ಆರೋಗ್ಯ

ಶುದ್ಧ ಕೊಬ್ಬರಿ ಎಣ್ಣೆ ನಮ್ಮ ಸೌಂದರ್ಯವನ್ನು ಹೇಗೆ ಕಾಪಾಡುತ್ತದೆ ..ಬಲ್ಲಿರಾ?

Pinterest LinkedIn Tumblr

coconuut oil

 ಶೀತದಿಂದ ಬಳಲುತ್ತಿದ್ದೀರಾ? ದೇಹದಿಂದ ದುರ್ಗಂಧ ಹೊರಸೂಸುತ್ತಿದೆಯೇ? ಇಂತಹ ಅನೇಕ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರ ಅಂದರೆ ‘ಕೊಬ್ಬರಿ ಎಣ್ಣೆ’. ಸಾಮಾನ್ಯವಾಗಿ ಕೊಬ್ಬರಿ ಎಣ್ಣೆಯನ್ನು ದೈನಂದಿನ ಜೀವನದಲ್ಲಿ ಎಲ್ಲರೂ ಉಪಯೋಗಿಸುತ್ತಾರೆ. ಆದರೆ ಅದರ ಬೆಲೆ ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಹೌದು ಈ ಎಣ್ಣೆ ಕೂದಲು, ಚರ್ಮದ ಪೋಷಣೆಯನ್ನಷ್ಟೇ ಮಾಡುವುದಿಲ್ಲ ನಮ್ಮ ಇಡೀ ದೇಹದ ಆರೋಗ್ಯ ಕಾಪಾಡುತ್ತದೆ. ಇಲ್ಲಿ ಶುದ್ಧ ಕೊಬ್ಬರಿ ಎಣ್ಣೆ ಹೇಗೆ ನಮ್ಮ ಸೌಂದರ್ಯವನ್ನು ಕಾಪಾಡುತ್ತದೆ? ಇದರಿಂದ ಏನೆಲ್ಲಾ ಪ್ರಯೋಜನಗಳಿವೆ, ಎಂಬುದನ್ನು ಕೊಡಲಾಗಿದೆ.

1. ಕೆಟ್ಟ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಗುಣ ಹೊಂದಿರುವ ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ ನೆತ್ತಿಗೆ ಹಾಗೂ ಕೂದಲಿನ ಬುಡಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ತಲೆಹೊಟ್ಟಿನ ಸಮಸ್ಯೆ ಕಡಿಮೆಯಾಗಿ ಕೂದಲು ಉದುರುವುದು ನಿಲ್ಲುತ್ತದೆ.
2. ಚಿಕ್ಕ ಪುಟ್ಟ ಗಾಯಗಳ ಗುರುತು ಇದ್ದ ಜಾಗದಲ್ಲಿ ಕೊಬ್ಬರಿ ಎಣ್ಣೆ ಹಚ್ಚುವುದರಿಂದ ಗಾಯದ ಗುರುತು ಕ್ರಮೇಣ ಹೋಗುತ್ತದೆ.
3. ಕಂಕುಳಿಗೆ ಸ್ವಲ್ಪ ಕೊಬ್ಬರಿ ಎಣ್ಣೆ ಹಚ್ಚಿ ತಿಕ್ಕುವುದರಿಂದ ದೇಹದ ದುರ್ಗಂಧ ನಿವಾರಣೆಯಾಗುತ್ತದೆ.
4. ಕೆಮ್ಮು ಹಾಗೂ ಶೀತದಿಂದ ಬಳಲುತ್ತಿದ್ದರೆ ಕ್ಯಮೊಮೈಲ್ ಚಹಾಗೆ ಟೀ ಸ್ಪೂನ್ ಕೊಬ್ಬರಿ ಎಣ್ಣೆ ಸೇರಿಸಿ ಕುಡಿಯುವುದರಿಂದ ತಕ್ಷಣ ಪರಿಹಾರ ಕಂಡುಕೊಳ್ಳಬಹುದು.
5. ಮಕ್ಕಳಿಗೆ ಡೈಪರ್ ಹಾಕಿದಾಗ ಅದರಿಂದ ರಾಶಸ್ಗಳು ಉಂಟಾಗಿ ನವೆಯಾದರೆ ಆ ಜಾಗಕ್ಕೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಸವರಿ. ಹಾಗೆಯೇ ಪ್ರತಿ ಸಾರಿ ಡೈಪರ್ ಬದಲಾಯಿಸುವಾಗಲೂ ಕೊಬ್ಬರಿ ಎಣ್ಣೆಯನ್ನು ಹಚ್ಚಿ. ಇದರಿಂದ ರಾಶಸ್ ಗಳು ಉಂಟಾಗುವುದಿಲ್ಲ.
6. ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ಒಂದು ಟೇಬಲ್ ಸ್ಪೂನ್ ಕೊಬ್ಬರಿ ಎಣ್ಣೆಗೆ ಒಂದು ಟೀ ಸ್ಪೂನ್ ಜೇನುತುಪ್ಪ ಹಾಗೂ ಚಿಟಿಕೆ ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಮಲಗುವ ಮುಂಚೆ ಸೇವಿಸಿ.
7. ಕೊಬ್ಬರಿ ಎಣ್ಣೆ ಹಚ್ಚಿ 15 ನಿಮಿಷಗಳ ನಂತರ ಸ್ನಾನ ಮಾಡುವುದರಿಂದ ತ್ವಚೆ ಸುಕ್ಕುಗಟ್ಟುವುದಿಲ್ಲ, ಮೃದುವಾಗಿ ಕಾಂತಿಯುತವಾಗಿ ಹೊಳೆಯುತ್ತದೆ. ದೇಹದ ದಣಿವು ಕಡಿಮೆಯಾಗುತ್ತದೆ.

Comments are closed.