾ ಪೂಜೆ, ಪಂಚಾಮೃತ, ಮಡೆ ಪ್ರದಕ್ಷಿಣೆ, ಶುದ್ಧ ಕಲಶ, ಈಶ್ವರನಿಗೆ ರುದ್ರಾಭಿಶೇಕ, ಉರುಳು ಸೇವೆ, ಮಡೆಸ್ನಾನ, ತುಲಾಭಾರ, ಆಶ್ಲೇಷ ಬಲಿ, ನಾಗಮಂಡಲ, ಹೂ-ಕಾಯಿ ಅರ್ಪಣೆ, ನಾಗಸಂಸ್ಕಾರ ಮುಂತಾದ ಸೇವೆಗಳು ನಡೆದುವು. ರಾಜ್ಯದ ಬೇರೆ ಬೇರೆ ಊರುಗಳಿಂದ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.

kundapura_guddamadi_shasti-2 kundapura_guddamadi_shasti-7 kundapura_guddamadi_shasti-4 kundapura_guddamadi_shasti-6 kundapura_guddamadi_shasti-3 kundapura_guddamadi_shasti-5 kundapura_guddamadi_shasti-1

ಪ್ರತೀ ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬೆಳ್ಳಿ ಹರಕೆ ಸೇವೆಯನ್ನು ಸಲ್ಲಿಸಲು ಬುಧವಾರ ಮುಂಜಾನೆಯಿಂದಲೇ ಭಕ್ತರು ಆಗಮಿಸಿದ್ದರಲ್ಲದೇ ಇತರೇ ವರ್ಷಕ್ಕೆ ಹೋಲಿಸಿದರೇ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಗುಡ್ಡಮ್ಮಾಡಿ ಸುಬ್ರಹ್ಮಣ್ಯ ಸನ್ನಿದಿಯಲ್ಲಿ ಷಷ್ಟಿ ಸಂದರ್ಭದಲ್ಲಿ ಉಲು‌ಋಸೇವೆ ಪದ್ಧತಿ ಚಾಲನೆಯಲ್ಲಿತ್ತು. ಸಮೀಪದ ಸೌಪರ್ಣಿಕ ನದಿಯಲ್ಲಿ ಸ್ನಾನ ಮಾಡಿ ಬಂದ ಸಹಸ್ರಾರು ಭಕ್ತರು ಶ್ರೀ ದೇವರ ಪೌಳಿಯಲ್ಲಿ ಉರುಳುಸೇವೆ ಮಾಡುವ ಮೂಲಕ ಹರಕೆ ಸಮರ್ಪಿಸಿದರು.

ಶ್ರೀ ದೇವರಿಗೆ ಬೆಳ್ಳಿ ಹರಕೆ ಹಾಗೂ ಹಣ್ಣು ಹೂಕಾಯಿ ಹರಕೆ ಸಮರ್ಪಿಸಿದರೇ ಇಷ್ಟಾರ್ಥ ನೆರವೇರುವ ನಂಬಿಕೆ ಇಲ್ಲಿಗೆ ಬರುವ ಭಕ್ತರದ್ದಾಗಿದೆ.

Comments are closed.